Advertisement

ಕೊಪ್ಪಳಕ್ಕೆ ಪ್ರಜಾಧ್ವನಿ ಬಸ್ ಯಾತ್ರೆ: ಗವಿಮಠಕ್ಕೆ ಭೇಟಿ ನೀಡಿದ ಸಿದ್ದರಾಮಯ್ಯ, ಡಿಕೆಶಿ

06:29 PM Jan 17, 2023 | Team Udayavani |

ಕೊಪ್ಪಳ: ಕೆಪಿಸಿಸಿಯಿಂದ ಆರಂಭವಾಗಿರುವ ಪ್ರಜಾ ಧ್ವನಿ ಯಾತ್ರೆಯ ಬಸ್ ಯಾತ್ರೆಯು ಕೊಪ್ಪಳಕ್ಕೆ ಆಗಮಿಸಿದ್ದು ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸೇರಿ ಹಲವು ನಾಯಕರು ಕೊಪ್ಪಳದ ಶ್ರೀ ಗವಿಮಠಕ್ಕೆ ನೀಡಿ ಶ್ರೀ ಗವಿಸಿದ್ದೇಶ್ವರ ಸ್ವಾಮೀಜಿಗಳ ಜೊತೆ ಸಮಾಲೋಚನೆ ನಡೆಸಿದರು.

Advertisement

ಶ್ರೀಗಳನ್ನು ಸನ್ಮಾನಿಸಿದ ನಾಯಕರು ಶ್ರೀಗಳ ಯೋಗಕ್ಷೇಮ ವಿಚಾರಿಸಿ ಲೋಕಾಭಿರಾಮ ಮಾತುಕತೆ ನಡೆಸಿದರು.

ಬಳಿಕ ನಗರದ ಬಸವೇಶ್ವರ ವೃತ್ತದ ಬಳಿ ಬಸವೇಶ್ವರ ಮೂರ್ತಿಗೆ ಹೂವಿನ ಮಾಲೆ ಹಾಕಿ ನಂತರ ಹೆದ್ದಾರಿ ರಸ್ತೆಯಲ್ಲಿ ಬಹಿರಂಗ ಮೆರವಣಿಗೆ ಮೂಲಕ ತಾಲೂಕು ಕ್ರೀಡಾಂಗಣಕ್ಕೆ ಬಸ್ ಯಾತ್ರೆ ಆಗಮಿಸಿತು. ಈ ವೇಳೆ ಜಿಲ್ಲಾ ಕಾಂಗ್ರೆಸ್ ಸಮಿತಿಯು ಪಟಾಕಿ ಸಿಡಿಸುವ ಮೂಲಕ ಭವ್ಯ ಸ್ವಾಗತ ಕೋರಿತು.

ಇದನ್ನೂ ಓದಿ:ಆತನ ವಿರಾಟ್ ಗೆ ಸಮನಾಗಿದ್ದ..: ಸರಣಿ ಶ್ರೇಷ್ಠ ಪ್ರಶಸ್ತಿ ಆಯ್ಕೆಯ ಬಗ್ಗೆ ಗಂಭೀರ್ ತಕರಾರು

ಬಸ್ ಯಾತ್ರೆಯಲ್ಲಿ ರಾಜ್ಯ ಉಸ್ತುವಾರಿ ಸುರ್ಜೆವಾಲ, ಬಿ ಕೆ ಹರಿಪ್ರಸಾದ್, ನಾಯಕರಾದ ಎಚ್‌ ಕೆ ಪಾಟೀಲ್, ಬಸವರಾಜ ರಾಯರಡ್ಡಿ, ಈಶ್ಚರ ಖಂಡ್ರೆ, ಬಸನಗೌಡ ಪಾಟೀಲ್ ಬಾದರ್ಲಿ, ಸತೀಶ ಜಾರಕಿಹೊಳಿ, ಶಾಸಕ ರಾಘವೇಂದ್ರ ಹಿಟ್ನಾಳ,‌ ಅಮರೇಗೌಡ ಬಯ್ಯಾಪೂರ, ಶಿವರಾಜ ತಂಗಡಗಿ ಸೇರಿ ಹಲವು ಗಣ್ಯ ನಾಯಕರು ಪಾಲ್ಗೊಂಡಿದ್ದರು.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next