Advertisement
ಕೊಡಗಿಗೆ ಭೇಟಿ ನೀಡಿದ್ದ ರಕ್ಷಣಾ ಮಂತ್ರಿಗಳು ನಷ್ಟ ಅಂದಾಜು ಮಾಡುವ ಬದಲಿಗೆ, ರಾಜ್ಯ ಸಚಿವರ ಮೇಲೆ ಪ್ರಾಬಲ್ಯ ಸಾಧಿಸುವುದರಲ್ಲೇ ನಿರತರಾಗಿದ್ದರು. ಪರಿಹಾರ ನಿಧಿ ಬಿಡುಗಡೆಯಲ್ಲಿ ಪ್ರಧಾನ ಮಂತ್ರಿಗಳು ಮಲತಾಯಿ ಧೋರಣೆ ಅನುಸರಿಸುತ್ತಿದ್ದು, ಬಿಜೆಪಿ ಕರ್ನಾಟಕ ಬಗ್ಗೆ ಹೊಂದಿರುವ ಉದಾಸೀನತೆಯನ್ನು ಖಂಡಿಸುತ್ತೇನೆ ಎಂದು ಸಿದ್ದರಾಮಯ್ಯ ಶನಿವಾರ ಟ್ವೀಟ್ ಮಾಡಿದ್ದರು. ಈ ಕುರಿತು ಭಾನುವಾರ ಟ್ವೀಟ್ ಮಾಡಿರುವ ರಾಜ್ಯ ಬಿಜೆಪಿ, ಕೇಂದ್ರ ಸರ್ಕಾರ ಪರಿಸ್ಥಿತಿಯನ್ನು ತುಂಬಾ ಹತ್ತಿರದಿಂದ ನಿಭಾಯಿಸುತ್ತಿದ್ದು,ಕೊಡಗು ಮರು ನಿರ್ಮಾಣದಲ್ಲಿ ಕೊಡಗು ಜನರೊಂದಿಗೆ ನಿಲ್ಲಲಿದೆ. ಸಿದ್ದರಾಮಯ್ಯ ಅವರೇ, ಮತ್ತೆ ಮುಖ್ಯಮಂತ್ರಿಯಾಗುವ ಕನಸು ಕಾಣುವುದನ್ನು ಬಿಟ್ಟು, ಮೈತ್ರಿ ಸರ್ಕಾರದ ಜತೆ ಸಮನ್ವಯ ಸಭೆ ನಡೆಸಿ ಸರ್ಕಾರದಿಂದ ಕೊಡಗು ಜನರಿಗೆ ಏನು ಮಾಡುತ್ತೀರಾ ಎಂಬುದನ್ನು ಸ್ಪಷ್ಟಪಡಿಸಿ ಎಂದು ತಿರುಗೇಟು ನೀಡಿದೆ. Advertisement
ಸಿದ್ದರಾಮಯ್ಯ ಟ್ವೀಟ್‌ಗೆ ರಾಜ್ಯ ಬಿಜೆಪಿ ತಿರುಗೇಟು
06:25 AM Aug 27, 2018 | |
Advertisement
Udayavani is now on Telegram. Click here to join our channel and stay updated with the latest news.