ಬಸವನಬಾಗೇವಾಡಿ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಳೆದ ಬಾರಿ ಅನೇಕ ಸಮುದಾಯಗಳ ಅಭಿವೃದ್ಧಿಗೆ ಹಾಗೂ ಹೊಸ ನಿಗಮಗಳನ್ನು ಸ್ಥಾಪಿಸಿದ್ದರಿಂದ ಆಯಾ ಸಮುದಾಯಗಳಿಗೆ ಅನುಕೂಲವಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಶಿವಾನಂದ ಪಾಟೀಲ ಹೇಳಿದರು.
ಜಾಲಿಹಾಳ ತಾಂಡಾದಲ್ಲಿ ಬಂಜಾರ ಅಭಿವೃದ್ಧಿ ನಿಗಮ ಹಾಗೂ ತಾಲೂಕಾಡಳಿತ ಸಹಯೋಗದೊಂದಿಗೆ ನಡೆದ ವಾಸಿಸುವನೇ ಮನೆ ಒಡೆಯ ಕಾರ್ಯಕ್ರಮದಲ್ಲಿ 160 ಫಲಾನುಭವಿಗಳಿಗೆ ಮನೆಗಳ ಹಕ್ಕು ಪತ್ರ ವಿತರಿಸಿ ಅವರು ಮಾತನಾಡಿದರು.
ರಾಜ್ಯದಲ್ಲಿ ಅನೇಕ ತಾಂಡಾಗಳು ಇನ್ನೂ ಕೂಡಾ ಕಂದಾಯ ಇಲಾಖೆಯಿಂದ ಹೊರಗುಳಿದಿವೆ. ಅವುಗಳು ಅಭಿವೃದ್ಧಿ ಕಾಣದೆ ಅಲ್ಲಿನ ಜನತೆ ಕಷ್ಟ ಮನಗಂಡು ಸಿದ್ದರಾಮಯ್ಯನವರು ಬಂಜಾರದ ನಿಗಮ ಸ್ಥಾಪಿಸಿದ್ದರಿಂದ ಇಂದು ತಾಂಡಾಗಳು ಅಭಿವೃದ್ಧಿ ಪಥದತ್ತ ಸಾಗುತ್ತಿವೆ ಎಂದರು.
ಬಸವನಬಾಗೇವಾಡಿ ತಾಲೂಕಿನಲ್ಲಿ ಸುಮಾರು 30ರಿಂದ 50 ತಾಂಡಾ ಇರಬಹುದು. ಆದರೆ ಆ ತಾಂಡಾಗಳು ಕಂದಾಯ ಇಲಾಖೆ ಮತ್ತು ಪುರಸಭೆಗೆ ಒಳಪಡದೆ ಅಭಿವೃದ್ಧಿಯಿಂದ ವಂಚಿತವಾಗಿವೆ. ಅಲ್ಲಿನ ಜನತಗೆ ಸರಕಾರದ ಅನೇಕ ಯೋಜನೆಗಳು ಕೈ ತಪ್ಪಿ ಹೋಗುತ್ತಿವೆ. ಆದರೆ ಜಾಲಿಹಾಳ ಜನತೆಗೆ ಇನ್ನೂ ಮುಂದೆ ಸರಕಾರದ ಪ್ರತಿಯೊಂದು ಯೋಜನೆ ಕೂಡಾ ದೊರಕುತ್ತದೆ. ಈ ತಾಂಡಾಕ್ಕೆ ಅಗತ್ಯವಿರುವ ಅಭಿವೃದ್ಧಿ ಕಾಮಗಾರಿ ಕೈಗೊಂಡು ಮಾದರಿ ತಾಂಡಾ ಮಾಡಲು ಶ್ರಮಿಸುವುದಾಗಿ ಹೇಳಿದರು.
ವಿರಕ್ತಮಠದ ಸಿದ್ದಲಿಂಗ ಶ್ರೀಗಳು, ಶಿರೂರಿನ ಕುಮಾರ ಮಹಾರಾಜರು ಸಾನ್ನಿಧ್ಯ, ಫರಿಜಾನ್ ಚೌಧರಿ ಅಧ್ಯಕ್ಷತೆ ವಹಿಸಿದ್ದರು. ತಹಶೀಲ್ದಾರ್ ಎಂ.ಎನ್. ಚೋರಗಸ್ತಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಈರಣ್ಣ ಪಟ್ಟಣಶೆಟ್ಟಿ, ಪುರಸಭೆ ಮುಖ್ಯಾಧಿಕಾರಿ ಬಿ.ಎ. ಸೌದಾಗರ, ಪುರಸಭೆ ಸದಸ್ಯ ಮುತ್ತು ಉಕ್ಕಲಿ, ಬಸಪ್ಪ ರಾಠೊಡ, ಶ್ರೀದೇವಿ ಲಮಾಣಿ, ಜಾಲಿಹಳ್ಳ ತಾಂಡಾ ಮುಖಂಡರಾದ ಸಂಗಪ್ಪ ಬೆಣ್ಣೂರ, ಈರಪ್ಪ ಸುಂಕದ, ಮುರಗೇಪ್ಪ ಮಿಣಜಗಿ, ಲಕ್ಷ್ಮಣ ಮಾಲಗಾರ, ನಿಂಗಪ್ಪ ಜಾಧವ, ಬಸು ಜಾಧವ, ಶಂಕರ ರಾಠೊಡ, ನಿಂಗಪ್ಪ ಜಾಧವ, ಲಿಂಬು ರಾಠೊಡ, ನಾಮದೇವ ನಾಯಕ, ಶೆಟ್ಟಪ್ಪ ರಾಠೊಡ, ಅರ್ಜುನ ಜಾಧವ ಸೇರಿದಂತೆ ಅನೇಕರು ಭಾಗವಹಿಸಿದ್ದರು.
ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರವಿ ರಾಠೊಡ ಪ್ರಾಸ್ತಾವಿಕ ಮಾತನಾಡಿದರು. ಬಿ.ಎಸ್. ಪಾವಾರ ಸ್ವಾಗತಿಸಿದರು. ಶಿಕ್ಷಕ ಎಚ್.ಬಿ. ಬಾರಿಕಾಯಿ ಸ್ವಾಗತಿಸಿದರು.