Advertisement

ಅನರ್ಹರು ಕಳಂಕ ಹೊತ್ತು ಚುನಾವಣೆ ಎದುರಿಸಬೇಕು: ಸಿದ್ದರಾಮಯ್ಯ

09:54 AM Nov 15, 2019 | Team Udayavani |

ಬೆಂಗಳೂರು: ಅನರ್ಹ ಶಾಸಕರು ಮತ್ತು ಬಿಜೆಪಿಯವರು ತಮಗೆ ಸಂಬಂಧವಿಲ್ಲ ಎಂದು ಇಷ್ಟು ದಿನ ನಾಟಕ ಆಡಿದ್ದಾರೆ. ಈಗ ಅವರೆಲ್ಲ ಅನರ್ಹರಾಗಿ ಕಳಂಕ ಹೊತ್ತುಕೊಂಡು ಚುನಾವಣೆಗೆ ಹೋಗಬೇಕು ಎಂದು ವಿಧಾನಸಭೆಯಲ್ಲಿ ವಿಪಕ್ಷ ನಾಯಕರಾಗಿರುವ ಸಿದ್ದರಾಮಯ್ಯ ಅಭಿಪ್ರಾಯಪಟ್ಟಿ¨ªಾರೆ.

Advertisement

ಕೆಪಿಸಿಸಿ ಕಚೇರಿಯಲ್ಲಿ ಜವಾಹರ ಲಾಲ… ನೆಹರೂ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಅನರ್ಹ ಶಾಸಕರು ಬಿಜೆಪಿಗೆ ಸೇರ್ಪಡೆ ಆಗಿದ್ದಾರೆ. ಅವರು ಅನರ್ಹರು ಎಂಬ ಹಣೆಪಟ್ಟಿ ಇಟ್ಟುಕೊಂಡು ಮತ ಕೇಳಬೇಕು. ಕಳಂಕ ಹೊತ್ತವರನ್ನು ಜನರು ಗೆಲ್ಲಿಸುವುದಿಲ್ಲ ಎಂದು ಹೇಳಿದರು.

ನೆಹರೂ ಅವರು ಸ್ವಾತಂತ್ರಾéನಂತರ ದೇಶದ ಮೊದಲ ಪ್ರಧಾನಿಯಾಗಿದ್ದವರು. ಸುದೀರ್ಘ‌ 17 ವರ್ಷಗಳ ಕಾಲ ಪ್ರಧಾನಿಯಾಗಿ ದೇಶವನ್ನು ಮುನ್ನಡೆಸಿದ್ದರು. ಪ್ರಜಾಪ್ರಭುತ್ವ ಇಂದಿನವರೆಗೂ ಯಶಸ್ವಿಯಾಗಿ ನಡೆದುಕೊಂಡು ಬರಲು ನೆಹರೂ ಅವರೇ ಭದ್ರ ಬುನಾದಿ ಹಾಕಿದರು ಎಂದವರು ಹೇಳಿದರು.

ವಿಜ್ಞಾನ-ತಂತ್ರಜ್ಞಾನ, ಕೈಗಾರಿಕೆ ಕೃಷಿ, ಗ್ರಾಮೀಣಾಭಿವೃದ್ಧಿ ಸಹಿತ ಎಲ್ಲ ಕ್ಷೇತ್ರಗಳ ಬೆಳವಣಿಗೆಗೆ ಮತ್ತು ಪಂಚಾಯತ್‌ ರಾಜ್‌ ವ್ಯವಸ್ಥೆ ಜಾರಿಗೆ ತರುವಲ್ಲಿ ನೆಹರೂ ಪ್ರಮುಖ ಪಾತ್ರ ವಹಿಸಿದ್ದರು. ಇಂದು ಬಿಜೆಪಿ ಸಹಿತ ಪ್ರತಿಯೊಂದೂ ರಾಜಕೀಯ ಪಕ್ಷಗಳು ಸ್ವಾತಂತ್ರÂವನ್ನು ಅನುಭವಿಸುತ್ತಿದ್ದರೆ ಅದಕ್ಕೆ ಮಹಾತ್ಮಾ ಗಾಂಧಿ ಮತ್ತು ನೆಹರೂ ಅವರಂಥ ವ್ಯಕ್ತಿಗಳೇ ಕಾರಣ. ದೇಶದಲ್ಲಿ ಒಂದು ವ್ಯವಸ್ಥಿತ ಬೆಳವಣಿಗೆ ಆಗಬೇಕು ಎಂಬ ನಿಟ್ಟಿನಲ್ಲಿ ನೆಹರೂ ಅವರು ಪಂಚವಾರ್ಷಿಕ ಯೋಜನೆ, ಯೋಜನಾ ಆಯೋಗದ ರಚನೆ ಮತ್ತು ಕೈಗಾರಿಕಾ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದ್ದರು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next