Advertisement

ದುಧನಿಯಲ್ಲಿ ಸಿದ್ಧರಾಮೇಶ್ವರ ಜಾತ್ರಾ ಮಹೋತ್ಸವ

06:50 AM Jan 15, 2019 | |

ಸೊಲ್ಲಾಪುರ: ಅಕ್ಕಲಕೋಟ ತಾಲೂಕು ದುಧನಿ ಗ್ರಾಮದಲ್ಲಿ ಸಿದ್ಧರಾಮೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಶಿವಯೋಗಿ ಸಿದ್ಧರಾಮನ ಯೋಗದಂಡಕ್ಕೆ ಸಮ್ಮತಿ ಕಟ್ಟೆ ಮೇಲೆ ಸೋಮವಾರ ಅಕ್ಷತಾ ಕಾರ್ಯಕ್ರಮ ಅದ್ಧೂರಿಯಿಂದ ನಡೆಯಿತು.

Advertisement

ಮಂದಿರದಲ್ಲಿ ಸೋಮವಾರ ಬೆಳಗ್ಗೆ ಸಿದ್ಧರಾಮನ ಮೂರ್ತಿಗೆ ರುದ್ರಾಭಿಷೇಕ ಮಾಡಲಾಯಿತು. ಗ್ರಾಮದೊಳಗಿದ್ದ ಮಠ-ಮಂದಿರದೊಳಗಿರುವ ಶಿವಲಿಂಗಗಳಿಗೆ ತೈಲಾಭಿಷೇಕ ಮಾಡಲಾಯಿತು. ಮಲ್ಲಿಕಾರ್ಜುನ ಮಂದಿರದಲ್ಲಿ ಶಾಂತಲಿಂಗ ಶ್ರೀಗಳಿಂದ ಪೂಜೆ ನಡೆದ ನಂತರ ಗ್ರಾಮದ ಮುಖ್ಯ ರಸ್ತೆಗಳಲ್ಲಿ ಐದು ನಂದಿಧ್ವಜಗಳ ವಾದ್ಯ ಸಮೇತ ಮೆರವಣಿಗೆ ನಡೆಯಿತು. ಮೆರವಣಿಗೆ ರಸ್ತೆ ಎರಡು ಬದಿ ಜನ ಹೂಗಳಿಂದ ನಂದಿಧ್ವಜಗಳ ಸ್ವಾಗತ ಮಾಡುತ್ತಿರುವ ದೃಶ್ಯ ಕಂಡು ಬಂತು. ದಾರಿಯುದ್ದಕ್ಕೂ ಬಣ್ಣ, ಬಣ್ಣದ ರಂಗೋಲಿ ಹಾಕಲಾಗಿತ್ತು.

ಮೆರವಣಿಗೆ ಮಂದಿರ ತಲುಪಿದ ನಂತರ ನಂದಿಧ್ವಜಗಳಿಂದ ಪ್ರದಕ್ಷಣೆ ಹಾಕಲಾಯಿತು. ವಿರಕ್ತ ಮಠದ ಡಾ| ಶಾಂತಲಿಂಗೇಶ್ವರ ಮಹಾಸ್ವಾಮೀಜಿ ಮಾರ್ಗದರ್ಶನದಲ್ಲಿ ಈರಯ್ಯ ಪುರಾಣಿಕ, ಚನ್ನವೀರಯ್ಯ ಪುರಾಣಿಕ ಶಿವಯೋಗಿ ಸಿದ್ಧರಾಮರಿಗೆ ಪೂಜೆ ಮತ್ತು ಆರತಿ ಮಾಡಿದ ನಂತರ ದೇವಸ್ಥಾನದ ಅಧ್ಯಕ್ಷ ಚಂದ್ರಕಾಂತ ಯಗದಿ, ಗೀರಮಲ್ಲಪ್ಪ ಸಾವಳಗಿ, ಹನುಮಂತರಾವ ಪಾಟೀಲ, ಮಲ್ಲಿನಾಥ ಪಾಟೀಲ ಅವರಿಂದ ಗಂಗಾ ಮತ್ತು ಸುಗಡಿ ಪೂಜೆ ಮಾಡಲಾಯಿತು. ತದನಂತರ ಮಾನಕರಿಗಳಿಂದ ವಚನ ಮತ್ತು ಮಂಗಲಾಷ್ಟಕ ಪಠಣ ನಂತರ ಅಕ್ಷತಾ ಕಾರ್ಯಕ್ರಮ ನಡೆಯಿತು.

ಅಕ್ಷತಾ ಸಮಾರಂಭದಲ್ಲಿ ದೇವಸ್ಥಾನ ಪಂಚ ಕಮಿಟಿ ಅಧ್ಯಕ್ಷ ಚಂದ್ರಕಾಂತ ಯಗದಿ, ಕಾಂಗ್ರೆಸ್‌ ತಾಲೂಕು ಅಧ್ಯಕ್ಷ ಶಂಕರ ಮೇತ್ರೆ, ಮಲ್ಲಿನಾಥ ಮೇತ್ರೆ, ರಾಮಚಂದ್ರಪ್ಪ ಬಿರಾಜದಾರ, ಸಿದ್ಧಾರಾಮ ಯಗದಿ, ಶಿವಾನಂದ ಮಾಡ್ಯಾಳ, ಮಲಕಾಜಪ್ಪ ಅಲ್ಲಾಪುರ, ಗೀರಮಲ್ಲಪ್ಪ ಸಾವಳಗಿ, ಮಲ್ಲಿನಾಥ ಮಾಶಾಳ, ನಿಂಗಣ್ಣ ಸೋಳಸೆ, ಲಕ್ಷ್ಮೀಪುತ್ರ ಪಾಟೀಲ, ಶ್ರೀಮಂತಪ್ಪ ಪರಮಶೆಟ್ಟಿ, ಕಾಶಿನಾಥ ಗಾಡಿ, ಶಿವಾನಂದ ಫುಲಾರಿ, ಪಿಂಟು ಬಾಹೇರಮಠ, ವಿಶ್ವನಾಥ ಗಂಗಾವತಿ, ಸಂತೋಷ ಪೋತದಾರ, ಲಕ್ಷ್ಮೀಕಾಂತ ಕಲಶೆಟ್ಟಿ, ಬಾಬಾ ಟಕ್ಕಳಕಿ, ಗುರುಶಾಂತ ಮಾಶ್ಯಾಳೆ ಪಾಲ್ಗೊಂಡಿದ್ದರು.

ಮಂದಿರದ ಮುಖ್ಯ ಜಾಗದಲ್ಲಿ ವಿವಿಧ ಮಳಿಗೆಗಳು, ತಿಂಡಿ-ತಿನಿಸುಗಳ, ಕೃಷಿ ಉಪಕರಣ, ಸೌಂದರ್ಯ ಪ್ರಸಾದನ, ಸಾಹಿತ್ಯಗಳು, ಮಿಠಾಯಿ ಅಂಗಡಿ ಹಾಕಲಾಗಿದೆ. ಜಾತ್ರೆಗೆ ಸುತ್ತಲಿನ ಮಕ್ಕಳು-ಮಹಿಳೆಯರು, ಯುವಕ-ಯುವತಿಯರು, ವಯವೃದ್ಧರು ಆಗಮಿಸಿದ್ದರು. ಪೊಲೀಸ್‌ ಉಪನೀರಿಕ್ಷಕ ಬಾಳಾಸಾಹೇಬ ನರವಟೆ, ನಾಗನಾಥ ವಾಕಿಟೋಳೆ, ದೀಪಕ ಜಾಧವ, ಘನಶ್ಯಾಮ ಗಾವಡೆ, ಗಣೇಶ ಅಂಗುಲೆ ಭದ್ರತೆ ಒದಗಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next