Advertisement
ಶನಿವಾರ ಎಡಿಯೂರು ಗಂಗಾಧರ ಕಲ್ಯಾಣ ಮಂಟಪದಲ್ಲಿ ವಿಧಾನ ಪರಿಷತ್ ಅಭ್ಯರ್ಥಿ ರಾಜೇಂದ್ರ ರಾಜಣ್ಣ ಪರ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.ಬಿಜೆಪಿ ಧರ್ಮ ಜಾತಿ ಆಧಾರದಲ್ಲಿ ರಾಜಕಾರಣ : ಬಿಜೆಪಿ ಅವರು ಧರ್ಮ, ಜಾತಿ ಆಧಾರದ ಮೇಲೆ ರಾಜಕಾರಣ ಮಾಡುತ್ತಾರೆ, ಅವರಿಗೆ ಯಾವುದೇ ಸಿದ್ದಾಂತ, ಕಾರ್ಯಕ್ರಮಗಳು ಇಲ್ಲ, ಸಂವಿಧಾನದ ಮೇಲೆ ನಂಬಿಕೆ ಇಲ್ಲ, ಅಂಬೇಡ್ಕರ್ ಅವರು ಕೊಟ್ಟಿರುವಂತ ಸಂವಿಧಾನ ಅಡಿಯಲ್ಲಿ ಕರ್ತವ್ಯ ನಿರ್ವಹಿಸುವುದ್ದು ಎಲ್ಲಾ ಪಕ್ಷದವ ಜವಾಬ್ದಾರಿ, ಆದರೇ ಬಿಜೆಪಿಯವರು ಸಂವಿಧಾನಕ್ಕೆ ವಿರುದ್ದವಾಗಿದ್ದರೇ, ಸಂವಿಧಾನ ಬದಲಾವಣೆ ಮಾಡುತ್ತೇವೆ ಎಂದು ಹಲವು ಭಾರಿ ಹೇಳಿದ್ದಾರೆ, ಅವರಿಗೆ ಸಮಾನತೆ ಕಲ್ಪಿಸುವಂತ ಬದ್ದತೆ ಇಲ್ಲ, ಹಾಗಾಗಿ ಅವರಿಗೆ ಸಂವಿಧಾನದಲ್ಲಿ ನಂಬಿಕೆ ಇಲ್ಲ ಎಂದು ಆರೋಪಿಸಿದರು ಅವರು ಎಲ್ಲಾ ವರ್ಗದ ಜನರನ್ನು ಒಟ್ಟಿಗೆ ಕರೆದುಕೊಂಡು ಹೋಗುವ ಪಕ್ಷವೆಂದರೇ ಅದು ಕಾಂಗ್ರೆಸ್ ಪಕ್ಷ ಮಾತ್ರ ಎಂದರು ಕಾಂಗ್ರೆಸ್ ಯಾವುದೇ ಒಂದು ಜಾತಿ, ಧರ್ಮಕ್ಕೆ ಸೀಮಿತವಾಗಿಲ್ಲ ಸಂವಿಧಾನದಡಿ ಎಲ್ಲಾ ವರ್ಗ ಜನರಿಗೂ ಸಾಮಾಜಿಕ ನ್ಯಾಯ ಸಮಾನತೆಯ ಹಕ್ಕು, ಸಮಾನತೆಯ ಅಧಿಕಾರದ ಅವಕಾಶ ನೀಡಿದೆ ಎಂದರು.
Related Articles
Advertisement
ನೈತಿಕತೆ ಇಲ್ಲ : ಉದ್ಯೋಗ ಖಾತ್ರಿ ಯೋಜನೆ, ಆಹಾರ ಭದ್ರತೆ ಖಾಯ್ದೆ ಜಾರಿಗೆ ತಂದವರು, ಡಾ.ಮನಮೋಹನ್ ಸಿಂಗ್ ಅವರು ವಾಜಪೇಯಿ, ನರೇಂದ್ರಮೋದಿ ಅಲ್ಲ, ಎನ್‌ಆರ್‌ಐಜಿ ಇಲ್ಲದಿದ್ದರೇ ಪಂಚಾಯ್ತಿಗೆ ಒಂದು ರೂ ಹಣ ಬರುತ್ತಿರಲಿಲ್ಲ ಎಂದ ಅವರು ನನ್ನ ಅಧಿಕಾರ ಅವಧಿಯಲ್ಲಿ ಉಚಿತವಾಗಿ ಏಳು ಕೆ.ಜಿ ಅಕ್ಕಿಯನ್ನು ನೀಡಿ ಬಡವರ ಹೊಟ್ಟೆ ತುಂಬಿಸುವಂತ ಕೆಲಸ ಮಾಡಿದ್ದೇ, ಆದರೆ ಬಿಜೆಪಿ ಸರ್ಕಾರ ಈಗ ಐದು ಕೆ.ಜಿ ಮಾತ್ರ ನೀಡುತ್ತಿದೆ, ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರದ ಸಾಧನೆ ಏನೇನು ಇಲ್ಲ, ಆದರೆ ಸಾಧನೆ ಮಾಡಿದ್ದೇವೆ ಎಂದು ಹೇಳುತ್ತಿರುವ ಬಿಜೆಪಿಯ ನಾಯಕರಿಗೆ ಮಾನ ಮಾರ್ಯದೆ ಇದೆಯಾ ಎಂದು ಪ್ರಶ್ನಿಸಿದರು, ಮಹಾತ್ಮಗಾಂಧೀಜಿ ಅವರು ಗ್ರಾಮ ಸ್ವರಾಜ್ಯ ಆಗಬೇಕು, ಗ್ರಾಮಗಳ ಹೊಂದದ ಹೊರತು, ದೇಶ ಅಭಿವೃದ್ದಿ ಆಗುವುದಿಲ್ಲ ಎಂದಿದ್ದರು, ಆದರೆ ಆ ಕಲ್ಪನೆಯೇ ಇಲ್ಲ ಹಾಗೂ ಕೇಂದ್ರೀಕೃತ ವ್ಯವಸ್ಥೆ ಮೇಲೆ ನಂಬಿಕೆ ಇಲ್ಲದವರು, ಗ್ರಾಮ ಸ್ವರಾಜ್ಯ ಯಾತ್ರೆ ಬಗ್ಗೆ ಮಾತನಾಡುವುದು ಅವರಿಗೆ ನೈತಿಕತೆ ಇದೆಯೇ ಎಂದು ಕಿಡಿಕಾರಿದರು,
ಬಿಜೆಪಿ ಶೇ 40 ಪರಸೆಂಟ್ ಸರ್ಕಾರ : ಬಿಜೆಪಿ ಸರ್ಕಾರವು ಭ್ರಷ್ಟಾಚಾರದಲ್ಲಿ ಮುಳುಗಿದೆ, ಕೋವಿಂಡ್ ಸಂದರ್ಭದಲ್ಲಿ ಮೆಡಿಷನ್ ಖರೀದಿಯಲ್ಲಿ ಭ್ರಷ್ಟಾಚಾರ ನಡೆದಿದೆ ಹೆಣದ ಮೇಲೆ ಲಂಚ ಪಡೆದಿದ್ದಾರೆ, ವಿಧಾನ ಸೌದದಲ್ಲಿ ಭ್ರಷ್ಟಾಚಾರ ಗಬ್ಬೆದು ನಾರುತ್ತಿದೆ, ಯಾವುದೇ ಅಭಿವೃದ್ದಿ ಕೆಲಸ ಕಾರ್ಯಗಳು ಆಗಬೇಕಾದರೇ ಶೇ.40 ರಷ್ಟು ಕಮಿಷನ್ ನೀಡದಿದ್ದರೇ ಯಾವುದೇ ಕೆಲಸಗಳು ಆಗುವುದಿಲ್ಲ ಇದು ನನ್ನ ಆರೋಪವಲ್ಲ, ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪೇಗೌಡ ಪ್ರಧಾನ ಮಂತ್ರಿಗೆ ನೀಡಿರುವ ದೂರಿನಲ್ಲಿ ಆರೋಪಿಸಿದ್ದಾರೆ, ಸರ್ಕಾರವನ್ನು ವಜಾಗೊಳಿಸುವಂತೆ ರಾಜ್ಯಪಾಲರಿಗೆ ಕಾಂಗ್ರೆಸ್ ದೂರು ನೀಡಿದೆ ಎಂದರು,
ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಗ್ಯಾರಂಟಿ : 20 ಎಂಎಲ್‌ಸಿ ಕ್ಷೇತ್ರಗಳಲ್ಲಿ ಕಾಂಗ್ರೆಸ್ 15 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಸಿದ್ದರಾಮಯ್ಯ ಬಿಜೆಪಿ ದುರಾಡಳಿತದ ವಿರುದ್ದ ಜನ ಬೇಸತ್ತಿದ್ದಾರೆ ಬದಲಾವಣೆ ಭಯಸಿದ್ದಾರೆ ಹೀಗಾಗಿ 2023 ಚುನಾವಣೆಯಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತಗಳಿಸಿ ಅಧಿಕಾರಕ್ಕೆ ಬರಲಿದೆ ಎಂದು ಹೇಳಿದರು.
ರಂಗನಾಥ್ ಅಭ್ಯರ್ಥಿ : ಸಂಸದ ಡಿ.ಕೆ.ಸುರೇಶ್ ಮಾತನಾಡಿ ನಾನು ಇರುವವರೆಗೂ ಕ್ಷೇತ್ರದಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ, ಕಾಂಗ್ರೆಸ್ ಪಕ್ಷವನ್ನು ಹಾಳು ಮಾಡಲು ಕೆಲ ವ್ಯಕ್ತಿಗಳು ವಿನಾಕಾರಣ ಗೊಂದಲ ಸೃಷ್ಟಿ ಮಾಡುವುದು ಒಳ್ಳೆ ಬೆಳವಣಿಗೆ ಅಲ್ಲ, ಮುಂದಿನ ಚುನಾವಣೆಯಲ್ಲಿ ಡಾ.ಹೆಚ್.ಡಿ.ರಂಗನಾಥ್ ಅವರೇ ಅಭ್ಯರ್ಥಿ ಆಗಲಿದ್ದಾರೆ ಈ ಸಂಬಂಧ ಕಾರ್ಯಕರ್ತರಲ್ಲಿ ಆತಂಕ ಬ್ಯಾಡ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಶಾಸಕ ಡಾ.ಹೆಚ್.ಡಿ.ರಂಗನಾಥ್, ಮಾಜಿ ಕೇಂದ್ರ ಸಚಿವ ಕೆ.ಹೆಚ್.ಮುನಿಯಪ್ಪ, ಮಾಜಿ ಸಚಿವ ಟಿ.ಬಿ.ಜಯಚಂದ್ರ, ಮಾಜಿ ಶಾಸಕ ಷಡಾಕ್ಷರಿ, ಡಿಸಿಸಿ ಅಧ್ಯಕ್ಷ ರಾಮಕೃಷ್ಣಯ್ಯ ಮಾತನಾಡಿದರು, ಅಭ್ಯರ್ಥಿ ರಾಜೇಂದ್ರರಾಜಣ್ಣ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಂಗಣ್ಣಗೌಡ, ವೆಂಕಟರಾಮು ಇದ್ದರು,