Advertisement

Cabinet Expansion: ಸಿದ್ದರಾಮಯ್ಯ ಸಂಪುಟ ಸೇರಿದ ಅನುಭವಿ- ಉತ್ಸಾಹಿ ಶಾಸಕರ ತಂಡ

01:10 PM May 27, 2023 | Team Udayavani |

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಂಪುಟಕ್ಕೆ ನೂತನ ಸಚಿವರ ಎಂಟ್ರಿಯಾಗಿದೆ. ಬೆಂಗಳೂರಿನ ರಾಜಭವನದ ಗಾಜಿನಮನೆಯಲ್ಲಿ ನೂತನ ಸಚಿವರು ಪ್ರಮಾಣ ವಚನ ಸ್ವೀಕರಿಸಿದರು. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಪ್ರತಿಜ್ಞಾ ವಿಧಿ ಬೋಧಿಸಿದರು.

Advertisement

ಸಮಾರಂಭದಲ್ಲಿ ಮೊದಲಿಗೆ ಹೆಚ್.ಕೆ ಪಾಟೀಲ್ ಅವರು ಪ್ರಮಾಣ ವಚನ ಸ್ವೀಕರಿಸಿದರು. ಹಿರಿಯ ರಾಜಕಾರಣಿ, ಗದಗ ಶಾಸಕ ಹೆಚ್.ಕೆ ಪಾಟೀಲ್ ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.

ನಾಗಮಂಗಲ ಶಾಸಕ ಎನ್​​. ಚಲುವರಾಯಸ್ವಾಮಿ ಅವರು ದೇವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು.

ಬ್ಯಾಟರಾಯನಪುರ ಶಾಸಕ ಕೃಷ್ಣಬೈರೇಗೌಡ ಅವರು ಪ್ರಮಾಣ ವಚನ ಸ್ವೀಕರಿಸಿದರು. ಕೃಷ್ಣಬೈರೇಗೌಡ ಅವರು ಈ ಹಿಂದೆಯೂ ಸಚಿವರಾಗಿ ಕಾರ್ಯನಿರ್ವಹಿಸಿದ್ದರು.

ಪಿರಿಯಾಪಟ್ಟಣ ಶಾಸಕ ಕೆ.ವೆಂಕಟೇಶ್ ಅವರು ದೇವರ ಹೆಸರಿನಲ್ಲಿ ಸಚಿವರಾಗಿ ​​ಪ್ರಮಾಣ ವಚನ ಸ್ವೀಕರಿಸಿದ್ದಾರೆ.

Advertisement

ಟಿ.ನರಸೀಪುರ ಶಾಸಕ, ಹಿರಿಯ ರಾಜಕಾರಣಿ ಡಾ.ಹೆಚ್​. ಸಿ.ಮಹದೇವಪ್ಪ ಅವರು ಸತ್ಯ ಮತ್ತು ನಿಷ್ಠೆ ಹೆಸರಿನಲ್ಲಿ ​​ಪ್ರಮಾಣವಚನ ಸ್ವೀಕರಿಸಿದರು.

ಬಾಲ್ಕಿ ಶಾಸಕ ಈಶ್ವರ ಖಂಡ್ರೆಯವರು ದೇವರ ಹೆಸರಿನಲ್ಲಿ ​​ಪ್ರಮಾಣವಚನ ಸ್ವೀಕರಿಸಿದರು. ಖಂಡ್ರೆ ಅವರು ಈ ಹಿಂದೆಯೂ ಸಚಿವರಾಗಿ ಕಾರ್ಯ ನಿರ್ವಹಿಸಿದ ಅನುಭವ ಹೊಂದಿದ್ದಾರೆ.

ಕ್ಯಾತನಸಂದ್ರ ಎನ್ ರಾಜಣ್ಣ (ಕೆಎನ್ ರಾಜಣ್ಣ) ಅವರು ಬುದ್ಧ, ಬಸವ, ಅಂಬೇಡ್ಕರ್​ ಮತ್ತು ವಾಲ್ಮೀಕಿ ಹೆಸರಿನಲ್ಲಿ ​​ಪ್ರಮಾಣವಚನ ಸ್ವೀಕರಿಸಿದರು. ಇವರು ಮಧುಗಿರಿ ಶಾಸಕರಾಗಿದ್ದಾರೆ.

ಮಾಜಿ ಸಚಿವ, ಗಾಂಧಿ ನಗರ ಶಾಸಕ ದಿನೇಶ್ ಗುಂಡೂರಾವ್ ಅವರು ಇಂದು ಸಚಿವರಾಗಿ ​​ಪ್ರಮಾಣವಚನ ಸ್ವೀಕರಿಸಿದರು.

ಶಹಾಪುರ ಶಾಸಕ ಸಚಿವರಾಗಿ ಶರಣಬಸಪ್ಪ ದರ್ಶನಾಪುರ ಅವರು ದೇವರ ಹೆಸರಿನಲ್ಲಿ ​​ಪ್ರಮಾಣವಚನ ಸ್ವೀಕರಿಸಿದರು. ಈ ಹಿಂದೆ 2006ರಲ್ಲಿ ಸಚಿವರಾಗಿದ್ದರು.

ಬಸವನ ಬಾಗೇವಾಡಿ ಶಾಸಕ ಶಿವಾನಂದ ಪಾಟೀಲ್​​ ಅವರು ಅಣ್ಣ ಬಸವಣ್ಣನ ಹೆಸರಿನಲ್ಲಿ ​​ಪ್ರಮಾಣವಚನ ಸ್ವೀಕರಿಸಿದರು. 2018ರಲ್ಲಿ ಕುಮಾರಸ್ವಾಮಿ ಕ್ಯಾಬಿನೆಟ್ ನಲ್ಲಿ ಸಚಿವ ಸ್ಥಾನ ಹೊಂದಿದ್ದರು.

ಮುಧೋಳ ಶಾಸಕ ಆರ್.ಬಿ.ತಿಮ್ಮಾಪುರ ಅವರು ದೇವರ ಹೆಸರಿನಲ್ಲಿ ಸಚಿವರಾಗಿ ​​ಪ್ರಮಾಣವಚನ ಸ್ವೀಕರಿಸಿದರು. ಈ ಹಿಂದೆ ಅಬಕಾರಿ, ಸಕ್ಕರೆ, ಬಂದರು ಹಾಗೂ ಒಳ ನೀರಾವರಿ ಖಾತೆ ಸಚಿವರಾಗಿದ್ದರು.

ದಾವಣಗೆರೆ ಉತ್ತರ ಕ್ಷೇತ್ರ ಶಾಸಕ ಎಸ್.ಎಸ್.ಮಲ್ಲಿಕಾರ್ಜುನ ಅವರು ಕಲ್ಲೇಶ್ವರ ದೇವರ ಹೆಸರಿನಲ್ಲಿ ​​ಪ್ರಮಾಣವಚನ ಸ್ವೀಕರಿಸಿದರು. ಸದ್ಯ ವಿಧಾನಸಭೆಯ ಅತ್ಯಂತ ಹಿರಿಯ ಸದಸ್ಯ ಶಾಮನೂರು ಶಿವಶಂಕರಪ್ಪ ಅವರ ಪುತ್ರ ಇವರು.

ಕನಕಗಿರಿ ಕ್ಷೇತ್ರದ ಶಾಸಕ ಶಿವರಾಜ ತಂಗಡಗಿ ಅವರು ದೇವರ ಹೆಸರಿನಲ್ಲಿ ​​ಪ್ರಮಾಣವಚನ ಸ್ವೀಕರಿಸಿದರು. ಈ ಹಿಂದೆ ಸಿದ್ದರಾಮಯ್ಯ ಸರ್ಕಾರದಲ್ಲಿ ಸಣ್ಣ ನೀರಾವರಿ ಸಚಿವರಾಗಿದ್ದರು.

ಸೇಡಂ ಶಾಸಕ ಶರಣ ಪ್ರಕಾಶ್ ಪಾಟೀಲ್ ಅವರು ದೇವರ ಹೆಸರಿನಲ್ಲಿ ​​ಪ್ರಮಾಣವಚನ ಸ್ವೀಕರಿಸಿದರು. ಹಿಂದಿನ ಸಿದ್ದರಾಮಯ್ಯ ಸರ್ಕಾರದಲ್ಲಿ ವೈದ್ಯಕೀಯ ಶಿಕ್ಷಣ ಸಚಿವರಾಗಿದ್ದರು.

ಭಟ್ಕಳ ಶಾಸಕ ಮಂಕಾಳು ವೈದ್ಯ ಅವರು ದೇವರ ಹೆಸರಿನಲ್ಲಿ ​​ಪ್ರಮಾಣವಚನ ಸ್ವೀಕರಿಸಿದರು. ಇವರು ಇದೇ ಮೊದಲ ಬಾರಿಗೆ ಸಚಿವರಾಗುತ್ತಿದ್ದಾರೆ.

ಬೀದರ್ ಉತ್ತರ ಕ್ಷೇತ್ರದ ಶಾಸಕ ರಹೀಂ ಖಾನ್​ ಅವರು ಇಂಗ್ಲಿಷ್​​ನಲ್ಲಿ ​​ಪ್ರಮಾಣವಚನ ಸ್ವೀಕರಿಸಿದರು. 2018ರಲ್ಲಿ ಕ್ರೀಡೆ ಮತ್ತು ಯುವಜನ ಖಾತೆ ಸಚಿವರಾಗಿ ಕೆಲಸ ಮಾಡಿದ್ದರು.

ಹಿರಿಯೂರು ಶಾಸಕ ಡಿ.ಸುಧಾಕರ್ ಅವರು ತೇರು ಮಲ್ಲೇಶ್ವರ್ ದೇವರ ಹೆಸರಿನಲ್ಲಿ ​​ಪ್ರಮಾಣವಚನ ಸ್ವೀಕರಿಸಿದರು. 2008ರಲ್ಲಿ ಸಮಾಜ ಕಲ್ಯಾಣ ಸಚಿರಾಗಿದ್ದರು.

ಕಲಘಟಗಿ ಶಾಸಕ ಸಂತೋಷ್ ಲಾಡ್​ ಅವರು ದೇವರ ಹೆಸರಿನಲ್ಲಿ ​​ಪ್ರಮಾಣವಚನ ಸ್ವೀಕರಿಸಿದರು.

ಶಾಸಕರೂ ಅಲ್ಲದ, ಎಂಎಲ್ ಸಿಯೂ ಅಲ್ಲದ ಎನ್​. ಎಸ್​​.ಬೋಸರಾಜು ಅವರು ದೇವರ ಹೆಸರಿನಲ್ಲಿ ​​ಪ್ರಮಾಣವಚನ ಸ್ವೀಕರಿಸಿದರು. ಇವರು ರಾಯಚೂರು ಜಿಲ್ಲೆಯ ಮಾನ್ವಿಯವರು.

ಹೆಬ್ಬಾಳ ಕ್ಷೇತ್ರದ ಶಾಸಕ ಭೈರತಿ ಸುರೇಶ್​​ ಅವರು ದೇವರ ಹೆಸರಿನಲ್ಲಿ ​​ಪ್ರಮಾಣವಚನ ಸ್ವೀಕರಿಸಿದರು.

ಮಾಜಿ ಸಿಎಂ ಬಂಗಾರಪ್ಪ ಪುತ್ರ, ಸೊರಬ ಶಾಸಕ ಮಧು ಬಂಗಾರಪ್ಪ ಅವರು ದೇವರ ಹೆಸರಿನಲ್ಲಿ ​​ಪ್ರಮಾಣವಚನ ಸ್ವೀಕರಿಸಿದರು.

ಚಿಂತಾಮಣಿ ಶಾಸಕ ಎಂ.ಸಿ.ಸುಧಾಕರ್ ಅವರು ದೇವರ ಹೆಸರಿನಲ್ಲಿ ​​ಪ್ರಮಾಣವಚನ ಸ್ವೀಕರಿಸಿದರು.

ಬಳ್ಳಾರಿ ಗ್ರಾಮಾಂತರ ಶಾಸಕ ಬಿ.ನಾಗೇಂದ್ರ ಅವರು ದೇವರು, ವಾಲ್ಮೀಕಿ ಹೆಸರಿನಲ್ಲಿ ​​ಪ್ರಮಾಣವಚನ ಸ್ವೀಕರಿಸಿದರು

Advertisement

Udayavani is now on Telegram. Click here to join our channel and stay updated with the latest news.

Next