Advertisement

ಸಿದ್ದರಾಮಯ್ಯ ಎರಡು ಕ್ಷೇತ್ರದಲ್ಲಿ ಸ್ಪರ್ಧಿಸಬೇಕು: ಆದಿನಾಡು ಚಿಕ್ಕಮ್ಮ ತಾಯಿ ನುಡಿ

03:47 PM Jan 13, 2023 | Team Udayavani |

ಮಳವಳ್ಳಿ: ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸುವಂತೆ ಅವರ ಪುತ್ರ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಅವರ ಮೂಲಕ ಆದಿನಾಡು ಚಿಕ್ಕಮ್ಮ ತಾಯಿ ಸೂಚಿಸಿದೆ ಎನ್ನಲಾದ ವಿಡಿಯೋ ವೈರಲ್ ಆಗಿದೆ.

Advertisement

ತಾಲ್ಲೂಕಿನ ಚೊಟ್ಟನಹಳ್ಳಿ ಗ್ರಾಮದ ಆದಿನಾಡು ಚಿಕ್ಕಮ್ಮ ತಾಯಿ ದೇವಸ್ಥಾನದಲ್ಲಿ ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ಸಿದ್ದರಾಮಯ್ಯ ಪುತ್ರ ಡಾ.ಯತೀಂದ್ರ ಸಿದ್ದರಾಮಯ್ಯ ಅವರು ದೇವರ ದರ್ಶನ ಪಡೆಯುವ ವೇಳೆ ಆರ್ಚಕ ಟಿ.ಲಿಂಗಣ್ಣ ಅವರ ಮೈಮೇಲೆ ಆವಾಹನೆ ಬಂದ ಚಿಕ್ಕಮ್ಮ ತಾಯಿ, ‘ನಿಮಗೆ ಪ್ರಬಲ ಶಕ್ತಿಗಳ ವಿರೋಧ ಇದೆ. ಒಂದು ಕಡೆ ಬಾಹುಬಲ ಚಾಚಿದ್ರೆ ಅಗುವುದಿಲ್ಲ, ಬಾಹುಬಲ ಎರಡು ಕಡೆ ಚಾಚಬೇಕು. ಒಂದೇ ಕರೆ ಚಾಚಿದರೆ ತಪ್ಪಾಗುತ್ತದೆ ಅರ್ಥ ಆಯತ್ತೇನಪ್ಪ” ಎಂದು ಯತೀಂದ್ರ ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಿ, ‘ಎರಡು ಚಾಚಿದರೆ ಗೆಲ್ಲಿಸಿಕೊಂಡು ಬರುವೆ ನಾನು ನಿಮ್ಮ ಮನೆ ದೇವರು ಎನ್ನುವುದು ತಿಳಿದಿದೆಯೇ” ಎಂದು ಹೇಳಿರುವುದು ವಿಡಿಯೋದಲ್ಲಿದೆ.

ಇದನ್ನೂ ಓದಿ:ಉಳ್ಳಾಲ: ಬುರ್ದುಗೋಳಿ ಗುಳಿಗಜ್ಜ ಕ್ಷೇತ್ರಕ್ಕೆ ಹುಂಜ ಹರಕೆ ನೀಡಿದ ‘ಕರಿ ಹೈದ ಕರಿಯಜ್ಜ’ ಚಿತ್ರತಂಡ

ಈ ವೇಳೆ ಯತೀಂದ್ರ ಸಿದ್ದರಾಮಯ್ಯ ಕೈಮುಗಿಯುತ್ತಾ ನಿಂತಿರುವ ವಿಡಿಯೋ ವೈರಲ್ ಆಗಿದೆ.

Advertisement

Udayavani is now on Telegram. Click here to join our channel and stay updated with the latest news.

Next