ಕೋಲಾರ: ಕೋಲಾರದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸೋಲು ಖಚಿತ ಎಂದು ಸಂಸದ ಎಸ್.ಮುನಿಸ್ವಾಮಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೋಲಾರದಲ್ಲಿ ಸ್ಪರ್ಧಿಸುವುದಾಗಿ ಸಿದ್ದರಾಮಯ್ಯ ಹೇಳಿದ್ದಾರೆ. ಆದರೆ, ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗೂ, ಹಾಲಿ ಶಾಸಕರಿಗೂ 40 ಸಾವಿರ ಮತಗಳ ಅಂತರವಿದೆ. ಇದಲ್ಲದೆ ಕಾಂಗ್ರೆಸ್‌ನಲ್ಲಿ ರಮೇಶ್‌ಕುಮಾರ್, ಕೆ.ಎಚ್.ಮುನಿಯಪ್ಪ, ಬ್ಯಾಲಹಳ್ಳಿಗೋವಿಂದಗೌಡ, ಸಿದ್ದರಾಮಯ್ಯ, ರಾಜ್ಯದ ಒಂದು ತಂಡ ಹೀಗೆ 4-5 ಗುಂಪುಗಳಿದ್ದು, ನಾವು ಈ ಬಾರಿ ಅವರನ್ನು ಸೋಲಿಸಿ ಕಳುಹಿಸುತ್ತೇವೆ ಎಂದು ಹೇಳಿದರು.
ಕಳೆದ 70 ವರ್ಷಗಳಿಂದ ಭಾರತವನ್ನು ತೋಡೋ ಮಾಡಿದ್ದ ಕಾಂಗ್ರೆಸ್ ಈಗ ಭಾರತ್ ಜೋಡೋ, ನಾ ನಾಯಕಿ ಎಂದು ಜನರನ್ನು ವಂಚಿಸುತ್ತಿದೆ. ಎಂಎಲ್ಸಿ-ಮಂತ್ರಿ ಮಾಡುತ್ತೇವೆಂದು ಶಾಸಕ ಕೆ.ಶ್ರೀನಿವಾಸಗೌಡರಿಗೆ ಸುಳ್ಳು ಹೇಳಿದ್ದಾರೆ. ನಮ್ಮಲ್ಲಿ ಇನ್ನೂ ಅಭ್ಯರ್ಥಿಗಳ ಘೋಷಣೆ ಆಗಿಲ್ಲ, ಕೋಲಾರದಲ್ಲಿ ಇಬ್ಬರು ಅಭ್ಯರ್ಥಿ ಆಕಾಂಕ್ಷಿಗಳಿದ್ದು ಯಾರಿಗೇ ಟಿಕೆಟ್ ಸಿಕ್ಕರೂ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇವೆಂದರು.
ಸಿದ್ದು ವಿರುದ್ಧ ಸ್ಪರ್ಧೆ ಬೇಡ ಎಂದು ಸ್ವಾಮೀಜಿ ಹೇಳಿದರೂ ಕೇಳಲ್ಲ
ಕೋಲಾರ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಸ್ಪರ್ಧಿಸಬೇಡ ಎಂದು ಹೇಳಿದರೆ ಅವರ ಮಾತು ಕೇಳಲು ನಾನೇನು ಸನ್ಯಾಸಿಯಲ್ಲ, ಕಾಗಿನೆಲೆ ಸ್ವಾಮೀಜಿಯಾಗಲಿ, ಕುರುಬ ಸಮಾಜದ ಮುಖಂಡರಾಗಲಿ ಈ ವಿಷಯದಲ್ಲಿ ನನ್ನ ಹತ್ತಿರಕ್ಕೂ ಸುಳಿಯಲು ಬಿಡೋದಿಲ್ಲ ಎಂದು ಮಾಜಿ ಸಚಿವ ಆರ್.ವರ್ತೂರು ಪ್ರಕಾಶ್ ತಿಳಿಸಿದರು.
Related Articles
ನಗರದ ಪತ್ರಕರ್ತರ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರನ್ನು ಕೋಲಾರಕ್ಕೆ ಬಾ ಅಂತ ನಾನೇನು ಕರೆದಿಲ್ಲ. ಅವರಾಗಿ ಅವರು ಬಂದು ಇಲ್ಲಿ ಸ್ಪರ್ಧಿಸುತ್ತಿದ್ದಾರೆ. ನಾನು ಅವರ ವಿರುದ್ದ ತೊಡೆ ತಟ್ಟುತ್ತಿದ್ದೇನೆ, ನನ್ನ ಗೆಲುವನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ, ಮತದಾರರು ನನ್ನೊಂದಿಗಿದ್ದಾರೆ ಎಂದು ತಿಳಿಸಿದರು.
ಕೆಲವು ಸಾಮಾಜಿಕ ಜಾಲತಾಣಗಳಲ್ಲಿ ನನಗೆ ಸ್ವಾಮೀಜಿಗಳು ಮುಖಂಡರು ಫೋನ್ ಕರೆ ಮಾಡುವ ಮೂಲಕ ಹಾಗೂ ಭೆ„ರತಿ ಸುರೇಶ್ ಮನೆಗೆ ಬಂದು ಸಿದ್ದರಾಮಯ್ಯ ವಿರುದ್ಧ ಸ್ಪರ್ಧಿಸಬೇಡ ಎಂದೆಲ್ಲಾ ಹೇಳುತ್ತಿದ್ದಾರೆ. ವರ್ತೂರ್ ಪ್ರಕಾಶ್ ತಟಸ್ಥವಾಗುತ್ತಿದ್ದಾರೆ ಎಂದು ಸುಳ್ಳು ಸುದ್ದಿಗಳು ಹಬ್ಬುತ್ತಿದೆ. ನಾನು ಸಿದ್ದರಾಮಯ್ಯ ವಿರುದ್ಧ ಸ್ಪರ್ಧಿಸುತ್ತೇನೆ ಇದರಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.