ಹುಣಸೂರು: ಮೋದಿಯವರು ಪ್ರಧಾನಿಯಾದ ನಂತರ ದೇಶವು ಅಭಿವೃದ್ದಿ ಪಥದಲ್ಲಿ ಸಾಗಿದೆ. ಟೆಕ್ನಾಲಜಿಯನ್ನು ಬಳಸಿ ದೇಶವು ಯಾವ ರೀತಿಯಲ್ಲಿ ಅಭಿವೃದ್ಧಿಯಾಗಿದೆ, ಮತ್ತೊಂದೆಡೆ ಸುಭದ್ರವಾಗಿದೆ ಎಂದು ರಾಜ್ಯಸಭಾ ಸದಸ್ಯ ಜಗ್ಗೇಶ್ ಮನವಿ ಮಾಡಿದರು.
ತಾಲೂಕು ಬನ್ನಿಕುಪ್ಪೆಯ ಜಾತ್ರೆಮಾಳದಲ್ಲಿ ಬಿಜೆಪಿ ಘಟಕ ಆಯೋಜಿಸಿದ್ದ ಬೂತ್ ವಿಜಯಸಂಕಲ್ಪ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ರಾಜ್ಯದಲ್ಲಿ ಇನ್ನು ಮೂರು ತಿಂಗಳಲ್ಲಿ ಚುನಾವಣೆ ಬರುತ್ತಿದೆ. ಜನತೆಗೆ ಅಭಿವೃದ್ಧಿಬೇಕಾ, ವಿರೋಧ ಪಕ್ಷದವರು ಹಂಚುವ ಹಣ-ಹೆಂಡ ಬೇಕಾ ನೀವೇ ತೀರ್ಮಾನ ಮಾಡಿ. ಇವೆಲ್ಲ ಹಳೇ ಟೆಕ್ನಿಕ್ ಇದರಾಚೆಗಿನ ಟೆಕ್ನಾಲಾಜಿ ಬಳಸಿಕೊಂಡು ಯುವಕರು ಮುಂದೆ ಬರಬೇಕೆಂಬುದೇ ಪ್ರಧಾನಿ ಕನಸು, ಮೋದಿ ಟೀಮ್ ಅಭಿವೃದ್ದಿಗಾಗಿ ಹಲವಾರು ಯೋಜನೆಗಳನ್ನು ಹಮ್ಮಿಕೊಂಡಿದೆ. ಒಂದು ದೇಶ ಅಭಿವೃದ್ದಿಯಾಗಬೇಕಾದಲ್ಲಿ ಪ್ರತಿಯೊಬ್ಬ ಪ್ರಜೆಯೂ ಮೋದೊಯವರಂತೆ ಚಿಂತನೆ ನಡೆಸಬೇಕಿದೆ. ಚುನಾವಣಾ ಕಾರಣಕ್ಕಾಗಿ ವಿರೋಧ ಪಕ್ಷದವರು ವೈಯಕ್ತಿಕವಾಗಿ ಕೀಳುಮಟ್ಟದ ಹೊಲಸು ಮಾತುಗಳನ್ನಾಡುತ್ತಿದ್ದಾರೆ. ವಿಶ್ವಗುರು ಮೋದಿ ಆಗಿದ್ದಾರೆ. ಮೋದಿ ಅವರನ್ನು ಹಿಟ್ಲರ್ ಎಂದು ಅವಹೇಳನ ಮಾಡುವುದು ತರವಲ್ಲ, ಅವರ ಜನಪ್ರಿಯತೆ ಏನು ಕಡಿಮೆ ಆಗುವುದಿಲ್ಲ ಎಂದರು.
ಇದನ್ನೂ ಓದಿ:ಪಕ್ಷದ ಕಾರ್ಯಕರ್ತನ ಮೇಲೆ ಕಲ್ಲು ತೂರಿದ ತಮಿಳುನಾಡು ಸಚಿವ ; ವೈರಲ್ ವಿಡಿಯೋ
ಸಿದ್ದು ಹಳೇ ಸಿನಿಮಾದಂತೆ: ಸಿದ್ದರಾಮಯ್ಯನ ಹಳೆ ಸಿನಿಮಾವನ್ನು ಯಾರು ನೋಡುವುದಿಲ್ಲ. ನಮ್ಮ ಬಿಜೆಪಿ ಪಕ್ಷದ ಹೊಸ ಸಿನಿಮಾವನ್ನು ಎಲ್ಲರೂ ನೋಡುತ್ತಾರೆ. ಹಳೇ ಮೈಸೂರು ಭಾಗದಲ್ಲಿ ರಾಜಕೀಯ ಅಪ್ಪ ಹಾಕಿದ ಆಲದ ಮರದ ರೀತಿಯಾಗಿದೆ. ಅದು ಈ ಬಾರಿ ಬದಲಾವಣೆ ಆಗಬೇಕೆಂದರು
Related Articles
ದೇಶದ ಶೇಕಡ 75ರಷ್ಟು ಜನ ನಮ್ಮ ಸಿದ್ಧಾಂತ ಒಪ್ಪಿದ್ದಾರೆ. ಮಿಸ್ ಕಾಲ್ ಕೊಟ್ಟು, ಬಿಜೆಪಿ ಪಕ್ಷದ ಮೆಂಬರ್ ಆಗಿ ಮೋದಿ ಖುಷಿ ಪಡುತ್ತಾರೆ. ಈ ಭಾಗದಲ್ಲಿ ಬಿಜೆಪಿ ಗೆಲ್ಲಬೇಕೆಂದು ಆಶಿಸಿದರು.
ತಾಲೂಕು ಅಧ್ಯಕ್ಷ ನಾಗಣ್ಣಗೌಡ, ಮುಖಂಡ ರಮೇಶ್ ಕುಮಾರ್, ಹನಗೋಡು ಮಂಜುನಾಥ್, ಸೂರ್ಯಕುಮಾರ್, ನಾಗರಾಜ್ ಮಲ್ಲಾಡಿ, ಸುರೇಶ್ ಕುಮಾರ್ ಚಂದ್ರಶೇಖರ್, ಅಣ್ಣಯ್ಯ ನಾಯಕ, ಚಂದ್ರು, ನರಸ ನಾಯಕ, ಅರುಣ್ ಚೌವ್ಹಾನ್, ಪ್ರಫುಲ್ಲಾಮಲ್ಲಾಡಿ, ಮತ್ತಿತರರು ಬನ್ನಿಕುಪ್ಪೆಯ ಹಲವು ಮನೆಗಳಿಗೆ ಭೇಟಿ ನೀಡಿ ಕರಪತ್ರಗಳನ್ನು ಹಂಚಿ, ಬಿಜೆಪಿ ಸದಸ್ಯತ್ವ ಪಡೆಯಲು ಮಿಸ್‌ಕಾಲ್ ನೀಡುವಂತೆ ಮನವಿ ಮಾಡಿದರು.