ಬೆಂಗಳೂರು: 2014ರಲ್ಲಿ ಕಾಂಗ್ರೆಸ್ ಆಡಳಿತ ಅವಧಿಯಲ್ಲಿ (ತಮ್ಮ ಆಡಳಿತದ ಅವಧಿಯಲ್ಲಿ) ಘೋಷಣೆ ಮಾಡಲಾಗಿದ್ದ ಹಾಗೂ 2017ರಲ್ಲಿ ಪೂರ್ತಿಗೊಂಡಿದ್ದ ನಾರಾಯಣಪುರ ಎಡದಂಡೆ ಕಾಲುವೆಗೆ ಅಳವಡಿಸಲಾದ ಎಸ್‌ಸಿಎಡಿಎ ಗೇಟ್‌ಗಳ ಲೋಕಾರ್ಪಣೆಗೆ ಆಗಮಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಶುಭ ಹಾರೈಕೆಗಳು ಎಂದು ಟ್ವಿಟರ್‌ನಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕಾಲೆಳೆದಿದ್ದಾರೆ.
ಈ ಬಗ್ಗೆ ಸರಣಿ ಟ್ವಿಟ್ ಮಾಡಿರುವ ಅವರು, 2014ರಲ್ಲಿ ಕಾಂಗ್ರೆಸ್ ಸರ್ಕಾರ 3,500 ಕೋಟಿ ರೂ. ವೆಚ್ಚದಲ್ಲಿ ನಾರಾಯಣಪುರ ಎಡದಂಡೆ ಕಾಲುವೆಯ ಆಧುನೀಕರಣ ಕಾಮಗಾರಿ ಕೈಗೆತ್ತಿಕೊಂಡು, 2017ರಲ್ಲಿ ಪೂರ್ಣಗೊಳಿಸಿತ್ತು. ಇವುಗಳೀಗ ಲೋಕಾರ್ಪಣೆಗೆ ಸಿದ್ಧಗೊಂಡಿವೆ. ನಮ್ಮ ಸರ್ಕಾರದ ಈ ಯೋಜನೆ ಭವಿಷ್ಯದ ದಿನಗಳಲ್ಲಿ ರೈತರ ಬಾಳಲ್ಲಿ ಸಕಾರಾತ್ಮಕ ಬದಲಾವಣೆಗೆ ಕಾರಣವಾಗಲಿದೆ ಎಂಬ ಭರವಸೆ ನನಗಿದೆ ಎಂದು ಹೇಳಿದ್ದಾರೆ.
ನಮ್ಮ ಸರ್ಕಾರದ ರೈತಪರ ಕಾಳಜಿ ಮತ್ತು ಬದ್ಧತೆಯ ಫಲವಾಗಿ ನಾರಾಯಣಪುರ ಎಡದಂಡೆ ಕಾಲುವೆಗೆ ಅಳವಡಿಸಲಾದ ಎಸ್‌ಸಿಎಡಿಎ ಗೇಟ್‌ಗಳ ಲೋಕಾರ್ಪಣೆಗೆ ಪ್ರಧಾನಿ ಮೋದಿ ಆಗಮಿಸುತ್ತಿದ್ದಾರೆ ಅವರಿಗೆ ಶುಭ ಹಾರೈಸುತ್ತಿದ್ದೇನೆ. ದೇಶದಲ್ಲೇ ಪ್ರಥಮ ಬಾರಿಗೆ ಇಂಥದ್ದೊಂದು ಅತ್ಯಾಧುನಿಕ ಯೋಜನೆ ಜಾರಿಮಾಡಿದ ಕೀರ್ತಿ ಕಾಂಗ್ರೆಸ್ ಸರ್ಕಾರಕ್ಕೆ ಸಲ್ಲುತ್ತದೆ ಎಂದಿದ್ದಾರೆ.
ದೆಹಲಿಯಿಂದ ಐಟಿ ದಾಳಿ ಬೆದರಿಕೆ ಬಂತೇ?
ಬೆಂಗಳೂರು: ಕಮೀಷನ್ ಲೂಟಿ ನಡೆಸಿದ ಬಿಜೆಪಿ ಶಾಸಕರು, ಸಚಿವರು ಪ್ರಶ್ನಿಸುವ ಜನರ ಮೇಲೆಯೇ ದಬ್ಟಾಳಿಕೆ ನಡೆಸಲು ಮುಂದಾಗಿದ್ದಾರೆ ಎಂದು ಕಾಂಗ್ರೆಸ್ ಟ್ವಿಟರ್‌ನಲ್ಲಿ ಆಕ್ರೋಶ ವ್ಯಕ್ತಪಡಿಸಿದೆ.
Related Articles
ಈ ಬಗ್ಗೆ ಸರಣಿ ಟ್ವಿಟ್ ಮಾಡಿರುವ ಕಾಂಗ್ರೆಸ್, ಬಿಜೆಪಿ ಶಾಸಕ ತಿಪ್ಪಾರೆಡ್ಡಿಯ ಭ್ರಷ್ಟಾಚಾರದ ಆಡಿಯೋ ನಂತರ ದಬ್ಟಾಳಿಕೆಯ ವಿಡಿಯೋ ಹೊರಬಂದಿದೆ. ವೈಫಲ್ಯ ಪ್ರಶ್ನಿಸುವ ಮತದಾರರ ಮೇಲೆ ದಬ್ಟಾಳಿಕೆ ನಡೆಸಲೆಂದೇ ರೌಡಿ ಮೋರ್ಚಾ ಕಟ್ಟುತ್ತಿರುವುದೇ 40 ಪರ್ಸೆಂಟ್ ಸರ್ಕಾರ ಎಂದು ಪ್ರಶ್ನಿಸಿದೆ.
ಜನಾರ್ದನ ರೆಡ್ಡಿಯವರ ಪಕ್ಷಕ್ಕೆ ಕಾರ್ಯಕರ್ತರನ್ನು ಆಹ್ವಾನಿಸುವ ಟ್ವೀಟ್ ಮಾಡಿ ನಂತರ ಅದನ್ನು ಡಿಲೀಟ್ ಮಾಡಿದ ಸಚಿವ ಶ್ರೀರಾಮಲು ಅವರೇ, ತಮ್ಮ ಆಪ್ತರ ಮೇಲಿನ ಐಟಿ ದಾಳಿಗೂ, ಈ ಟ್ವೀಟ್‌ಗೂ ಸಂಬಂಧವಿರುವಂತಿದೆ ಅಲ್ಲವೇ ಎಂದು ಕೆಣಕಿದೆ. ಸಚಿವ ಶ್ರೀರಾಮಲು ಅವರೇ, ಆ ಸಂದೇಶ ಡಿಲೀಟ್ ಮಾಡಿದ್ದೇಕೆ? ದೆಹಲಿಯಿಂದ ನಿಮ್ಮ ಮೇಲೂ ಐಟಿ ದಾಳಿ ಮಾಡುವ ಬೆದರಿಕೆ ಬಂತೇ ಎಂದು ಟೀಕಾಪ್ರಹಾರ ನಡೆಸಿದೆ.