ವಿಧಾನಸಭೆ: ರಾಜ್ಯದಲ್ಲಿ ಎಷ್ಟು ಕುರಿ, ಮೇಕೆ ಐತೆ ಅಂತ ಗೊತ್ತೇನ್ರಿ ? ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಪಶುಸಂಗೋಪನಾ ಸಚಿವರನ್ನು ಪ್ರಶ್ನಿಸಿದ್ದಾರೆ.
ಕುರಿ ಹಾಗೂ ಮೇಕೆಗಳಿಗೆ ರಾಜ್ಯಾದ್ಯಂತ ನೀಲಿನಾಲಿಗೆ ರೋಗ ಬರುತ್ತಿದ್ದು, ಅವುಗಳಿಗೆ ಲಸಿಕೆ ಒದಗಿಸುವಂತೆ ಶೂನ್ಯ ವೇಳೆಯಲ್ಲಿ ಪ್ರಸ್ತಾಪಿಸಿದಾಗ ಸಚಿವರಿಂದ ಸೂಕ್ತ ಉತ್ತರ ಬಾರದ ಹಿನ್ನಲೆಯಲ್ಲಿ ಅವರು ಸಚಿವರನ್ನು ಈ ರೀತಿ ಪ್ರಶ್ನೆ ಮಾಡಿದ್ದಾರೆ.
ರಾಜ್ಯದಲ್ಲಿ 1.19 ಕೋಟಿ ಕುರಿಗಳು, 61 ಲಕ್ಷ ಮೇಕೆಗಳು ಇವೆ. ಸೆಪ್ಟೆಂಬರ್ ಹಾಗೂ ಅಕ್ಟೋಬರ್ ತಿಂಗಳಲ್ಲಿ ಕುರಿ- ಮೇಕೆ ಸಾವು ಹೆಚ್ಚುತ್ತದೆ. ಆದರೆ ಇಡಿ ರಾಜ್ಯಕ್ಕೆ 10 ಲಕ್ಷ ಲಸಿಕೆ ಮಾತ್ರ ನೀಡಲಾಗಿದೆ. ಜಾನುವಾರುಗಳು ರೈತರ ಆಸ್ತಿ. ಹೀಗಾಗಿ ಸರಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಇದನ್ನೂ ಓದಿ:ಕಂಚಿವರದರಾಜಸ್ವಾಮಿ ಜಾತ್ರೆ; ಇಲ್ಲಿ ದೇವರ ಮೇಲೆ ಹಣ ತೂರುವುದೇ ಹರಕೆ
ಬಾಗಲಕೋಟೆಯಲ್ಲಿ ಎರಡು ಲಕ್ಷ ಕುರಿಗಳು ಇವೆ. ಆದರೆ 50 ಸಾವಿರ ಲಸಿಕೆ ಕೊಡಲಾಗಿದೆ. ಹೀಗಾಗಿ ತಕ್ಷಣ ಸರಕಾರ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.
ಇದಕ್ಕೆ ಸ್ಪಂದಿಸಿದ ಸಚಿವ ಪ್ರಭು ಚೌಹ್ಹಾಣ್ ತಕ್ಷಣವೇ ಲಸಿಕೆಯನ್ನು ಪೂರೈಸುತ್ತೇವೆ ಎಂದು ಭರವಸೆ ನೀಡಿದರು.