ಬೆಂಗಳೂರು: ಸಿದ್ದರಾಮಯ್ಯ ಅವರೇ ಡಿ.ಕೆ. ಶಿವಕುಮಾರ್ ಅವರಿಂದ ದೂರ ಇರಿ ಎಂದು ಬಿಜೆಪಿ ಶಾಸಕ ರೇಣುಕಾಚಾರ್ಯ ಸಿದ್ದರಾಮಯ್ಯ ಅವರಿಗೆ ಸಲಹೆ ನೀಡಿದ್ದಾರೆ.
ವಿಧಾನ ಸೌಧ ದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಅಂದರೆ ಬ್ರಹ್ಮಾಂಡ ಭ್ರಷ್ಟಾಚಾರಕ್ಕೆ ಹೆಸರು. ಯಾವ ಕನಕಪುರ ಬಂಡೆ ಲೂಟಿ ಮಾಡಿದ ಡಿಕೆಶಿ. ಹಗರಣದಲ್ಲಿ ಸ್ವತಃ ಜೈಲಿಗೆ ಹೋದವರು.ಈಶ್ವರಪ್ಪ ಅವರು ಸ್ವಂತ ಅವರೇ ರಾಜೀನಾಮೆ ನೀಡಿದರು.ಸುರೇಶ್, ಅಶ್ವತ್ಥ್ ನಾರಾಯಣ್ ಸಮ್ಮುಖದಲ್ಲಿ ಗೂಂಡಾ ರೀತಿಯಲ್ಲಿ ವರ್ತನೆ ಮಾಡಿದ್ದು ಜನ ನೋಡಿದ್ದಾರೆ. ಅಶ್ವತ್ಥ್ ನಾರಾಯಣ್ ಅವರನ್ನ ಟಾರ್ಗೆಟ್ ಮಾಡಿದ್ದಾರೆ. ನಮ್ಮಪಕ್ಷದವರ ಯಾರ ರಾಜೀನಾಮೆ ಕೇಳುವ ನೈತಿಕತೆ ಇಲ್ಲ ಎಂದರು.
ದಿವ್ಯಾ ಹಾಗರಗಿ ಆಗಿರಬಹುದು ಅಥವಾ ಬೇರೆಯವರನ್ನೇ ಆಗಿರಬಹುದು ಬಂಧನ ಮಾಡಿ ತನಿಖೆ ಮಾಡಲಾಗುತ್ತಿದೆ. ಅಶ್ವತ್ಥ್ ನಾರಾಯಣ್ ಯಾಕೆ ರಾಜೀನಾಮೆ ಕೊಡಬೇಕು?ಡಿಕೆಶಿ ಹಾಗೂ ಸಿದ್ದರಾಮಯ್ಯ ನಡುವೆ ಜಟಾಪಟಿ ನಡೆಯುತ್ತಿದೆ.ನಾನು ಸಿಎಂ ಆಗಬೇಕು ಅಂತ.ಡಿಕೆಶಿಗೆ ನಿವು ಬೆಂಬಲ ನೀಡಿದರೆ, ನಿಮಗೆ ಒಳ್ಳೆಯದಾಗುವುದಿಲ್ಲ ಎಂದರು.
ಸಚಿವ ಸಂಪುಟ ವಿಸ್ತರಣೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಸಚಿವ ಸಂಪುಟ ಯಾವಾಗ ರಚನೆ ಮಾಡಬೇಕು ಅನ್ನೋದು ಹೈಕಮಾಂಡ್ ಗೆ ಬಿಟ್ಟ ವಿಚಾರ.ಆದರೆ, ಯತ್ನಾಳ್ ಯಾವ ರೀತಿ ಹೇಳಿದ್ದಾರೆ ಗೊತ್ತಿಲ್ಲ. ಆದಷ್ಟು ಬೇಗ ಸಚಿವ ಸಂಪುಟ ರಚನೆ ಮಾಡಬೇಕು ಅನ್ನುವ ಒತ್ತಾಯ ಇದೆ. ಆದಷ್ಟು ಬೇಗ ಆದರೆ ಉತ್ತಮ. ಯತ್ನಾಳ್ ಕೇಂದ್ರದಲ್ಲಿ ಸಚುವರಾಗಿದ್ದವರು. ಅವರ ಬಗ್ಗೆ ನಾನು ಏನೂ ಹೇಳುವುದಿಲ್ಲ ಎಂದರು.