ಬೆಂಗಳೂರು : ರೈತರ ಪ್ರತಿಭಟನೆಯ ಟೂಲ್ಕಿಟ್ ಪ್ರಕರಣಕ್ಕೆ ಸಂಬಂಧಸಿದಂತೆ ಪರಿಸರ ಹೋರಾಟಗಾರ್ತಿ ದಿಶಾ ರವಿ ಅವರನ್ನು ದೆಹಲಿ ಪೊಲೀಸರು ಬಂಧಿಸಿದ ಹಿನ್ನಲೆಯಲ್ಲಿ ದೇಶದಾದ್ಯಂತ ಭಾರಿ ವಿರೋಧ ವ್ಯಕ್ತವಾಗಿದೆ.
ಓದಿ : ನಾಜಿ ಹುಟ್ಟಿದ ಕಾಲದಲ್ಲೇ RSS ಹುಟ್ಟಿದೆ…ರಾಮ ಮಂದಿರ ದೇಣಿಗೆ ಸಂಗ್ರಹ ಕುರಿತು HDK ಆತಂಕ
ದಿಶಾ ರವಿ ಅವರನ್ನು ರಾಜಕೀಯ ದುರುದ್ದೇಶದಿಂದ ಬಂಧಿಸಲಾಗಿದೆ ಎಂದು ರಾಜ್ಯದ ವಿಪಕ್ಷ ನಾಯಕ ಸಿದ್ದರಾಮಯ್ಯ ಖಂಡಿಸಿದ್ದಾರೆ.
“ದಿಶಾ ರವಿಯವರ ಬಂಧನವು ನರೇಂದ್ರ ಮೋದಿ ಸರ್ಕಾರದ ಪ್ರಜಾಪ್ರಭುತ್ವದಲ್ಲಿನ ಒಡಕನ್ನು ತೋರಿಸುತ್ತದೆ. ದೆಹಲಿ ಪೊಲೀಸರ ರಾಜಕೀಯ ಪ್ರೇರಿತ ನಡೆಯನ್ನು ನಾನು ಖಂಡಿಸುತ್ತೇನೆ. ರೈತರನ್ನು ಬೆಂಬಲಿಸುವುದ ದೇಶದ್ರೋಹ ಪ್ರಕರಣ ಹೇಗಾಗುತ್ತದೆ..?” ಎಂದು ಆಂಗ್ಲ ಭಾಷಾ ಪತ್ರಿಕೆಯೊಂದರ ತುಣುಕಿನೊಂದಿಗೆ ಟ್ವೀಟ್ ನಲ್ಲಿ ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.
ಇನ್ನು, “ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡಿ ಎನ್ನುವ ಪ್ರಧಾನಿ ನರೇಂದ್ರ ಮೋದಿ, ಶಿಕ್ಷಿತ ಹೆಣ್ಣು ಮಕ್ಕಳು ತಮ್ಮನ್ನು ಪ್ರಶ್ನಿಸಿದರೆ ಬಂಧಿಸಿ ಜೈಲಿಗೆ ಹಾಕುತ್ತಾರೆ.” “ದಿಶಾ ರವಿ ಬಂಧನ ಪ್ರಜೆಗೆಳ ಮೇಲಿನ ದೌರ್ಜನ್ಯ ಮಾತ್ರವಲ್ಲ, ಮಹಿಳೆಯರ ಮೇಲಿನ ದೌರ್ಜನ್ಯವೂ ಹೌದು. ನೆನಪಿರಲಿ, ನಾರಿ ಮುನಿದರೆ ಮಾರಿ” ಎಂದು ಮತ್ತೊಂದು ಟ್ವೀಟ್ ನಲ್ಲಿ ದಿಶಾ ರವಿ ಬಂಧನವನ್ನು ಸಿದ್ದರಾಮಯ್ಯ ವಿರೋಧಿಸಿದ್ದಾರೆ.
ಓದಿ : ಫಲ ನೀಡದ ಹೋರಾಟ-ಮನವಿ; ದಶಕದ ಹಿಂದೆ ಕೈ ತಪ್ಪಿದೆ ತೋಟಗಾರಿಕೆ ವಿವಿ