Advertisement

ಸಿದ್ದು ದಿಲ್ಲಿ ಸವಾರಿ : ಕಾಂಗ್ರೆಸ್‌ ಹಿರಿಯರಿಗೆ ಕಿರಿಕಿರಿ

12:27 AM Feb 18, 2021 | Team Udayavani |

ಬೆಂಗಳೂರು: ವಿಪಕ್ಷ ನಾಯಕ ಸಿದ್ದರಾಮಯ್ಯ ದಿಲ್ಲಿ ಯಾತ್ರೆಯ ಬೆನ್ನಲ್ಲೇ ರಾಜ್ಯದಲ್ಲಿ ಕಾಂಗ್ರೆಸ್‌ನ ಹಿರಿಯ ನಾಯಕರು “ಅಲರ್ಟ್‌’ ಆಗಿದ್ದು, ಹೈಕಮಾಂಡ್‌ ಭೇಟಿಗೆ ಸಜ್ಜಾಗುತ್ತಿದ್ದಾರೆ. ಅಹಿಂದ ಸಮಾವೇಶ ಆಯೋಜಿಸಿದರೆ ಉಂಟಾಗುವ ಗೊಂದಲಗಳ ಬಗ್ಗೆಯೂ ಹೈಕಮಾಂಡ್‌ಗೆ ಮಾಹಿತಿ ನೀಡಲಿದ್ದಾರೆ ಎನ್ನಲಾಗುತ್ತಿದೆ.

Advertisement

ಸಿದ್ದರಾಮಯ್ಯ – ರಾಹುಲ್‌ ಗಾಂಧಿ ನಡುವಿನ ಮಾತುಕತೆ ಬಗ್ಗೆ ತಲೆಕೆಡಿಸಿಕೊಂಡಿರುವ ಹಿರಿಯರು ಆ ಕುರಿತು ಮಾಹಿತಿ ಖುದ್ದು ಪಡೆಯಲು ಸದ್ಯದಲ್ಲೇ ದಿಲ್ಲಿ ಯಾತ್ರೆ ಕೈಗೊಳ್ಳಲು ತೀರ್ಮಾನಿಸಿದ್ದಾರೆ. ಜತೆಗೆ ಪಕ್ಷ ಸಂಘಟನೆಯಲ್ಲಿ ತಮ್ಮ ಪಾತ್ರದ ಬಗ್ಗೆ ಸ್ಪಷ್ಟತೆ ಪಡೆದುಕೊಳ್ಳುವುದು ಇದರ ಉದ್ದೇಶ ಎನ್ನಲಾಗಿದೆ.

ಸಿದ್ದರಾಮಯ್ಯ ದಿಲ್ಲಿ ಭೇಟಿಯ ಗುಟ್ಟು ಅರಿಯಲು ಕೆ.ಎಚ್‌. ಮುನಿಯಪ್ಪ, ಬಿ.ಕೆ. ಹರಿಪ್ರಸಾದ್‌ ಸಹಿತ ಹಿರಿಯ ನಾಯಕರು ಮುಂದಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಡಿಕೆಶಿಗೂ ಇಷ್ಟವಿಲ್ಲ
ಕಾಂಗ್ರೆಸ್‌ ಸೋಲು ಅನುಭವಿಸಿರುವ ವಿಧಾನಸಭಾ ಕ್ಷೇತ್ರಗಳಲ್ಲಿ ಕೆಪಿಸಿಸಿ ವತಿಯಿಂದ ಪಕ್ಷ ಸಂಘಟನೆ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಇಂಥ ಸಂದರ್ಭದಲ್ಲೇ ಪ್ರತ್ಯೇಕ ಯಾತ್ರೆ ಮಾಡಿದರೆ ತೊಂದರೆಯಾಗಬಹುದು ಎಂದು ಡಿ.ಕೆ. ಶಿವಕುಮಾರ್‌ ಆಪ್ತರ ಬಳಿ ಹೇಳಿಕೊಂಡಿದ್ದಾರೆ. ಪಕ್ಷದ ಬ್ಯಾನರ್‌ನಲ್ಲೇ ಸಮುದಾಯವಾರು ಸಮಾವೇಶ ನಡೆಸಬಹುದು. ಪ್ರತ್ಯೇಕ ಮಾಡಿದರೆ ಗೊಂದಲದ ಗೂಡಾಗುತ್ತದೆ ಎಂಬ ಆತಂಕವನ್ನೂ ವ್ಯಕ್ತಪಡಿಸಿದ್ದಾರೆ.

ರಾಜ್ಯಕ್ಕೆ ಆಗಮಿಸಿರುವ ಉಸ್ತುವಾರಿ ರಣದೀಪ್‌ ಸುರ್ಜೆವಾಲಾ ಜತೆಗೂ ಹಿರಿಯ ನಾಯಕರು ಚರ್ಚಿಸಲಿದ್ದಾರೆ ಎಂದು ತಿಳಿದು ಬಂದಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next