ಕುರುಗೋಡು:ಸಿದ್ದರಾಮಯ್ಯ ರಾಜ್ಯದ ಯಾವುದೇ ಕ್ಷೇತ್ರದಿಂದ ಸ್ಪರ್ಧೆ ಮಾಡಿದರು ಗೆಲ್ಲುತ್ತಾರೆ ಎಂದು ಶಾಸಕ ಜೆ. ಎನ್. ಗಣೇಶ್ ಹೇಳಿದರು.
ಸಮೀಪದ ಎಮ್ಮಿಗನೂರು ಗ್ರಾಮದಲ್ಲಿ 2022-23 ನೇ ಸಾಲಿನ ಮುಖ್ಯಮಂತ್ರಿ ವಿಶೇಷ ಯೋಜನೆ ಅಡಿಯಲ್ಲಿ 91 ಲಕ್ಷ ವೆಚ್ಚದಲ್ಲಿ ಸಿ.ಸಿ ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರೆವೇರಿಸಿ ಮಾತನಾಡಿದ ಅವರು. ಮುಂಬರುವ ವಿಧಾನಸಭಾ ಚುನಾವಣೆ ಯಲ್ಲಿ ಅತಿ ಹೆಚ್ಚು ಕಾಂಗ್ರೆಸ್ ಸ್ಥಾನಗಳು ಲಭಿಸಲಿದ್ದು, ಜೊತೆಗೆ ಸರ್ಕಾರ ಕೂಡ ರಚನೆ ಆಗುವುದರಲ್ಲಿ ಯಾವುದೇ ಅನುಮಾನ ವಿಲ್ಲ ಎಂದರು.
ಇವತ್ತು ಬಿಜೆಪಿ ಸರಕಾರ ಸಮಾಜವನ್ನು ಒಡೆಯುವಂತ ಕೆಲಸ ಮಾಡುತ್ತಿದೆ. ಎಲ್ಲಂದರಲ್ಲಿ ಕೋಮು ಗಲಭೆಗಳು, ಅತ್ಯಾಚಾರ ನಡೆಯುತ್ತಿವೆ ಇದನ್ನೆಲ್ಲಾ ರಾಜ್ಯದ ಜನತೆ ಗಮನಿಸುತ್ತಿದೆ ಮುಂದಿನ ಚುನಾವಣೆ ಯಲ್ಲಿ ಅವರಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.
ಜೊತೆಗೆ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಬದ್ದವಿದ್ದು, ಹಂತ ಹಂತವಾಗಿ ಅಭಿವೃದ್ಧಿ ಕೆಲಸಗಳಿಗೆ ಚಾಲನೆ ನೀಡಲಾಗುತ್ತಿದೆ. ಕೆಲ ಗ್ರಾಮಗಳಲ್ಲಿ ಇನ್ನೂ ಸ್ವಲ್ಪ ರಸ್ತೆಗಳನ್ನು ಮುಂದಿನ ದಿನಗಳಲ್ಲಿ ನಿರ್ಮಿಸುವ ಉದ್ದೇಶ ಹೊಂದಲಾಗಿದೆ
Related Articles
ಈಗಾಗಲೇ ಎಮ್ಮಿಗನೂರು ಗ್ರಾಮದಿಂದ ಹಾವಿನಹಾಳ್ ಗ್ರಾಮದ ರಸ್ತೆ 99 ಲಕ್ಷ ವೆಚ್ಚದಲ್ಲಿ ನಿರ್ಮಾಣ ಗೊಳ್ಳುತ್ತಿದೆ.
ಕೋಳೂರು ಗ್ರಾಮದಲ್ಲಿ 90 ಲಕ್ಷ ವೆಚ್ಚದ ಸರ್ಕಾರಿ ಪ್ರೌಢ ಶಾಲೆ ವರೆಗೆ ಸಿ.ಸಿ ರಸ್ತೆ ಮತ್ತು ಚರಂಡಿ ನಿರ್ಮಾಣ, ಕೋರ್ಲ್ಲಗುಂದಿ ಗ್ರಾಮದಲ್ಲಿ 91 ಲಕ್ಷ ವೆಚ್ಚದಲ್ಲಿ ಕೋರ್ಲ್ಲಗುಂದಿ ಗ್ರಾಮದಿಂದ ಜಾಲಿಬೆಂಚಿ ವರೆಗೆ ಸಿ.ಸಿ ರಸ್ತೆ ಮತ್ತು ಚರಂಡಿ ನಿರ್ಮಾಣ,
ಮದಿರೆ ಗ್ರಾಮದಲ್ಲಿ 99 ಲಕ್ಷ ವೆಚ್ಚದಲ್ಲಿ ಗ್ರಾಮದಿಂದ ಸೋಮಸಮುದ್ರ ವರೆಗೆ ಸಿ.ಸಿ ರಸ್ತೆ ಮತ್ತು ಚರಂಡಿ ನಿರ್ಮಾಣ, ಅಲ್ಲದೆ ಸೋಮಸಮುದ್ರ ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡ ಕಾಮಗಾರಿಗೆ ಶಾಸಕ ಜೆ.ಎನ್.ಗಣೇಶ್ ಅವರು ಭೂಮಿ ಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಪಕ್ಷದ ಮುಖಂಡರು, ಕಾರ್ಯಕರ್ತರು, ಗ್ರಾಮದ ಮುಖಂಡರು, ಸೇರಿದಂತೆ ಇತರರು ಇದ್ದರು.