Advertisement

ವಿನಯ ಕುಲಕರ್ಣಿ ವಿಚಾರಣೆ ರಾಜಕೀಯ ಪ್ರೇರಿತ: ಸಿದ್ದರಾಮಯ್ಯ

04:12 PM Nov 05, 2020 | keerthan |

ಚಿತ್ರದುರ್ಗ: ಮಾಜಿ ಸಚಿವ ವಿನಯ್ ಕುಲಕರ್ಣಿ ಸಿಬಿಐ ವಿಚಾರಣೆ ರಾಜಕೀಯ ಪ್ರೇರಿತ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.

Advertisement

ಚಿತ್ರದುರ್ಗದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ವಿನಯ್ ಕುಲಕರ್ಣಿ ಜೊತೆ ಮಾತನಾಡಿದ್ದೇನೆ, ನಾನು ಏನೂ ತಪ್ಪು ಮಾಡಿಲ್ಲ ಎಂದು ನನ್ನ ಬಳಿ ಹೇಳಿದ್ದಾನೆ, ಹೀಗಾಗಿ ವಿಚಾರಣೆ ಹಂತದಲ್ಲಿರುವಾಗ ಏನೂ ಹೇಳುವುದಿಲ್ಲ ಎಂದರು.

ಕೋವಿಡ್ ಗೆ ಲಸಿಕೆ ಬರುವವರೆಗೆ ಗ್ರಾ.ಪಂ ಚುನಾವಣೆ ನಡೆಸುವುದಾಗಲೀ, ಶಾಲೆಗಳನ್ನು ಪುನರಾರಂಭ ಮಾಡವುದಾಗಲಿ ಸೂಕ್ತವಲ್ಲ, ಎಲ್ಲಾ ವಿದ್ಯಾರ್ಥಿಗಳನ್ನು ಈ ವರ್ಷ ಪಾಸ್ ಮಾಡಬೇಕು ಎಂದು ಸಲಹೆ ನೀಡಿದರು.

ಕೋವಿಡ್-19 ಸಂಕಷ್ಟದ ಕಾಲದಲ್ಲಿ ವಿದ್ಯುತ್ ದರ ಏರಿಕೆ ಮಾಡಿರುವುದು ಸರಿಯಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ರಾಜ್ಯದಲ್ಲಿ ಸಿಎಂ ಪುತ್ರನ ಪಾತ್ರದ ಬಗ್ಗೆ ಮಾತನಾಡಿ, ರಾಜ್ಯದಲ್ಲಿ ಇಬ್ಬರು ಸಿಎಂ ಇದ್ದಾರೆ, ಅದರಲ್ಲಿ ವಿಜಯೇಂದ್ರ ಡಿ ಫ್ಯಾಕ್ಟರ್ ಸಿಎಂ ಆಗಿದ್ದಾರೆ, ರಾಜ್ಯದ ಹಣಕಾಸು ಪರಿಸ್ಥಿತಿ ತೀವ್ರ ಹದಗೆಟ್ಟಿದೆ, ಸಂಬಳ ಕೊಡಲು ಹಣವಿಲ್ಲ ಎಂದು ಸರ್ಕಾರದ ಕಾರ್ಯವೈಖರಿಯನ್ನು ಟೀಕಿಸಿದರು.

Advertisement

ಇದನ್ನೂ ಓದಿ:ವಿನಯ್ ಕುಲಕರ್ಣಿ ಬಂಧನದಲ್ಲಿ ದಿಲ್ಲಿ, ರಾಜ್ಯ ನಾಯಕರ ಕೈವಾಡ: ಲಿಂಗಾಯತ ಪಂಚಮಸಾಲಿ ಸ್ವಾಮೀಜಿ

ನಳಿನ್ ಅಪ್ರಬುದ್ಧ:

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕುರಿತ ಪ್ರಶ್ನೆಗೆ ಆತ ಅಪ್ರಬುದ್ದ, ಆತನ ಬಗ್ಗೆ ಪ್ರತಿಕ್ರಿಯಿಸುವ ಅಗತ್ಯವಿಲ್ಲ‌ ಎಂದು ವ್ಯಂಗ್ಯವಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next