Advertisement

ಸಿದ್ರಾಮಣ್ಣೋರ್‌ ಮ್ಯಾಗೆ ನಿಮ್ದುಕೇ ಪ್ಯಾರ್‌ಗೆ ಆಗ್‌ಬುಟ್ಟೈತಾ ಜಮೀರ್‌ಬೈ…

02:54 PM Jul 31, 2022 | Team Udayavani |

ಅಮಾಸೆ: ನಮ್‌ಸ್ಕಾರ ಸಾ…

Advertisement

ಚೇರ್ಮನ್ರು: ಏನ್ಲಾ ಅಮಾಸೆ ಎಲ್‌ಗ್ಲಾ ಒಂಟೆ

ಅಮಾಸೆ: ಹೌದೋ ಹುಲಿಯಾ ಸಿದ್ರಾಮಣ್ಣೋರು ಬರ್ತಡೇ ಪಾಲ್ಟಿ ಐತೆ ಸಾ ಅದ್ಕೆ ಒಂಟೀವ್ನಿ

ಚೇರ್ಮನ್ರು: ನಿನ್‌ಗಾರ್ಲಾ ಪಾಲ್ಟಿ ಕೊಡ್ತಾರೆ

ಅಮಾಸೆ: ಎಲ್ರೂಕೂ ಮಾರ್ನಿಗ್‌ ಬ್ರೇಕ್‌ಪಾಸ್ಟ್‌ ಬೆಣ್ಣೆದೋಸೆ, ಆಫ್ಟರ್‌ನೂನ್‌ ಲಂಚ್‌ ಬೇಳೇಬಾತ್‌ ಅಂತಾ ಹೇಳವ್ರೆ. ಜತ್ಗೆ ನಾವೇ ಒಸಿ ಮಿಕ್ಸಿಂಗ್‌ ತಕ್ಕಂಡ್‌ ಹೋದ್ರೆ ಅದೇ ಪಾಲ್ಟಿ

Advertisement

ಚೇರ್ಮನ್ರು: ಯಾರ್ಯಾರ್‌ ಬತ್ತಾವ್ರ್ ಲಾ

ಅಮಾಸೆ: ರಾಹುಲ್‌ ಅಣ್ಣೋರು, ಯೇಣುಗೋಪಾಲ್‌, ಸುರ್ಜೇವಾಲಾ ಸಾಹೇಬ್ರು ಬತ್ತಾರಂತೆ

ಚೇರ್ಮನ್ರು: ಡಿ.ಕೆ.ಸಿವ್‌ಕುಮಾರ್‌ ಅವ್ರು ಬೇಸ್ರ ಆಗವ್ರಂತೆ

ಅಮಾಸೆ: ಹೌದೇಳಿ, ಜಮೀರಣ್ಣೋರು ನಮ್ದೂಕೆ ಏನೇ ಆದ್ರೂ ಸಿದ್ರಾಮಣ್ಣೋರೇ ಸಿಎಂ ಅಂತಾ ಟಾಂಟಾಂ ಹೊಡೀತಾವ್ರಂತೆ. ಅದ್ಕೆ ನಾವೂ ರೇಸ್‌ನಾಗ್‌ ಇದ್ದೀವಿ ಅಂತಾ ಸ್ಟ್ರಾಂಗ್‌ ಮೆಸೇಜ್‌ ಕೊಟ್ರೆ, ನಮ್ದು ಪಾಪುಲೇಷನ್‌, ಪಾಪುಲಾರಿಟಿ ಎಲ್ಡೂ ಐತೆ ನಾವೂ ಸಿಎಂ ಕೇಳ್ಬೋದು ಅಂತಾ ಮಾಂಜಾ ಕೊಟ್ರಂತೆ. ಅದ್ಕೆ ಸಿವ್‌ ಕುಮಾರಣ್ಣೋರು ರಾಂಗ್‌ ಆಗವ್ರಂತೆ

ಚೇರ್ಮನ್ರು: ಸಿದ್ರಾಮಣ್ಣೋರು ಏನಂದ್ರಂತೆ

ಅಮಾಸೆ: ಯೇ ಜಮೀರ್‌ ನಿನ್‌ ಆಸೇನಾ ಹೊಟ್ಟೇಗಿಟ್ಕು ಓಪನ್‌ ಮಾಡ್ಬೇಡಾ ರೈವಲ್ಸ್‌ ಜಾಸ್ತಿ ಆಗೋಬಿಟ್ಟವ್ರೆ, ಇನ್ಮೆಕೆ ಅಂಗೆಲ್ಲಾ ಹೇಳ್ಬೇಡ ಬುಡು ಅಂತಾ ಹೇಳವ್ರಂತೆ

ಚೇರ್ಮನ್ರು: ಸುರ್ಜೇವಾಲಾ ಅವ್ರು ಲೆಟರ್‌ ಬಾಂಬ್‌ ಹಾಕಿದ್ರಂತೆ

ಅಮಾಸೆ: ಅದ್ಕೆ ಉಲ್ಟಾ ಬಾಂಬ್‌ ಜಮೀರಣ್ಣೋರೆ ಪ್ರಸಿಡೆಂಟ್‌ ಮ್ಯಾಗೆ ಹಾಕ್‌ ಬುಟ್ಟವ್ರೆ. ನಮ್ದೂಕೆ ಲೆವೆಲ್‌ ಗಿವೆಲ್‌ ಅಂತೆಲ್ಲಾ ಮಾತಾಡ್ತಾರೆ, ನಮ್‌ ಕಮ್ಯುನಿಟಿ ಬೇಕೋ ಬೇಡ್ವೋ ಅಂತಾ ಕೇಳುದ್ರಂತೆ. ಅದ್ಕೆ ಸುರ್ಜೇವಾಲಾ ಅವ್ರು ಅಂಗೆಲ್ಲಾ ಮಾಡ್‌ಬ್ಯಾಡಿ ಈಗ್ಲೆ ಸಿಎಂ ಇಬ್ರಾಹಿಂ ತೆನೆ ಹಿಡಿದವ್ರೆ ಆಮ್ಯಾಕೆ ಕಷ್ಟಾ ಆಗೋತದೆ ಅಂತಾ ತಂಡಾ ಮಾಡಿದ್ರಂತೆ.

ಚೇರ್ಮನ್ರು: ಅದೇನ್ಲಾ ಕೋಲಾರ್‌ದಾಗೆ ರಾಜ್‌ಗುರು ಪ್ರಸ್‌ನೋರ್ಗೆ ಹೊಡೆದ್ರಂತೆ

ಅಮಾಸೆ: ಹೌದೇಳಿ, ತಲ್ಮಾರು ಮಾಡ್ಕೊಂಡೀವಿ ಅಂತ ತೋರ್ಸಿದ್ರಲ್ಲಾ ಅದೇ ಕ್ವಾಪಾ ಮಡಿಕ್ಕಂಡು ಹೊಡೆದವ್ರೆ. ಕೆಎಚ್‌ ಮುನಿಯಪ್ಪಣ್ಣೋರ್‌ ಗ್ಯಾಂಗ್‌ ಫ‌ುಲ್‌ ರಾಂಗ್‌ ಆಗೈತೆ.

ಚೇರ್ಮನ್ರು: ಕುಮಾರಣ್ಣೋರು ಏನಂತಾರ್ಲಾ

ಅಮಾಸೆ: ಕುಮಾರಣ್ಣೋರು ಸಿದ್ರಾಮೋತ್ಸವನಾರಾ ಮಾಡ್ಕಳಿ, ಏನಾರಾ ಮಾಡ್ಕಳಿ ನಮ್ದೇ ಕಪ್‌. ಕೈ-ಕಮ್ಲಗಿಂತ ಜಾಸ್ತಿ ಗೆಲ್ತೀವಿ ಅಂತ ಬಸ್ತೀಮೆ ಸವಾಲ್‌ ಹಾಕವ್ರೆ.

ಚೇರ್ಮನ್ರು: ಬಸಣ್ಣೋರು ಯಾಕ್ಲಾ ಡಲ್‌ ಆಗವ್ರೆ

ಅಮಾಸೆ: ಒನ್‌ ಇಯರ್‌ ಅಚೀವ್‌ಮೆಂಟ್‌ ಫೆಸ್ಟಿವಲ್‌ ಮಾಡ್ಬೇಕು ಅಂತಾ ಇದ್ರು. ರಾಜಾಹುಲಿ ತ್ರೀ ಇಯರ್‌ ಫೆಸ್ಟಿವಲ್‌ ಮಾಡ್ರೀ ನಂದೂ ಸೇರ್ಸ್ ಕಳಿ ಇಲ್ಲಾಂದ್ರೆ ಸರೋಗಲ್ಲಾ ಅಂತಾ ಆವಾಜ್‌ ಹಾಕಿದ್ರಂತೆ, ನಡ್ಡಾಜೀಗೂ ಕಂಪ್ಲೇಟ್‌ ಕೊಟ್ಟಿದ್ರಂತೆ. ಆಯ್ತು ಬುಡಿ ತ್ರೀ ಇಯರ್‌ ನಾಗೆ ಒನ್‌ ಇಯರ್‌ ಅಂತಾ ಲೋಗೋ ಎಲ್ಲಾ ಮಾಡ್ಸಿದ್ರಂತೆ, ಅತ್ಲಾಗೆ ಕುಡ್ಲಾನಾಗೆ ಮರ್ಡರ್‌ ಆಗೋದ್ಮೇಕೆ ಎಲ್ಡೂ ಉಲ್ಟಾ ಪಲ್ಟಾ ಆಗೋಯ್ತು, ಕಟೀಲಣ್ಣೋರ್‌ ಕಾರ್‌ ನೇ ಶೇಕ್‌ ಆಬ್ದುಲ್ಲಾ ಮಾಡ್‌ಬುಟ್ರಾ ಅದ್ಕೆ ನೋ ಫೆಸ್ಟಿವಲ್‌ ಓನ್ಲಿ ಸ್ಟೇಟ್‌ಮೆಂಟ್‌ ಅಮತಾ ಸುಮ್ಕಾದ್ರು. ಅದ್ಕೆ ಶ್ಯಾನೇ ಬೇಜಾರಾಗವ್ರೆ

ಚೇರ್ಮನ್ರು: ಡಾಕ್ಟ್ರ್ರು ಸುಧಾಕರ್‌ ಅವ್ರು ಫ‌ುಲ್‌ ಅರೇಂಜ್‌ ಮಾಡಿದ್ರಂತೆ

ಅಮಾಸೆ: ಹೌದೇಳಿ, ಟು ಲ್ಯಾಕ್‌ ಪೀಪಲ್ಸ್‌ಗೆ ಖಾನಾ ರೆಡಿ ಮಾಡ್ಸಿದ್ರು. ಸಿದ್ರಾಮಣ್ಣೋರ್‌ ಪ್ರೋಗ್ರಾಂಗೆ ಟಕ್ಕರ್‌, ನೋಡ್ತಾ ಇರ್ರಿ ನಮ್‌ ಹವಾ ಅಂತಾ ಹೇಳ್ತಿದ್ರು. ಆದ್ರೆ ಎಲ್ವೂ ದಬ್ಟಾಕೋತು.

ಚೇರ್ಮನ್ರು: ಈಸ್ವರಪ್ನೋರು ಎಲ್ಲೂ ಕಾಣ್‌ಸ್ತಿಲ್ವಾ

ಅಮಾಸೆ: ಅವ್ರು ಸಿದ್ರಾಮಣ್ಣೋರ್ಗೆ ಅಮ್ರುಕೊಂಡವ್ರೆ ಎಲೆಕ್ಸನ್‌ ನಿಲ್ಲೋಕೆ ಊರ್‌ ಹುಡುಕ್ತಾವ್ರೆ, ಅವ್ರಿಗೆ ಎಲ್ಲೂ ಬೇಸ್‌ ಇಲ್ಲಾ ಆಂತಾ ಹೇಳ್ತಾವ್ರೆ. ಅದ್ಕೆ ಸಿದ್ರಾಮಣ್ಣೋರು, ಪೂರ್‌ ಫೆಲೋ ಮಿನಿಸ್ಟ್ರೆ ಕಳ್ಕಂಡ್‌ ಮ್ಯಾಗೆ ಒಸಿ ವ್ಯತ್ಯಾಸ ಆಗೋಗದೆ ಬುಡ್ರಿ. ಎಷ್ಟಾದ್ರೂ ಮೈ ಓಲ್ಡ್‌ ಕೈಮಾ ಫ್ರೆಂಡ್‌ ಅಂತಾ ಸುಮ್ಕಾದ್ರಂತೆ.

ಚೇರ್ಮನ್ರು: ಈಸ್ವರಪ್ನೊರು ನಮ್‌ ವರ್ಕರ್ ಇಮ್ಮೆಚೂರ್‌ ಅಂದ್ರಂತೆ ಹೌದೇನ್ಲಾ

ಅಮಾಸೆ: ಹೌದೇಳಿ, ಸಿದ್ರಾಮಣ್ಣೋರು ಹೇಳ್ದಂಗೆ ಅವ್ರ್ ಲಂಗ್‌ಗೂ ಟಂಗ್‌ ಗೂ ಯತ್ವಾಸ ಪಿರಾಬ್ಲಿಮ್ಮು.

ಚೇರ್ಮನ್ರು: ಬುದ್ವಂತ ಬಸಣ್ಣೋರು ಚೇಂಜ್‌ ಆಯ್ತಾರೆ ಅಂತಾ ಪಸರ್‌ ಐತೆ ದಿಟ್‌ವೇನ್ಲಾ

ಅಮಾಸೆ: ಅಂಗಂತಾ ಒನ್‌ ಇಯರ್‌ ನಿಂದಾ ಪುಂಗ್ತಾವ್ರೆ. ಆದ್ರೂ ನೋಡ್ತಾ ಇರಿ ಅಂತಾನೂ ಹೇಳ್ತಾವ್ರೆ. ಆದ್ರೆ, ಮಿನಿಸ್ಟ್ರೆ ಪೋರ್ಟ್‌ ಫೋಲಿಯೋ ಚೇಂಜ್‌ ಆಯ್ತದಂತೆ. ಸುನಿಲಣ್ಣೋರು ಇಲ್ವೇ ಸೀಟಿ ರವಿ ಅಣ್ಣೋರು ಪಾಲ್ಟಿ ಪ್ರಸಿಡೆಂಟ್‌ ಆಯ್ತಾರೆ, ಲಿಂಬಾವಳಿ ಅಣ್ಣೋರು, ಸೋಬಕ್ಕೋರು ಹೆಸ್ರು ಪ್ರಸಿಡೆಂಟ್‌ ರೇಸ್‌ ನಾಗೆ ಐತೆ ಅಂತಾವ್ರೆ. ಸುನಿಲಣ್ಣೋರ್ಗೆ ಬೋ ಚಾನ್ಸ್‌ ಐತೆ ಪ್ರಸಿಡೆಂಟ್‌ ಇಲ್ದಿದ್ರೆ ಹೋಂ ಕೊಡ್ತಾರಂತೆ. ನೋಡುಮಾ ಏನೇನಾಯ್ತುದೋ. ಗಡಂಗ್‌ ಹೋಗ್‌ ಬುಟ್ಟು ಚಾಕ್ನಾ ಜತ್ಗೆ ವಸಿ ಪೋಟ್ಕಂಡು ದಾವಣ್‌ಗೆರೆ ಬಸ್‌ ಹತ್‌ಕಂಡ್‌ ರಯ್ಯ ರಯ್ನಾ ಬತ್ತೀನಿ ಸಾ…

ಎಸ್‌.ಲಕ್ಷ್ಮಿನಾರಾಯಣ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next