Advertisement

ಜಮೀರ್, ರಾಗಿಣಿ, ಆದಿತ್ಯ ಆಳ್ವ ಯಾರೇ ಆದರೂ ತಪ್ಪಿದ್ದರೆ ಶಿಕ್ಷೆಯಾಗಲಿ: ಸಿದ್ದರಾಮಯ್ಯ

04:09 PM Sep 07, 2020 | keerthan |

ಬೆಂಗಳೂರು: ರಾಜ್ಯದಲ್ಲಿ ಡ್ರಗ್ಸ್ ಮಟ್ಟ ಹಾಕಲು ನಮ್ಮ ಅವಧಿಯಲ್ಲೂ ಪ್ರಯತ್ನ ಮಾಡಿದ್ದೆವು. ಈಗ ಹೆಚ್ಚಾಗಿ ಬಯಲಿಗೆ ಬರುತ್ತಿದೆ. ಎನ್ ಸಿಬಿ ಈಗ ಎಲ್ಲವನ್ನೂ ಪತ್ತೆ ಹಚ್ಚುತ್ತಿದೆ. ನಾರ್ಕೋಟಿಕ್ ಆ್ಯಕ್ಟ್ ಇದೆ ಅದರ ಪ್ರಕಾರ ಕ್ರಮ ತೆಗೆದುಕೊಳ್ಳಲಿ. ಜಮೀರ್ ಅಹ್ಮದ್ ವಿರುದ್ಧ ಪುರಾವೆ ಇದ್ದರೆ ಯಾರಾದರೂ ‌ಆಗಲಿ ತನಿಖೆ ಮಾಡಲಿ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

Advertisement

ನಗರದಲ್ಲಿ ಮಾತನಾಡಿದ ಅವರು, ನಟಿ ರಾಗಿಣಿಗೂ ನಮ್ಮ‌ಪಕ್ಷಕ್ಕೆ ಸಂಬಂಧವಿಲ್ಲ. ಅವರು ಕ್ಯಾಂಪೇನ್ ಮಾಡಿದ್ದಾರೆ? ಪ್ರಕರಣದ ತನಿಖೆ ನಡೆಯುತ್ತಿದೆ, ಅದು ಮುಂದುವರಿಯಲಿ. ಯಾರೇ ಆಗಿರಲಿ ಕ್ರಮ ತೆಗೆದುಕೊಳ್ಳಲಿ. ಇದಕ್ಕೆ ನಮ್ಮ‌ಅಭ್ಯಂತರವೇನಿಲ್ಲ. ರಾಜಕಾರಣಿಗಳು ಇದ್ರೂ ಸರಿ, ಯಾರಾದರೂ ಸರಿ. ಆದಿತ್ಯ ಅಳ್ವ ಇರಲಿ‌, ಯಾರೇ ಇರಲಿ. ಎಲ್ಲರ ಬಗ್ಗೆಯೂ ತನಿಖೆ ನಡೆಯಲಿ. ತಪ್ಪಿದ್ದರೆ ಕಾನೂನು ಪ್ರಕಾರ ಶಿಕ್ಷೆಯಾಗಲಿ ಎಂದು ಹೇಳಿದರು.

ಕೋವಿಡ್ ಸೆಂಟರ್ ಅಗತ್ಯವಿಲ್ಲ ಅಂತ ಮಾತನಾಡಿದ್ದಾರೆ. ಅವರು ಯಾವ ಕಾರಣಕ್ಕೆ ಮುಚ್ಚಿದ್ದಾರೆ ನೋಡೋಣ ಎಂದ ಅವರು ರಾಜ್ಯದ ಕೈಗಾರಿಕಾ ಕ್ಷೇತ್ರ ಸ್ಥಾನಕ್ಕೆ‌ ಕುಸಿತದ ಬಗ್ಗೆ ಮಾತನಾಡಿದ ಅವರು ನಾವಿದ್ದಾಗ ನಾಲ್ಕನೇ ಸ್ಥಾನದಲ್ಲಿದ್ದೆವು. ಈಗ 17 ನೇ ಸ್ಥಾನಕ್ಕೆ ಬಂದಿದೆ. ಈಗ ಇರುವುದು ಯಾವ ಸರ್ಕಾರನಪ್ಪಾ? ಅದನ್ನು ಮೊದಲು ಅವರು ಹೇಳಲಿ ಎಂದು ರಾಜ್ಯ ಸರ್ಕಾರಕ್ಕೆ ಸಿದ್ದರಾಮಯ್ಯ ಆಗ್ರಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next