ಬೆಂಗಳೂರು: ಮಾಜಿ ಸಚಿವ ಜಮೀರ್ ಅಹಮದ್ ಪುತ್ರ ಝೈದ್‌ಖಾನ್ ನಟನೆಯ ಬನಾರಸ್ ಚಿತ್ರವನ್ನು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವೀಕ್ಷಿಸಿ ಮೆಚ್ಚುಗೆ ವ್ಯಕ್ತ ಪಡಿಸಿದರು.
ನಂತರ ಮಾತನಾಡಿದ ಅವರು, ”ನವಿರಾದ ಪ್ರೇಮ, ಸುಮಧುರ ಗೀತೆ, ಕಾಶಿಯ ಅದ್ಭುತ ಸೌಂದರ್ಯ ಎಲ್ಲವನ್ನೂ ಒಳಗೊಂಡು ಚಿತ್ರ ಸೊಗಸಾಗಿ ಮೂಡಿ ಬಂದಿದೆ. ಕುಟುಂಬ ಸಮೇತ ವೀಕ್ಷಿಸುವ ಚಿತ್ರ ಇದಾಗಿದೆ” ಎಂದು ಶ್ಲಾಘಿಸಿದರು.
ನನ್ನ ಪುತ್ರ ಝೈದ್‌ಖಾನ್ ಅಭಿಯನಯದ ಬನಾರಸ್ ಚಿತ್ರ ವೀಕ್ಷಿಸಿ ಬೆನ್ನುತಟ್ಟಿ ಶುಭ ಹಾರೈಸಿದ ಸಿದ್ದರಾಮಯ್ಯ ಅವರಿಗೆ ಧನ್ಯವಾದಗಳು ಎಂದು ಜಮೀರ್ ಅಹಮದ್ ಟ್ವೀಟ್ ಮಾಡಿ ತಿಳಿಸಿದ್ದಾರೆ.
ಝೈದ್ ಖಾನ್ ಹಾಗೂ ಸೋನಂ ಮಾಂಟೇರೋ ಅಭಿನಯದ ಬನಾರಸ್ ಚಿತ್ರ ವೀಕ್ಷಿಸಿ, ಚಿತ್ರತಂಡಕ್ಕೆ ಶುಭ ಹಾರೈಸಿದೆ.ನೈಜತೆಯಿಂದ ಕೂಡಿದ ಪಾತ್ರಗಳು, ಸ್ವಾರಸ್ಯಕರವಾದ ಕತೆಯನ್ನು ಒಳಗೊಂಡಿರುವ ಸದಭಿರುಚಿಯ ಚಲನಚಿತ್ರವಿದು. ಇಂಥಾ ಚಿತ್ರಗಳ ಸಂಖ್ಯೆ ನೂರಾಗಲಿ.ಚಿತ್ರರಂಗ ಬೆಳೆಯಲಿ, ಚಿತ್ರತಂಡ ಬೆಳೆಯಲಿ. ಎಲ್ಲರಿಗೂ ಒಳಿತಾಗಲಿ” ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.