Advertisement

ಪಿಎಫ್ಐ-ಎಸ್ ಡಿಪಿಐ ಬೆಳೆಯಲು ಸಿದ್ದರಾಮಯ್ಯ, ಕಾಂಗ್ರೆಸ್ ಕಾರಣ: ನಳಿನ್ ಕಟೀಲು

12:28 PM Sep 27, 2022 | Team Udayavani |

ವಿಜಯಪುರ: ರಾಜ್ಯದಲ್ಲಿ ಪಿಎಫ್ಐ, ಎಸ್ ಡಿಪಿಐ ನಂಥ ದೇಶದ್ರೋಹಿ ಮುಸ್ಲಿಂ ಮೂಲಭೂತವಾದ ಬೆಳೆಯಲು ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಸರ್ಕಾರವೇ ಮುಖ್ಯ ಕಾರಣ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ ಕಟೀಲು ವಾಗ್ದಾಳಿ ನಡೆಸಿದರು.

Advertisement

ಪಕ್ಷದ ಸಂಘಟನೆಗಾಗಿ ಮಂಗಳವಾರ ನಗರಕ್ಕೆ ಆಗಮಿಸಿದ್ದ ಅವರು, ಪತ್ರಕರ್ತರೊಂದಿಗೆ ಮಾತನಾಡಿ, ರಾಜ್ಯದಲ್ಲಿ ಮತೀಯ ಶಕ್ತಿಗಳ ಬಲವರ್ಧನೆಗೆ ಸಿದ್ದರಾಮಯ್ಯ ಆಡಳಿತವೇ ಕಾರಣವಾಗಿದ್ದು, ಇದೀಗ ಪರಿಸ್ಥಿತಿ ಗಂಭೀರವಾಗಿದೆ. ಸಿದ್ದರಾಮಯ್ಯ ಸರ್ಕಾರದಲ್ಲಿ ದೇಶ ವಿರೋಧಿ ಸಂಘಟನೆ ಬೆಳೆಸಿದ್ದು, ಇದೀಗ ನಮ್ಮ ಪಕ್ಷದ ಸರ್ಕಾರ ಇಂಥ ಸಂಘಟನೆಗಳನ್ನು ಮಟ್ಟ ಹಾಕಲು ಗಟ್ಟಿ ನಿರ್ಧಾರ ತೆಗೆದುಕೊಂಡಿದೆ ಎಂದರು.

ದೇಶಾದ್ಯಂತ ರಾಷ್ಟ್ರೀಯ ತನಿಖಾ ದಳ ದಾಳಿ ನಡೆಸಿದ್ದು, ಅತಿ ಹೆಚ್ಚು ಬಂಧಿತರಲ್ಲಿ ಕರ್ನಾಟಕ ರಾಜ್ಯದವರೇ ಇದ್ದಾರೆ. ಹೀಗಾಗಿ ರಾಜ್ಯದಲ್ಲಿ ಆತಂಕದ ಈ ದುಸ್ಥಿತಿಗೆ ಸಿದ್ದರಾಮಯ್ಯ ಸರ್ಕಾರವೇ ನೇರ ಕಾರಣ ಎಂದರು.

ದೇಶದಲ್ಲಿ ಮತೀಯ ಸಂಘರ್ಷಕ್ಕೆ ಕಾರಣವಾದ ಪಿಎಫ್ಐ ನಿಷೇಧಕ್ಕೆ ದೇಶಭಕ್ತರಿಂದ ಒತ್ತಡದ ಬೇಡಿಕೆ ಇದೆ. ಪಿಎಫ್ಐ ಸಂಘಟನೆ ನಿಷೇಧಕ್ಕೆ ಅಗತ್ಯ ಸಾಕ್ಷ್ಯಾಧಾರ ಸಂಗ್ರಹಿಸಿ, ಭವಿಷ್ಯದಲ್ಲಿ ಕಟ್ಟುನಿಟ್ಟಿನ ಕ್ರಮಕ್ಕಾಗಿ ಕಠಿಣ ನಿರ್ಧಾರ ತೆಗೆದು ಕೊಳ್ಳಲಿದೆ ಎಂದರು.

ಇದನ್ನೂ ಓದಿ:ಭಾರತದಲ್ಲಿ 24ಗಂಟೆಯಲ್ಲಿ 3,230 ಕೋವಿಡ್ ಪ್ರಕರಣ ಪತ್ತೆ; 118 ದಿನಗಳ ಬಳಿಕ ಭಾರೀ ಇಳಿಕೆ

Advertisement

ರಾಜ್ಯದಲ್ಲಿ ಯಾರಾದರೂ ಪೇಮೆಂಟ್ ಮುಖ್ಯಮಂತ್ರಿ ಇದ್ದರೆ ಅದು ಸಿದ್ದರಾಮಯ್ಯ ಎಂದು ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಆರಂಭಿಸಿರುವ ಪೇಸಿಎಂ ಹೋರಾಟದ ಕುರಿತು ತಿರುಗೇಟು ನೀಡಿದ ಕಟೀಲು, ಪೇಮೆಂಟ್ ಮಾಡಿ ಸಿದ್ದು ಸಿಎಂ ಆಗಿದ್ದಾರೆ. ಮೇಡಂ (ಸೋನಿಯಾ ಗಾಂಧಿ)ಗೆ ಪೇಮೆಂಟ್ ಮಾಡಿಯೇ ಸಿದ್ದರಾಮಯ್ಯ ಸಿಎಂ ಆಗಿರೋದು. ಖರ್ಗೆ, ಪರಮೇಶ್ವರ ಸೀನಿಯರ್, ಡಿಕೆಶಿ, ದೇಶಪಾಂಡೆ ಅವರಂಥ ನಾಯಕರನ್ನು ಬದಿಗೆ ಸರಿಸಿ, ಸಿದ್ದರಾಮಯ್ಯ ಸಿಎಂ ಆಗಿದ್ದು ಪೇಮೆಂಟ್ ಮಾಡಿಯೇ ಎಂದು ವಾಗ್ದಾಳಿ ಮಾಡಿದರು.

ಪೇ ಮಾಡಿ ಮೇಡಂರನ್ನ ಸಂತೃಪ್ತ ಪಡಿಸಿರುವ ಸಿದ್ದರಾಮಯ್ಯ, ಅದರ ಸ್ಮರಣೆಗಾಗಿ ಪೇ ಸಿಎಂ ಆರಂಭಿಸಿದ್ದಾರೆ. ಪೇ ಸಿಎಂ ಎಂದರೆ ಪೇಸಿಎಂ ಸಿದ್ದರಾಮಯ್ಯ, ಇನ್ನೊಂದು ಪೇ ಕಾಂಗ್ರೆಸ್ ಮೇಡಂ ಎಂದು ವ್ಯಂಗ್ಯವಾಡಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next