ಬಳ್ಳಾರಿ: “ವಿಧಾನ ಮಂಡಲ ಅಧಿವೇಶನ ನಡೆಯಲು ಬಿಡಲ್ಲ ಎನ್ನುವ ವಿರೋಧ ಪಕ್ಷದ ನಾಯಕ, ಮಾಜಿ ಸಿಎಂ ಸಿದ್ದರಾಮಯ್ಯರ ಸರ್ವಾಧಿಕಾರಿ ಧೋರಣೆ ನಡೆಯಲ್ಲ’ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಸಿದ್ದರಾಮಯ್ಯ ಅವರು ಅಧಿ ವೇಶನ ನಡೆಯಲು ಬಿಡಲ್ಲ ಎಂದು ಯಾವ ಲೆಕ್ಕದಲ್ಲಿ ಹೇಳಿದ್ದಾರೋ ಗೊತ್ತಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಗೂಂಡಾಯಿಸಂ ನಡೆಯಲ್ಲ. ಏನೇ ವಿಷಯ ಇದ್ದರೂ ಸಭೆಯಲ್ಲಿ ಚರ್ಚೆ ನಡೆಸಬೇಕು. ಅದನ್ನು ಬಿಟ್ಟು ಗೂಂಡಾಗಳು ಹೇಳಿದಂತೆ ಅ ಧಿವೇಶನ ನಡೆಯಲು ಬಿಡಲ್ಲ ಎಂದು ಸಿದ್ದರಾಮಯ್ಯ ಹೇಳಬಾರದು.
ಅವರು ಬರಲಿ, ಬಿಡಲಿ ಅಧಿವೇಶನ ನಡೆಯಲಿದೆ’ ಎಂದರು. ರಾಜಕೀಯ ಪಕ್ಷ ಅಂದರೆ ಮರ್ಯಾದೆ ಇರಲ್ವಾ ಎಂದು ಪ್ರಶ್ನಿಸಿದ ಈಶ್ವರಪ್ಪ, ಜಗತ್ತೇ ಗೌರವಿಸುವ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕೊಲೆಗೆಡುಕ ಅಂದ್ರೆ ಸುಮ್ಮನೆ ಇರೋಕೆ ಆಗುತ್ತಾ?. ಮಾಜಿ ಮುಖ್ಯಮಂತ್ರಿ ಆದವರು ಹೀಗೆ ಹೇಳಿದರೆ ಹೇಗೆ ಎಂದು ಮರು ಪ್ರಶ್ನಿಸಿದರು.
ವೈಯಕ್ತಿಕವಾಗಿ ತೆಗೆದುಕೊಳ್ಳಬೇಡಿ: ಸ್ವಾತಂತ್ರ ಹೋರಾಟಗಾರ ದೊರೆಸ್ವಾಮಿ- ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನಡುವಿನ ಆರೋಪ- ಪ್ರತ್ಯಾರೋಪಗಳನ್ನು ಯಾರೊಬ್ಬರೂ ವೈಯಕ್ತಿಕವಾಗಿ ತೆಗೆದುಕೊಳ್ಳ ಬಾರದು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆರೋಪ-ಪ್ರತ್ಯಾರೋಪ ಸಹಜ. ಕರ್ನಾಟಕ ದಲ್ಲಿ ಗೂಂಡಾಯಿಸಂ ಹಾಗೂ ಸರ್ವಾಧಿ ಕಾರಿ ಧೋರಣೆ ನಡೆಯಲ್ಲ ಎಂದರು.
ಬರುವುದರ ಬಗ್ಗೆ ಅವರನ್ನೇ ಕೇಳಿ: ಬಳ್ಳಾರಿ ಗ್ರಾಮೀಣ ಕ್ಷೇತ್ರದ ಶಾಸಕ ಬಿ.ನಾಗೇಂದ್ರ ಬಿಜೆಪಿ ಸೇರುವ ಕುರಿತ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸಚಿವರು, “ಶಾಸಕ ನಾಗೇಂದ್ರ ನಾನು ಸ್ನೇಹಿತರು. ಸ್ನೇಹದಿಂದ ಕಾರ್ಯಕ್ರಮಕ್ಕೆ ಕರೆದಿದ್ದೇನೆ. ಬರುವುದು ಬಿಡುವುದರ ಬಗ್ಗೆ ಅವರನ್ನೇ ಕೇಳಿ’ ಎಂದು ಜಾರಿಕೊಂಡರು.