ಹುಮನಾಬಾದ: ಕೋವಿಡ್ ವಿಷಯದಲ್ಲಿ ಸರ್ಕಾರತೆಗೆದುಕೊಂಡಿರುವ ನಿರ್ಣಯಗಳು ಸಮರ್ಪಕವಾಗಿಲ್ಲ. ಲಾಕ್‌ಡೌನ್ ಅಥವಾ ರಾತ್ರಿ ಕರ್ಫ್ಯೂನಿಂದ ಯಾವುದೇ ಲಾಭವಿಲ್ಲ ಎಂದುವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಬಸವಕಲ್ಯಾಣ ಉಪ ಚುನಾವಣೆಪ್ರಚಾರಕ್ಕೆ ತೆರಳುವ ಮುನ್ನ ಸೋಮವಾರಪಟ್ಟಣದ ಶಕುಂತಲಾ ಪಾಟೀಲ ವಸತಿ ಶಾಲೆಯಲ್ಲಿನವಸತಿ ಗೃಹಕ್ಕೆ ಭೇಟಿ ನೀಡಿದ ವೇಳೆ “ಉದಯವಾಣಿ’ಜತೆ ಮಾತನಾಡಿದ ಅವರು, ಸರ್ಕಾರ ತಮ್ಮ ಅನುಕೂಲಕ್ಕೆ ತಕ್ಕಂತೆ ನಿಯಮ ಮಾಡಬಾರದು.ಜನರ ಹಿತದೃಷ್ಟಿಯಿಂದ ಕೆಲಸ ಮಾಡಬೇಕು. ಲಾಕ್‌ಡೌನ್ ಅಥವಾ ರಾತ್ರಿ ಕರ್ಫ್ಯೂನಿಂದ ಯಾವುದೇಲಾಭವಿಲ್ಲ. ಕರ್ಫ್ಯೂ ವಿಧಿಸುವುದರಿಂದ ಸೋಂಕು ತಡೆಗಟ್ಟಲು ಸಾಧ್ಯವಿಲ್ಲ. ಸೂಕ್ತ ಸಮಯಕ್ಕೆ ಸರ್ಕಾರಕಠಿಣ ನಿಯಮ ಅನುಸರಿಸದ ಕಾರಣ ರಾಜ್ಯದಲ್ಲಿದಿನದಿಂದ ದಿನಕ್ಕೆ ಹೆಚ್ಚಿನ ಪ್ರಕರಣ ಬೆಳಕಿಗೆ ಬರುತ್ತಿವೆ.ಇದಕ್ಕೆ ಸರ್ಕಾರದ ವೈಫಲ್ಯವೇ ಕಾರಣ. ಕೋವಿಡ್ ನಿಯಮ ರೂಪಿಸಿದ ಸರ್ಕಾರವೇ ನಿಯಮ ಪಾಲಿಸುತ್ತಿಲ್ಲ ಎಂದು ಆರೋಪಿಸಿದರು.
ಮಸ್ಕಿಯಲ್ಲಿ ಸಭೆ-ಸಮಾರಂಭ ನಿಷೇಧಿ ಸಿ ಆದೇಶ ಹೊರಡಿಸಲಾಗಿತ್ತು. ಸಭೆ-ಸಮಾರಂಭಗಳಿಗೆ ನಿಗದಿತಜನರು ಇರಬೇಕೆಂಬ ನಿಯಮ ಹಾಕಲಾಗಿತ್ತು.ಅದರಂತೆ ಸರ್ಕಾರ ನಡೆದುಕೊಳ್ಳಬೇಕಿತ್ತು. ಅದರೆಸರ್ಕಾರದ ನಿಯಮ ಆಡಳಿತದಲ್ಲಿದ್ದವರೇ ಉಲ್ಲಂಘಿಸುತ್ತಿದ್ದಾರೆ. ಆಡಳಿತ ಪಕ್ಷದವರು ಕಡ್ಡಾಯ ಮಾಸ್ಕ್, ಸಾಮಾಜಿಕ ಅಂತರ, ನಿಗದಿತ ಜನರನ್ನು ಸೇರಿಸಿಸಭೆ-ಸಮಾರಂಭ ಮಾಡಿದ್ದರೆ ನಾವು ಕೂಡ ಅದೇ ನಿಯಮ ಪಾಲಿಸಿಕೊಂಡು ಬರುತ್ತಿದ್ದೆವು. ಆಡಳಿತ ಪಕ್ಷಕ್ಕೆಸಹಕಾರ ನೀಡುತ್ತಿದ್ದೆವು. ಸಾರ್ವಜನಿಕ ಸಮಾರಂಭಗಳಬದಲಿಗೆ ಮನೆ-ಮನೆಗೆ ತೆರಳಿ ಮತಯಾಚನೆ ಮಾಡುತ್ತಿದ್ದೆವು. ಮೊದಲಿಗೆ ಸಿಎಂ ಯಡಿಯೂರಪ್ಪ ಖುದ್ದು ಮಸ್ಕಿಯಲ್ಲಿ ಸಾವಿರಾರು ಜನರನ್ನು ಸೇರಿಸಿಸಮಾರಂಭ ಮಾಡಿದ್ದಾರೆ. ಚುನಾವಣೆಗಾಗಿ ಏಕೆಸರ್ಕಾರ ನಿಯಮ ಸಡಿಲಗೊಳಿಸಿದರು? ಜನರಹಿತದೃಷ್ಟಿಯಿಂದ ಸರ್ಕಾರ ಬಿಗುವಿನ ನಿಯಮಅನುಸರಿಸಬೇಕಿತ್ತು. ಸರ್ಕಾರ ತಮ್ಮ ಅನುಕೂಲಕ್ಕೆ ತಕ್ಕಂತೆ ನಿಯಮ ಮಾಡಬಾರದಿತ್ತು ಎಂದರು.
ನೌಕರರ ಬೆದರಿಸುವ ತಂತ್ರ ಸರಿಯಲ್ಲ: ಸರ್ಕಾರ ಸಾರಿಗೆ ನೌಕರರನ್ನು ಬೆದರಿಸುವ ತಂತ್ರ ಬಿಟ್ಟು ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಪ್ರಯತ್ನ ನಡೆಸಬೇಕು. ನೌಕರರಿಗೆ ಬೆದರಿಕೆ ತಂತ್ರ ಅನುಸರಿಸುವುದು ಸರಿಯಲ್ಲ. ಅದು ಯಾವುದೇ ಲಾಭ ನೀಡುವುದಿಲ್ಲ. ಎಸ್ಮಾ ಉಪಯೋಗಿಸುವುದು, ವರ್ಗಾವಣೆ ಮಾಡುವುದು, ಸೇವೆಯಿಂದ ವಜಾಗೊಳಿಸುವ ತಂತ್ರಗಳು ಶಾಶ್ವತ ಪರಿಹಾರವಲ್ಲ. ಬದಲಿಗೆ ಸರ್ಕಾರ ಮಾತುಕತೆ ನಡೆಸಿ ಮನವೊಲಿಸುವ ಕೆಲಸಮಾಡಬೇಕು. ಮೊದಲು ನೌಕರರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಕೆಲಸ ಮಾಡಬೇಕು. ಅವರ ಸಮಸ್ಯೆ ಆಲಿಸಬೇಕು. ಎಲ್ಲ ಸಮಸ್ಯೆ ಪರಿಹಾರ ಮಾಡಲು ಆಗದಿರಬಹುದು. ಆದರೆ, ನೌಕರರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಕೆಲಸ ಮಾಡಬೇಕು.
ಸಾರಿಗೆ ನೌಕರರು ಈ ಹಿಂದೆ ಕೂಡ ಚಳವಳಿ, ಮುಷ್ಕರ ನಡೆಸಿದ್ದಾರೆ. ನಮ್ಮ ಅವಧಿ ಯಲ್ಲಿಯೂ ನಡೆದಿವೆ. ಅಂಥಹ ಸಂದರ್ಭದಲ್ಲಿ ನಾವು ಸ್ಪಂದಿಸುವ ಕೆಲಸ ಮಾಡಿದೆವು. ಆ ಸಂದರ್ಭದಲ್ಲಿ ಶೇ.12.5 ಸಂಬಳ ಹೆಚ್ಚಿಸಿ ಸಮಸ್ಯೆಗೆ ಸ್ಪಂದಿಸಿದ್ದೇವೆ. ಇದೀಗ ಸಾರಿಗೆ ಸಚಿವರು ಮೊದಲು ಮುಖಂಡರೊಂದಿಗೆ ಕುಳಿತು ಮಾತುಕತೆ ನಡೆಸಬೇಕು. ನೌಕರರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಹಾಗೂ ಅವರಿಗೆ ಮನವರಿಕೆ ಮಾಡುವ ಕೆಲಸ ಮಾಡಿಬೇಕು. ಸರ್ಕಾರ ನೌಕರರೊಂದಿಗೆ ಮಾತನಾಡುವುದಿಲ್ಲ ಎಂದರೆ ಹೇಗೆ? ಅವರನ್ನು ಕರೆದು ಮಾತಾಡುವುದಿಲ್ಲ ಎಂದು ಸಿಎಂ ಯಡಿಯೂರಪ್ಪ ಹೇಳುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
-ದುರ್ಯೋಧನ ಹೂಗಾರ