Advertisement

ಸಿದ್ದು- ಡಿಕೆಶಿ ಸಂಧಾನದಲ್ಲಿ‌ ಕೊನೆಗೂ ಯಶಸ್ವಿಯಾದ ಕೈ ತಟಸ್ಥ ಬಣ

05:51 PM Jul 08, 2022 | Team Udayavani |

ಬೆಂಗಳೂರು : ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ಮಧ್ಯೆ ಸಂಧಾನ ಮಾಡಿಸುವಲ್ಲಿ ಕಾಂಗ್ರೆಸ್ ನ ತಟಸ್ಥ ಬಣದ ಪ್ರಯತ್ನ ಕೊನೆಗೂ ಯಶಸ್ವಿಯಾಗಿದೆ.

Advertisement

ಸಿದ್ದರಾಮೋತ್ಸವ, ಅದಕ್ಕೆ ಶಿವಕುಮಾರ್ ನೀಡುತ್ತಿದ್ದ ಪರೋಕ್ಷ ಟಾಂಗ್ ಇತ್ಯಾದಿ ಒಳೇಟುಗಳ ನಡುವೆಯೇ ಕಾಂಗ್ರೆಸ್ ನ ತಟಸ್ಥ ಬಣವೊಂದು ಕಳೆದ ಎರಡು ತಿಂಗಳಿಂದ ಉಭಯ ನಾಯಕರ ಮಧ್ಯೆ ಸಂಧಾನ ಸೇತುವೆ ನಿರ್ಮಾಣಕ್ಕೆ ಯತ್ನಿಸುತ್ತಿತ್ತು. ” ನೀವಿಬ್ಬರೂ ಕಚ್ಚಾಡಿದರೆ, ಪಕ್ಷಕ್ಕೆ ಸೋಲು ಶತಸಿದ್ಧ ” ಎಂದು ಈ ಬಣ ಪದೇ ಪದೇ ಮನವರಿಕೆ ಮಾಡಿದ್ದರ ಫಲವಾಗಿ ಸಿದ್ದರಾಮಯ್ಯ ಶಿವಕುಮಾರ್ ಅವರನ್ನು ಉಪಹಾರಕ್ಕಾಗಿ‌ ಮನೆಗೆ ಕರೆಸಿಕೊಂಡು ಚರ್ಚೆ ನಡೆಸಿದ್ದಾರೆ.

ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಮಾಜಿ ಸಚಿವರಾದ ಕೃಷ್ಣ ಭೈರೇಗೌಡ, ಸಿದ್ದರಾಮಯ್ಯ ಅವರ ಮಿತ್ರ, ಡಿಕೆಶಿ ಮಾರ್ಗದರ್ಶಕ ರಮೇಶ್ ಕುಮಾರ್, ಸಿದ್ದರಾಮಯ್ಯ ಬಣದಲ್ಲಿ ಗುರುತಿಸಿಕೊಂಡಿದ್ದರೂ ಶಿವಕುಮಾರ್ ಗೆ ಆಪ್ತರಾಗಿದ್ದ ಚಲುವರಾಯಸ್ವಾಮಿ, ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಮೊದಲಾದವರು ನಡೆಸಿದ ಸಂಧಾನ ಈಗ ಯಶಸ್ವಿಯಾಗಿದೆ.

ಹೀಗಾಗಿ ಸಿದ್ದರಾಮೋತ್ಸವ ಕಾರ್ಯಕ್ರಮ ವಿಚಾರದಲ್ಲಿ ಡಿಕೆಶಿ ಒಂದು ಹೆಜ್ಜೆ ಹಿಂದೆ ಸರಿದರೆ ಶಿವಕುಮಾರ್ ವಿಚಾರದಲ್ಲಿನ ಬಿಗಿ ನಿಲುವನ್ನು ಸಿದ್ದರಾಮಯ್ಯ ಸಡಿಲಿಸಿದ್ದಾರೆ. ಹೀಗಾಗಿ ಅವರನ್ನು ಉಪಹಾರ ಕೂಟಕ್ಕೆ ಆಹ್ವಾನಿಸಿ ಸ್ನೇಹದ ಹಸ್ತ ಚಾಚಿದ್ದಾರೆ ಎನ್ನಲಾಗಿದೆ. ಅಧಿಕಾರಕ್ಕಾಗಿ ನಾವಿಬ್ಬರು ಈಗಲೇ ಕಚ್ಚಾಡುವುದನ್ನು ಬಿಟ್ಟು ಮೊದಲು ಪಕ್ಷವನ್ನು ಅಧಿಕಾರಕ್ಕೆ ತರೋಣ ಎಂಬ ಒಮ್ಮತಕ್ಕೆ ಬಂದಿದ್ದಾರೆ ಎಂದು ತಿಳಿದು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next