ಹುಬ್ಬಳ್ಳಿ: ವೀರಶೈವ, ಲಿಂಗಾಯತ ಸ್ವತಂತ್ರ ಧರ್ಮ ವಿಷಯದಲ್ಲಿ ಸ್ವಾಮೀಜಿಗಳು ಹಾಗೂ ಜನರು ಕಚ್ಚಾಡುತ್ತಿರುವುದಕ್ಕೆ ಸಿಎಂ ಸಿದ್ದರಾಮಯ್ಯ ಕುತಂತ್ರ ರಾಜಕಾರಣವೇ ಕಾರಣ ಎಂದು ಪ್ರತಿ ಪಕ್ಷ ನಾಯಕ ಜಗದೀಶ ಶೆಟ್ಟರ್ ಆರೋಪಿಸಿದರು. ಸಿದ್ದರಾಮಯ್ಯ ವೀರಶೈವರಲ್ಲಿ ಗೊಂದಲ ಮೂಡಿಸುತ್ತಿದ್ದಾರೆ. ಸ್ವತಂತ್ರ ಧರ್ಮ ಮಾಡಲು ರಾಜ್ಯ ಸರ್ಕಾರಕ್ಕೆ ಏನು ಅಧಿಕಾರವಿದೆ ಎಂಬುದನ್ನು ಸಿಎಂ ಸ್ಪಷ್ಟಪಡಿಸಲಿ. ಸ್ವತಂತ್ರ ಧರ್ಮ ಮಾಡುವುದಕ್ಕೆ ಸಂವಿಧಾನದಲ್ಲಿ ಮಾನ್ಯತೆ ಇದೆಯೇ? ಎಂಬುದು ಸ್ಪಷ್ಟವಾಗಬೇಕು. ಕಾನೂನು ತಜ್ಞರ ಸಮಿತಿ ರಚನೆ ಮಾಡಿ ಗೊಂದಲ
ಬಗೆಹರಿಸಲು ರಾಜ್ಯ ಸರ್ಕಾರ ಮುಂದಾಗಬೇಕು. ಸ್ವಾಮಿಗಳು ಪರಸ್ಪರ ಕಚ್ಚಾಡುವುದನ್ನು ಬಿಟ್ಟು ಶಾಂತವಾಗಿ ವಿಷಯ
ಪರಾಮರ್ಶಿಸಬೇಕು. ಸಾರ್ವಜ ನಿಕರೊಂದಿಗೆ ಚರ್ಚಿಸಬೇಕು ಎಂದು ಶೆಟ್ಟರ್ ತಿಳಿಸಿದರು.
ವೀರಶೈವ ಮಹಾಸಭಾ ಸಭೆಯಲ್ಲಿ ತೀರ್ಮಾನವಾದರೂ ಅದನ್ನು ಸರ್ವಸಮ್ಮತ ಎಂದು ಹೇಳಲಾಗುವುದಿಲ್ಲ. ಅದನ್ನೂ
ವಿರೋಧಿಸುವವರಿದ್ದಾರೆ. ಆದ್ದರಿಂದ ತರಾತುರಿಯಲ್ಲಿ ಯಾವುದೇ ನಿರ್ಣಯ ತೆಗೆದುಕೊಳ್ಳುವುದು ಸೂಕ್ತವಲ್ಲ ಎಂದು
ಅವರು ಅಭಿಪ್ರಾಯಪಟ್ಟರು.