ಬಾಗಲಕೋಟೆ : ಪ್ರಧಾನಿ ಆಗಬೇಕು, ಕೇಂದ್ರ ಸಚಿವನಾಗಬೇಕು ಎಂಬ ಆಸೆ ನನಗಿಲ್ಲ. ವ್ಯಕ್ತಿ ತನ್ನ ಶಕ್ತಿಮೀರಿ ಯೋಚನೆ ಮಾಡಬಾರದು. ಯಾರು ಏನೇ ಹೇಳಿದರೂ ರಾಷ್ಟ್ರ ರಾಜಕಾರಣಕ್ಕೆ ಹೋಗಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.
ಬಾದಾಮಿಯಲ್ಲಿ ಸುದ್ದಿಗಾರರೊಂದಿಗೆ ಮಾತ ನಾಡಿದ ಅವರು, ರಾಜ್ಯದಲ್ಲಿ ಒಗ್ಗಟ್ಟಿ ನಿಂದ ಇರುವ ಕುರುಬ ಸಮಾಜ ಒಡೆಯಲು, ಸಿದ್ದರಾಮಯ್ಯ ಅವರನ್ನು ವೀಕ್ ಮಾಡಲು ಆರೆಸ್ಸೆಸ್ ಹುನ್ನಾರ ಮಾಡಿದೆ. ಅದರ ಭಾಗ ವಾಗಿ ಕುರುಬ ಸಮಾಜ ಎಸ್‌ಟಿಗೆ ಸೇರಿಸುವ ಹೋರಾಟ ಶುರುವಾಗಿದೆ. ಮಂತ್ರಿಯಾಗಿ ಇರುವವರೇ ಈ ಹೋರಾಟದ ಮುಂಚೂಣಿ ವಹಿಸಿರುವುದು ಸಮಂಜಸವಲ್ಲ ಎಂದರು.
ನನ್ನನ್ನು ಆಹ್ವಾನಿಸಿಯೇ ಹೋರಾಟ ಕ್ಕಿಳಿದಿದ್ದೇವೆ ಎಂದು ಕಾಗಿನೆಲೆ ಕನಕ ಗುರು ಪೀಠದ ನಿರಂಜನಾನಂದಪುರಿ ಸ್ವಾಮೀಜಿ ಹೇಳಿ ದ್ದಾರೆ. ಸ್ವಾಮೀಜಿ ಮೊದಲು ನನ್ನ ಬಳಿ ಬಂದಿದ್ದು ನಿಜ. ಈಶ್ವರಪ್ಪ ಒತ್ತಡ ಹಾಕಿದ್ದಾರೆಂದು ತಿಳಿಸಿದ್ದರು. ಹೋರಾಟ ನಿಮಗೆ ಬಿಟ್ಟದ್ದು, ನನ್ನ ತಕರಾರು ಇಲ್ಲ ಎಂದು ಸ್ವಾಮೀಜಿಗೆ ಹೇಳಿದ್ದೆ. ಆ ಮೇಲೆ ಎರಡೂ¾ರು ದಿನಗಳ ಬಳಿಕ ಈಶ್ವರಪ್ಪ ಹೋರಾಟಕ್ಕೆಂದು ಬಾಗಲಕೋಟೆಗೆ ಬಂದು ಆರೆಸ್ಸೆಸ್‌ನವರ ಮನೆಯಲ್ಲಿ ಊಟ ಮಾಡಿದ್ದರು. ಹೋರಾಟಕ್ಕೆ ದುಡ್ಡು ಕೊಟ್ಟಿದ್ದು ಆರೆಸ್ಸೆಸ್‌ನವರು. ಬಿ.ಎಲ್. ಸಂತೋಷ ಮತ್ತು ದತ್ತಾತ್ರೇಯ ಹೊಸಬಾಳೆ ಅವರೇ ಕುರುಬ ಸಮಾಜ ಎಸ್‌ಟಿಗೆ ಸೇರಿಸುವಂತೆ ಹೋರಾಟ ಮಾಡಲು ಪ್ರೇರೇಪಿಸಿದ್ದು. ಆ ಮೂಲಕ ಸಮಾಜ ಒಡೆಯುವ ಜತೆಗೆ ಸಿದ್ದರಾಮಯ್ಯನನ್ನು ದುರ್ಬಲಗೊಳಿಸುವ ಹುನ್ನಾರ ನಡೆಸಿದ್ದಾರೆ ಎಂದರು.
ಹಿಂದಿನ ಶಿಫಾರಸು ಜಾರಿಗೊಳಿಸಿ
ಕುರುಬ ಸಮಾಜವನ್ನು ಎಸ್‌ಟಿಗೆ ಸೇರಿಸಲು ನನ್ನ ವಿರೋಧವಿಲ್ಲ. ಈಶ್ವರಪ್ಪ ಸಚಿವರಾಗಿದ್ದಾರೆ. ಅವರೇಕೆ ಬೀದಿಗಿಳಿದು ಹೋರಾಟ ಮಾಡಬೇಕು. ಅವರು ಈ ವಿಷಯವನ್ನು ಸಚಿವ ಸಂಪುಟಕ್ಕೆ ತೆಗೆದುಕೊಂಡು ಹೋಗಿ ಮಂಜೂರು ಮಾಡಿಸಬೇಕು. ಪ್ರಧಾನಿ ನರೇಂದ್ರ ಮೋದಿ ಮೂಲಕ ಈ ಕೆಲಸ ಮಾಡಿಸಬೇಕು. ನಾನು ಸಿಎಂ ಆಗಿದ್ದಾಗ ಬೀದರ್, ಕಲಬುರಗಿ, ಯಾದಗಿರಿಯಲ್ಲಿ ಗೊಂಡಾ, ರಾಜಗೊಂಡ ಜಾತಿಯನ್ನು ಎಸ್‌ಟಿಗೆ ಸೇರಿಸಲು ಶಿಫಾರಸು ಮಾಡಿದ್ದೆ. ಅದು ಇಂದಿಗೂ ನನೆಗುದಿಗೆ ಬಿದ್ದಿದೆ. ಈಶ್ವರಪ್ಪರಿಗೆ ಸಮಾಜದ ಬಗ್ಗೆ ಕಾಳಜಿ ಇದ್ದರೆ ಮೊದಲು ಆ ಶಿಫಾರಸು ಜಾರಿಗೊಳಿಸಲಿ ಎಂದರು.