ಬೆಂಗಳೂರು: ಹೆಡ್ಗೆವಾರ್ ಹಾಗೂ ಗೋಲ್ವಾಲ್ಕರ್ ವಿಚಾರದಲ್ಲಿ ಸಿದ್ದರಾಮಯ್ಯ ಮಾಡಿರುವ ಟ್ವೀಟ್ ಈಗ ಬಿಜೆಪಿಯಿಂದ ಭಾರಿ ಟೀಕೆಗೆ ಒಳಗಾಗಿದೆ.
ಹೆಡ್ಗೆವಾರ್ ಹಾಗೂ ಗೋಲ್ವಾಲ್ಕರ್ 1942 ರ ಕ್ವಿಟ್ ಇಂಡಿಯಾ ಚಳವಳಿ ಸಂದರ್ಭದಲ್ಲಿ ಬ್ರಿಟಿಷರ ಜತೆ ಸೇರಿಕೊಂಡು ಸಂಚು ರೂಪಿಸಿ ಚಳವಳಿಯನ್ನು ಹತ್ತಿಕ್ಕಲು ಪ್ರಯತ್ನಿಸಿದ್ದರು ಎಂದು ಟ್ವೀಟ್ ನಲ್ಲಿ ಆರೋಪಿಸಿದ್ದರು.
ಇದಕ್ಕೆ ತೀವ್ರ ತಿರುಗೇಟು ನೀಡಿರುವ ಬಿಜೆಪಿ ಹೆಡ್ಗೆವಾರ್ ಅವರು 1940ರಲ್ಲಿ ನಾಗ್ಪುರದಲ್ಲಿ ಮರಣ ಹೊಂದಿದ್ದರು. 1942ರಲ್ಲಿ ನಡೆದ ಕ್ವಿಟ್ ಇಂಡಿಯಾ ಹೋರಾಟದ ವಿರುದ್ಧ ಅವರು ಹೇಗೆ ಸಂಚು ರೂಪಿಸಲು ಸಾಧ್ಯ? ಸಿದ್ದರಾಮಯ್ಯ ನವರ ಬುದ್ಧಿಗೆ ಮಂಕು ಕವಿದಿದೆ ಎಂದು ಬಿಜೆಪಿ ನಾಯಕರು ಟೀಕಿಸಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಿದ್ದರಾಮಯ್ಯ ಅವರ ಟ್ವೀಟ್ ಭಾರಿ ಟ್ರೋಲ್ ಗೆ ಒಳಗಾಗುತ್ತಿದೆ.