Advertisement
ವಿಮಾನ ನಿಲ್ದಾಣದಲ್ಲಿ ಶುಕ್ರ ವಾರ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿಗಳು, ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವಂತೆ ಜೆಡಿಎಸ್ ಹಾಗೂ ಬಿಜೆಪಿ ನಾಯಕರಿಂದ ಆಗ್ರಹ ಕೇಳಿಬಂದಿರು ವುದಕ್ಕೆ ಪ್ರತಿಕ್ರಿಯಿಸಿದ ಅವರು, ಎಸ್‌ಐಟಿ ಬಿಟ್ಟು ಇನ್ಯಾರ ಮೇಲೆ ನಂಬಿಕೆ ಇಡುತ್ತೀರಿ? ಸಿಬಿಐಗೆ ಕೊಟ್ಟ ಕೇಸ್‌ನಲ್ಲಿ ಯಾರಿಗೆ ಶಿಕ್ಷೆಯಾಗಿದೆ ಹೇಳಿ. ಪ್ರಜ್ವಲ್ ವಿರುದ್ಧದ ಲೈಂಗಿಕ ದೌರ್ಜನ್ಯ ಪ್ರಕರಣವನ್ನು ಎಸ್‌ಐಟಿ ತನಿಖೆ ಮಾಡುತ್ತಿದೆ. ನಮ್ಮ ಪೊಲೀಸರ ಬಗ್ಗೆ ನಂಬಿಕೆಯಿದೆ. ಅವರು ನಿಷ್ಪಕ್ಷಪಾತ ತನಿಖೆ ಮಾಡಿ ವರದಿ ಕೊಡುತ್ತಾರೆ. ಹೀಗಾಗಿ ಪ್ರಕರಣವನ್ನು ಸಿಬಿಐಗೆ ವಹಿಸುವುದಿಲ್ಲ ಎಂದು ಹೇಳಿದರು.
Related Articles
ಈ ಪ್ರಕರಣದಲ್ಲಿ ಯಾರ ಹಸ್ತಕ್ಷೇಪವೂ ಇಲ್ಲ, ನನ್ನ ಹಸ್ತಕ್ಷೇಪ ಕೂಡ ಇಲ್ಲ. ಪೊಲೀಸರ ಮೇಲೆ ವಿಶ್ವಾಸ ಇದೆ. ಸತ್ಯಾಸತ್ಯತೆ ಹೊರಗೆ ಬರುತ್ತದೆ. ಪ್ರಕರಣಕ್ಕೆ ಅಂತಾರಾಷ್ಟ್ರೀಯ ಸಂಕರ್ಪ ಇದೆ ಎಂಬುದೆಲ್ಲ ನಿಜವಲ್ಲ. ಈ ಪ್ರಕರಣವನ್ನು ಸಿಬಿಐಗೆ ವಹಿಸಲಿ ಎನ್ನುವ ಕಾರಣಕ್ಕೆ ಈ ರೀತಿ ಹೇಳುತ್ತಿದ್ದಾರೆ ಅಷ್ಟೇ ಎಂದು ಹೇಳಿದರು.
Advertisement
ರೇವಣ್ಣ ನಿರೀಕ್ಷಣ ಜಾಮೀನಿಗೆ ಯಾಕೆ ಅರ್ಜಿ ಹಾಕಿದ್ದರು? ಮಾಜಿ ಸಚಿವ ಎಚ್.ಡಿ.ರೇವಣ್ಣ ಮೇಲೆ ಏನೂ ಕೇಸ್ ಇಲ್ಲ ಎಂದಾದರೆ ನಿರೀಕ್ಷಣ ಜಾಮೀನಿಗೆ ಯಾಕೆ ಅರ್ಜಿ ಹಾಕಿದ್ದರು? ಇದರಲ್ಲಿ ರಾಜಕೀಯ ಎಲ್ಲಿಂದ ಬಂತು? ಅಪರಾಧವಾಗಿಲ್ಲ ಎಂದಾದರೆ ಜಾಮೀನು ಅರ್ಜಿ ಯಾಕೆ ತಿರಸ್ಕಾರ ಆಗಿದೆ ಎಂದು ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದರು. ಪ್ರಜ್ವಲ್ ರೇವಣ್ಣ ಮಹಿಳಾ ದೌರ್ಜನ್ಯ ಪ್ರಕರಣದಲ್ಲಿ ನಾನಾಗಲೀ, ಡಿ.ಕೆ.ಶಿವಕುಮಾರ್ ಆಗಲೀ, ಸರಕಾರದ ಯಾರೊಬ್ಬರೂ ಹಸ್ತಕ್ಷೇಪ ಮಾಡುತ್ತಿಲ್ಲ ಎಂದರು.