ಬೆಂಗಳೂರು : ಪಾದಯಾತ್ರೆ ಬಗ್ಗೆ ಹೈಕೋರ್ಟ್ ತರಾಟೆ ತೆಗೆದುಕೊಳ್ಳುತ್ತಿದ್ದಂತೆ ಕಾಂಗ್ರೆಸ್ ಪಾಳಯದಲ್ಲಿ ತಳಮಳ ಆರಂಭವಾಗಿದ್ದು, ವಿಪಕ್ಷ ನಾಯಕ ಸಿದ್ದರಾಮಯ್ಯ ಇಂದಿನ ಪಾದಯಾತ್ರೆ ಅರ್ಧಕ್ಕೆ ಮೊಟಕುಗೊಳಿಸಿ ಬೆಂಗಳೂರಿಗೆ ವಾಪಾಸ್ ಆಗಿದ್ದಾರೆ.
ಇನ್ನೊಂದೆಡೆ ಕಾಂಗ್ರೆಸ್ ಪಾದಯಾತ್ರೆ ನಿಯಂತ್ರಣಕ್ಕೆ ಸರಕಾರವೂ ಸಿದ್ದತೆ ನಡೆಸಿದ್ದು, ಗೃಹ ಸಚಿವ ಆರಗ ಜ್ಞಾನೇಂದ್ರ ನೇತೃತ್ವದಲ್ಲಿ ತುರ್ತು ಸಭೆ ಆರಂಭವಾಗಿದೆ. ಹೀಗಾಗಿ ಪಾದಯಾತ್ರೆ ಫೈಟ್ ಮೆಗಾ ಟ್ವಿಸ್ಟ್ ತೆಗೆದುಕೊಳ್ಳುವ ಸಾಧ್ಯತೆ ಇದೆ.
ಹೈಕೋರ್ಟ್ ಚಾಟಿ ಏಟು ನೀಡಿದ ಬೆನ್ನಲ್ಲೆ ಕೆಪಿಸಿಸಿ ಕಾನೂನು ವಿಭಾಗದ ಮುಖ್ಯಸ್ಥ ಪೊನ್ನಣ್ಣ ಜೊತೆ ಸಿದ್ದರಾಮಯ್ಯ ಹಾಗೂ ಡಿಕೆ.ಶಿವಕುಮಾರ್ ಚರ್ಚೆ ನಡೆಸಿದರು.
ಹೈಕೋರ್ಟ್ ನಲ್ಲಿ ಬೆಳವಣಿಗೆ ಮಾಹಿತಿ ಕೊಟ್ಟ ಪೊನ್ನಣ್ಣ. ಪೊನ್ನಣ್ಣ ಜೊತೆ ಮಾತುಕತೆ ಬಳಿಕ ಸಿದ್ದರಾಮಯ್ಯ ಬೆಂಗಳೂರಿಗೆ ವಾಪಸ್ ಆಗಿದ್ದಾರೆ. ಬೆನ್ನು ನೋವಿನಕಾರಣ ನೀಡಿ ಅವರು ವಾಪಾಸ್ ಆಗಿದ್ದಾರೆ.
ಜ ೧೪ ರೊಳಗೆ ಸರಕಾರ ಹೈಕೋರ್ಟ್ ಗೆ ವರದಿ ನೀಡಬೇಕಿರುವುದರಿಂದ ಅಡ್ವೊಕೇಟ್ ಜನರಲ್ ಜತೆಗೆ ಗೃಹ ಸಚಿವ ಜ್ಞಾನೇಂದ್ರ ಚರ್ಚೆ ನಡೆಸಿದ್ದು, ಇಂದು ಸಂಜೆ ಮುಖ್ಯಮಂತ್ರಿ ಬೊಮ್ಮಾಯಿ ಅವರಿಗೆ ಮಾಹಿತಿ ನೀಡಲಿದ್ದಾರೆ.