Advertisement
ಬಸವ ಕಲ್ಯಾಣದ ಮಹಾಮನೆ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಧರ್ಮ ಒಡೆಯುವ ಕೆಲಸವನ್ನು ಸಿದ್ದರಾಮಯ್ಯ ಮಾಡಿಲ್ಲ. ಇದೀಗ ಲಿಂಗಾಯತ ಧರ್ಮದ ಚೆಂಡು ಕೇಂದ್ರದ ಅಂಗಳದಲ್ಲಿದೆ. ಆದರೆ, ಎಬಿಸಿಡಿ ಗೊತ್ತಿಲ್ಲದ ವ್ಯಕ್ತಿಗಳು ಕೇಂದ್ರಕ್ಕೆ ತಪ್ಪು ಮಾಹಿತಿ ನೀಡುತ್ತಿರುವ ಹಿನ್ನೆಲೆಯಲ್ಲಿ ಈವರೆಗೆ ಯಾವುದೇ ಬೆಳವಣಿಗೆಗಳು ನಡೆದಿಲ್ಲ. ಡಿಸೆಂಬರ್‌ನಲ್ಲಿ ಮೂರು ದಿನ ನಿರಂತರ ಹೋರಾಟ ನಡೆಸುವ ಮೂಲಕ ಕೇಂದ್ರದ ಗಮನ ಸೆಳೆಯುವುದಾಗಿ ತಿಳಿಸಿದರು.
ಬಸವ ಕಲ್ಯಾಣದಲ್ಲಿನ ಮೂಲ ಅನುಭವ ಮಂಟಪದ ಸಂಶೋಧನೆ ನಡೆಸಿ, ಶರಣರ ಚಿನಂತನೆ ಪರಿಕಲ್ಪನೆಯ ಹೊಸ ಅನುಭವ ಮಂಟಪವನ್ನು ಸರ್ಕಾರ ನಿರ್ಮಿಸಬೇಕು. ಈಗಿರುವ ಮಂಟಪ ಮೂಲ ಅನುಭವ ಮುಂಟಪ ಅಲ್ಲ. ಪುರಾತನ ಮೂಲ ಅನುಭವ ಮಂಟಪ ಎಲ್ಲಿದೆ ಎಂಬುದು ಕಲ್ಯಾಣದ ಜನರಿಗೆ ಗೊತ್ತಿದೆ. ಅಲ್ಲದೆ, ಹೈದ್ರಾಬಾದ್ ಮೂಲದ ವ್ಯಕ್ತಿ ಆ ಭೂಮಿಯನ್ನು ಮಾರಾಟ ಮಾಡಲು ಸಿದ್ಧವಿದ್ದು, ಸರ್ಕಾರ ಮುಂದೆ ಬಂದು ಆ ಭೂಮಿ ಖರೀದಿಸಿ 12ನೇ ಶತಮಾನದ ಶರಣರ ಚಿಂತನೆಯ ಅನುಭವ ಮಂಟಪ ನಿರ್ಮಿಸಬೇಕಿದೆ. ಈ ನಿಟ್ಟಿನಲ್ಲಿ 17ನೇ ಕಲ್ಯಾಣ ಪರ್ವದಲ್ಲಿ ಸರ್ವಾನುಮತದಿಂದ ನಿರ್ಣಯ ತೆಗೆದುಕೊಂಡು ಸರ್ಕಾರಕ್ಕೆ ಒತ್ತಾಯಿಸುವುದಾಗಿ ತಿಳಿಸಿದರು.