Advertisement

ಸಿದ್ದರಾಮಯ್ಯಗೆ ಭವಿಷ್ಯವಿದೆ: ಜಯಚಂದ್ರ

03:45 AM Mar 12, 2017 | Team Udayavani |

ಚಿಕ್ಕಮಗಳೂರು: ಸಿದ್ದರಾಮಯ್ಯ ಈಗ ಮುಖ್ಯಮಂತ್ರಿಗಳಾಗಿದ್ದಾರೆ. ಅವರಿಗೆ ಭವಿಷ್ಯವಿದೆ. ಶ್ರೀನಿವಾಸ ಪ್ರಸಾದ್‌ಗೆ ಯಾವ ಭವಿಷ್ಯ ಇರಲು ಸಾಧ್ಯ ಎಂದು ಸಚಿವ ಜಯಚಂದ್ರ ಪ್ರಶ್ನಿಸಿದ್ದಾರೆ.

Advertisement

ತರೀಕೆರೆ ತಾಲೂಕಿನ ಲಕ್ಕವಳ್ಳಿಯಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಂಜನಗೂಡು ಉಪಚುನಾವಣೆ ಸಂಬಂಧ ಶ್ರೀನಿವಾಸ ಪ್ರಸಾದ್‌ ಸಿಎಂ ಸಿದ್ದರಾಮಯ್ಯ ಅವರಿಗೆ  ಹಾಕಿರುವ ಸವಾಲಿಗೆ ಪ್ರತಿಕ್ರಿಯಿಸಿದರು. ಸಿದ್ದರಾಮಯ್ಯ ಈಗ ಮುಖ್ಯಮಂತ್ರಿಗಳಾಗಿದ್ದಾರೆ. ಅವರಿಗೆ ಭವಿಷ್ಯವಿದೆ. ಶ್ರೀನಿವಾಸ ಪ್ರಸಾದ್‌ಗೆ ಯಾವ ಭವಿಷ್ಯ ಇರಲು ಸಾಧ್ಯ ಎಂದು ಪ್ರಶ್ನಿಸಿದರು.

ರಾಜ್ಯದಲ್ಲಿ ನಡೆಯುತ್ತಿರುವ ಉಪಚುನಾವಣೆ ರಾಜ್ಯ ರಾಜಕಾರಣದ ಮೇಲೆ ಯಾವ ಪ್ರಭಾವವನ್ನೂ ಬೀರುವುದಿಲ್ಲ. ಮುಂಬರುವ ಸಾರ್ವತ್ರಿಕ ಚುನಾವಣೆಗೆ ಈ ಚುನಾವಣಾ ಫಲಿತಾಂಶ ದಿಕ್ಸೂಚಿಯೂ ಅಲ್ಲ ಎಂದರು.

ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಕುರಿತು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಟ್ವೀಟ್‌ ಮಾಡಿರುವ ಕುರಿತು ಪ್ರತಿಕ್ರಿಯಿಸಿದ ಸಚಿವರು, ಸಿ.ಟಿ.ರವಿ ಇಂತಹ ಕೀಳು ಮಟ್ಟದ ಹೇಳಿಕೆ ಕೊಡಬಾರದು. ಅದು ಅವರ ಘನತೆಗೆ ಕುತ್ತು ತರುತ್ತದೆ ಎಂದು ಹೇಳಿದರು. ಈಗ ಸಣ್ಣ ಪುಟ್ಟ ಕಾಯಿಲೆಗಳಿಗೂ ವಿದೇಶಕ್ಕೆ ಹೋಗುವುದು ಸಾಮಾನ್ಯ. ಪ್ರತಿಯೊಬ್ಬರೂ ಸೂಪರ್‌ ಸ್ಪೆಷಲ್‌ ವೈದ್ಯರು ಬೇಕೆಂದು ಬಯಸುತ್ತಾರೆ. ಜಯಲಲಿತಾ ಅನಾರೋಗ್ಯಕ್ಕೆ ಒಳಗಾದಾಗ ಲಂಡನ್‌ನಿಂದ ವೈದ್ಯರು ಬಂದು ಚಿಕಿತ್ಸೆ ನೀಡಲಿಲ್ಲವೆ ಎಂದು ಪ್ರಶ್ನಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next