Advertisement
ಮೈತ್ರಿ ಮುನ್ನೆಡುಸುವಲ್ಲಿ ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ಅವರು ವಿಫಲರಾಗಿದ್ದಾರೆ ಎನ್ನುವ ವಿಶ್ವನಾಥ್ ಆರೋಪಕ್ಕೆ ಸಂಬಂಧಿಸಿ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದ ಸಿದ್ದರಾಮಯ್ಯ,ಅವನಿಗೆ ಅಧ್ಯಕ್ಷಗಿರಿಯನ್ನೇ ಮಾಡಲಿಕ್ಕೆ ಆಗದೆ ರಾಜೀನಾಮೆ ಕೊಟ್ಟಿದ್ದಾನೆ, ಅಧ್ಯಕ್ಷನಾಗಿ ಎಷ್ಟು ದಿನ ಆಯ್ತು ಅವ್ನು,ಇನ್ನು ಬೇರೆಯವರ ಬಗ್ಗೆ ಆರೋಪ ಮಾಡುತ್ತಾನೆ ಎಂದು ಏಕವಚನದಲ್ಲೇ ಕಿಡಿ ಕಾರಿದರು.
ನನಗೆ ಇರುವ ಮಾಹಿತಿ ಪ್ರಕಾರನರೇಂದ್ರ ಮೋದಿ , ಅಮಿತ್ ಶಾ ಅವರು ಸರ್ಕಾರ ಅಸ್ಥಿರಗೊಳಿಸಲು ಪ್ರಯತ್ನ ನಡೆಸುತ್ತಿದ್ದಾರೆ. ನಮ್ಮ ಶಾಸಕರನ್ನ ಸೆಳೆಯಲು ಪಿತೂರಿ ಮಾಡುತ್ತಿದ್ದಾರೆ. ನಾನೇನು ಅವರ ಬಳಿ ಮಾತನಾಡಿಲ್ಲ. ಅವರು (ಸಚಿವ ಜಿ.ಟಿ.ದೇವೇಗೌಡ) ಮಾತಾಡಿದ್ದಾರೋ ಗೊತ್ತಿಲ್ಲ ಎಂದರು.