Advertisement

ಕನಸು ಹುಟ್ಟಿಸಿದ ಸಿದ್ದರಾಮಯ್ಯ ನಡೆ: ಬಾದಾಮಿಯಲ್ಲಿ ಕೈ ಕಾರ್ಯಕರ್ತರ ಒಗ್ಗಟ್ಟಿನ ಮಂತ್ರ

09:03 PM Mar 19, 2023 | Team Udayavani |

ಕುಳಗೇರಿ ಕ್ರಾಸ್: ಸಿದ್ದರಾಮಯ್ಯನವರು ಮಾ. 24ರಂದು ಕ್ಷೇತ್ರಕ್ಕೆ ಆಗಮಿಸಲಿದ್ದು ಬಾದಾಮಿ ಎಪಿಎಂಸಿ ಆವರಣದಲ್ಲಿ ಸುಮಾರು 500 ಕೋಟಿ ರೂ. ವೆಚ್ಚದ ವಿವಿಧ ಕಾಮಗಾರಿಗಳ ಉದ್ಘಾಟನೆ ಹಾಗೂ ಭೂಮಿ ಪೂಜೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಕ್ಷೇತ್ರದ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್.ಬಿ. ಯಕ್ಕಪ್ಪನವರ ಕಾರ್ಯಕರ್ತರಲ್ಲಿ ಮನವಿ ಮಾಡಿದ್ದಾರೆ.

Advertisement

ಕುಳಗೇರಿ ಗ್ರಾಮದ ಬೀರಲಿಂಗೇಶ್ವರ ಸಮುದಾಯ ಭವನದಲ್ಲಿ ಏರ್ಪಡಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದ ಸಿದ್ಧರಾಮಯ್ಯವರನ್ನ ಮತ್ತೆ ಕ್ಷೇತ್ರಕ್ಕೆ ಬರುವಂತೆ ಮನವಿ ಮಾಡೋಣ ಎಂದರು.

ಮುಖಂಡ ಹೊಳಬಸು ಶೆಟ್ಟರ ಮಾತನಾಡಿ ಈ ಹಿಂದೆ ಆಕಸ್ಮಿಕ ನಮ್ಮ ಕ್ಷೇತ್ರಕ್ಕೆ ಬಂದು ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ ಸಿದ್ಧರಾಮಯ್ಯನವರು ಪ್ರಚಾರಕ್ಕೆ ಬಾರದೇ ಇದ್ದರೂ ತಾವೆಲ್ಲ ಅವರನ್ನ ಶಾಸಕರನ್ನಾಗಿ ಆಯ್ಕೆ ಮಾಡಿದ್ದಿರಿ. ಅದರಂತೆ ರಾಜ್ಯದಲ್ಲಿಯೇ ಹೆಚ್ಚು ಅನುದಾನ ತಂದು ಕ್ಷೇತ್ರ ಅಭಿವೃದ್ಧಿ ಮಾಡಿ ಜನರ ಋಣ ತಿರಿಸುವ ಕೆಲಸ ಮಾಡಿದ್ದಾರೆ. ಈ ಬಾರಿಯೂ ಬಾದಾಮಿಯಿಂದಲೇ ಸ್ಪರ್ಧೆ ಮಾಡಿ ರಾಜ್ಯದ ಮುಖ್ಯಮಂತ್ರಿಯಾದರೆ ಕ್ಷೇತ್ರ ಇನ್ನು ಹೆಚ್ಚು ಅಭಿವೃದ್ಧಿ ಹೊಂದುತ್ತದೆ ಎಂಬ ಕನಸನ್ನ ಇಟ್ಟುಕೊಂಡಿರುವ ಕ್ಷೇತ್ರದ ಜನತೆ ಈ ಬಾರಿ
ಪಕ್ಷಾತೀತವಾಗಿ ಅವರನ್ನ ಆಯ್ಕೆ ಮಾಡಲಿದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಸಿದ್ದರಾಮಯ್ಯ ರಾಜ್ಯದ ನಾಯಕರಲ್ಲ ರಾಷ್ಟ್ರನಾಯಕರು ಸಿದ್ಧಯಾಮಯ್ಯ. ಕಾಂಗ್ರೆಸ್ ಅನ್ನುವ ಮಟ್ಟಿಗೆ ಹೈ ಕಮಾಂಡ್ ಅವರನ್ನ ಗುರುತಿಸಿದೆ. ಕಾರಣ ಮಾರ್ಚ 24ರಂದು ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿ ಎಲ್ಲರೂ ಒಗ್ಗಟ್ಟಿನಿಂದ ಸಿದ್ದರಾಮಯ್ಯನವರನ್ನ
ಮನವೊಲಿಸುವ ಕೆಲಸ ಮಾಡಿ ಈ ಬಾರಿ ಆಯ್ಕೆ ಮಾಡೋಣ ಎಂದು ಕಾರ್ಯಕರ್ತರಲ್ಲಿ ಮನವಿ ಮಾಡಿದರು.

ಎಂ ಬಿ ಹಂಗರಗಿ ಮಾತನಾಡಿ ಮಾಜಿ ಸಿಎಂ ಸಿದ್ಧರಾಮಯ್ಯನವರು ಒಂದು ಕಪ್ಪುಚುಕ್ಕಿ ಇಲ್ಲದೇ ರಾಜ್ಯ ಆಳಿದವರು. ಇಂಥ ವ್ಯಕ್ತಿ ನಮ್ಮ ಕ್ಷೇತ್ರಕ್ಕೆ ಬಂದಿದ್ದು ನಮ್ಮ ಪುಣ್ಯ. ನಾವು ಸಾಕಷ್ಟು ಬಾರಿ ಕೇಳಿದರೂ ಬಾದಾಮಿಗೆ ಬರೋದಿಲ್ಲ ಎಂದು ಹೇಳಿದ್ದಾರೆ. ಆದರೆ ನಿನ್ನೆಯ ಬೆಳವಣಿಗೆ
ನೋಡಿದರೆ ಮತ್ತೆ ನಮ್ಮ ಬಾದಾಮಿ ಕ್ಷೇತ್ರಕ್ಕೆ ಬರಬಹುದು ಎಂಬ ನಂಬಿಕೆ-ಆಶೆ ಕ್ಷೇತ್ರದ ಕಾರ್ಯಕರ್ತರಲ್ಲಿ ಹುಟ್ಟಿಕೊಂಡಿದೆ. ನಾವು ಅವರನ್ನ ಮನವಲಿಸಿ ಕ್ಷೇತ್ರಕ್ಕೆ ಬರುವಂತೆ ಮೇಲಿಂದ ಮೇಲೆ ಕೇಳಿಕೊಳ್ಳೋಣ ಎಂದರು.

Advertisement

ಮುಖಂಡ ಈರನಗೌಡ ಕರಿಗೌಡ್ರ ಮಾತನಾಡಿ ಪಕ್ಷದ ಮುಖಂಡರು ಒಗ್ಗಟ್ಟಾಗಿ ಮಾಜಿ ಸಚಿವರಾದ ಬಿ.ಬಿ. ಚಿಮ್ಮನಕಟ್ಟಿಯವರನ್ನ ಗಮನದಲ್ಲಿಟ್ಟುಕೊಂಡು ಮತ್ತೆ ಸಿದ್ದರಾಮಯ್ಯನವರನ್ನ ಕ್ಷೇತ್ರಕ್ಕೆ ಬರಮಾಡಿಕೊಂಡಿದ್ದೇ ಆದರೆ ಅವರು ಮತ್ತೆ ಶಾಸಕರಾಗಿ ರಾಜ್ಯದ
ಮುಖ್ಯಮಂತ್ರಿಯಾಗಿ ಆಯ್ಕೆ ಆಗುವುದರಲ್ಲಿ ಸಂದೆಹವೇ ಇಲ್ಲ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಮುಖಂಡ ಪಿ ಆರ್ ಗೌಡರ, ನಾಗಪ್ಪ ಅಡಪಟ್ಟಿ, ಮಹಾಂತೇಶ ಹಟ್ಟಿ, ರಾಮಣ್ಣ ಡೊಳ್ಳಿನ, ಶಶಿ ಉದಗಟ್ಟಿ, ಬಸವರಾಜ ಬ್ಯಾಹಟ್ಟಿ, ಹನಮಂತ ದೇವರಮನಿ, ರೇವಣಸಿದ್ದಪ್ಪ ನೋಟಗಾರ, ಗಿರೀಶ ಅಂಕಲಗಿ, ಮುತ್ತಪ್ಪ ಗಾಜಿ ಮಾತನಾಡಿದರು.

ಸಣ್ಣಬೀರಪ್ಪ ಪೂಜಾರ, ವೆಂಕಣ್ಣ ಹೊರಕೇರಿ, ಬಸು ಕಟ್ಟಿಕಾರ, ಶೇಖಪ್ಪ ಪವಾಡಿನಾಯ್ಕರ್, ಲಕ್ಷ್ಮಣ ದಾದನಟ್ಟಿ, ಸಣ್ಣಬೀರಪ್ಪ ದ್ಯಾವನಗೌಡ್ರ, ಡಿ ಎನ್ ಪಾಟೀಲ, ಮುದಕಣ್ಣ ಹೆರಕಲ್, ಆನಂದ ಕರಲಿಂಗನ್ನವರ ಸೇರಿದಂತೆ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next