Advertisement
ಪಟ್ಟಣದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇವದುರ್ಗ ಶಾಸಕ ಶಿವನಗೌಡ ನಾಯಕ ಅವರು ತಮ್ಮ ಕ್ಷೇತ್ರದಲ್ಲಿ ಹಿಂದಿನ ಭಾಜಪ ಸರಕಾರದಲ್ಲಿ ಜಾರಿಗೆ ತಂದ ಹಲವಾರು ಯೋಜನೆ ಅನುಷ್ಠಾನಗೊಳಿಸುವಂತೆ ಒತ್ತಾಯಿಸಿ ಕಳೆದ 32ದಿನಗಳಿಂದ ಧರಣಿ ನಡೆಸುತ್ತಿದ್ದಾರೆ. ಗುರುವಾರವಷ್ಟೇ ಸಿದ್ದರಾಮಯ್ಯ ಅವರು ಲಿಂಗಸುಗೂರು ತಾಲೂಕಿಗೆ ಬಂದ ವೇಳೆಯಲ್ಲಿ ಶಾಸಕರ ಭೇಟಿಗೆ ಅವಕಾಶ ನೀಡಿಲ್ಲ. ಅವರ ಕರ್ತವ್ಯದ ಅರಿವು ಬಿಟ್ಟು ಸರ್ವಾ ಧಿಕಾರಿಯಂತೆ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದರು.
ಸರಕಾರವತಿಯಿಂದ ಇನ್ನೂವರಿಗೂ ಒಂದು ಪೈಸೆ ನೀಡಿಲ್ಲ ಎಂದು ಆರೋಪಿಸಿದರು. ನಂದವಾಡಗಿ ಏತ ನೀರಾವರಿ ಯೋಜನೆ ಎ ಮತ್ತು ಬಿ ಸ್ಕೀಮ್‌ನಲ್ಲಿ ಇದ್ದಿಲ್ಲ. ಇದಕ್ಕೆ ನೀರಿನ ಹಂಚಿಕೆ ಕೂಡ ಇದ್ದಿಲ್ಲ. ಇದನ್ನು ಜಾರಿಗೊಳಿಸಿದರೆ ಲಿಂಗಸುಗೂರು ಹಾಗೂ ಮಾನ್ವಿ ತಾಲೂಕಿನ 90 ಸಾವಿರ ಎಕರೆ ಪ್ರದೇಶಕ್ಕೆ ನೀರುಣಿಸಬುದು ಎಂಬುದನ್ನು ಮನಗಂಡು ಕಷ್ಟುಪಟ್ಟು ಗೋದಾವರಿಯಲ್ಲಿ ನಾಲ್ಕು ಟಿಎಂಸಿ ಅಡಿ ನೀರು ಹಂಚಿಕೆ ಮಾಡಿ ಬಜೆಟ್‌ನಲ್ಲಿ ಘೋಷಿಸಿ ಟೆಂಡರ್ ಹಂತಕ್ಕೆ ತರಲಾಗಿತ್ತು. ಆದರೆ ಕಾಂಗ್ರೆಸ್ ಸರಕಾರ ಬಂದು ನಾಲ್ಕು ವರ್ಷದ ನಂತರ ಈ ಹಿಂದೆ ಜಾರಿಮಾಡಿದ್ದ ನಂದವಾಡಗಿ ಯೋಜನೆ ಪ್ರಾರಂಭಿಸಿದೆ. ಇದು ಕಾಂಗ್ರೆಸ್‌ಕ್ಕೆ ಇರುವ ನೀರಾವರಿ ಬದ್ಧತೆಯಾಗಿದೆ. ಕಳೆದ ಬಿಜೆಪಿ ಸರಕಾರ ಐದು ವರ್ಷದ ಅವ ಧಿಯಲ್ಲಿ
ನೀರಾವರಿ ಕ್ಷೇತ್ರಕ್ಕೆ 18 ಸಾವಿರ ಕೋಟಿ ರೂ. ಖರ್ಚು ಮಾಡಿ 7 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಒದಗಿಸಿದೆ. ಕಾಂಗ್ರೆಸ್ ಸರಕಾರ 36 ಸಾವಿರ ಕೋಟಿ ರೂ. ಖರ್ಚು ಮಾಡಿ 6 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ನೀರುಣಿಸಿದೆ ಎಂದು ಹೇಳಿಕೊಳ್ಳುತ್ತಿದೆ. ಇದರಲ್ಲಿ ಬಿಜೆಪಿ ಸರಕಾರದ ಅವ ಧಿಯಲ್ಲಿನ ಯೋಜನೆಗಳು ಸೇರಿಕೊಂಡಿವೆ ವಿನಃ ಹೊಸ ಯೋಜನೆಗಳಿಲ್ಲ ಎಂದರು.
Related Articles
ವೆಂಕಟರಾವ ಜಾಹಗೀರದಾರ, ಚನ್ನುಕುಮಾರ, ವಿಶ್ವನಾಥ ಆನ್ವರಿ ಇದ್ದರು.
Advertisement