Advertisement

ಕಾಂಗ್ರೆಸ್ ನಲ್ಲಿ ಮತ್ತೆ ಮೊಳಗಿದ ‘ಸಿದ್ದು ಸಿಎಂ’ಘೋಷಣೆ

02:43 PM Nov 03, 2022 | Team Udayavani |

ಚಿಕ್ಕಮಗಳೂರು: ಕಾಂಗ್ರೆಸ್ ನಲ್ಲಿ ಮತ್ತೆ ‘ಮುಂದಿನ ಮುಖ್ಯಮಂತ್ರಿ’ ಘೋಷಣೆ ಕೇಳಿ ಬಂದಿದೆ. ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಚಿಕ್ಕಮಗಳೂರಿಗೆ ಬಂದಿದ್ದಾಗ ‘ಸಿದ್ದು ಸಿಎಂ’ ಘೋಷಣೆ ಮಾಡಲಾಗಿದೆ.

Advertisement

ಸಿದ್ದರಾಮಯ್ಯ ಅವರು ಖಾಸಗಿ ಕಾರ್ಯಕ್ರಮಕ್ಕೆ ಚಿಕ್ಕಮಗಳೂರಿಗೆ ಬಂದಿದ್ದರು. ಈ ವೇಳೆ ಮುಂದಿನ ಮುಖ್ಯಮಂತ್ರಿ ಎಂದು ಸಿದ್ದರಾಮಯ್ಯಗೆ ಘೋಷಣೆ ಕೂಗಲಾಗಿದೆ. ಸುದ್ದಿಗೋಷ್ಠಿ ಬಳಿಕ ಕಾರ್ಯಕರ್ತರು ಸಿದ್ದು ಪರ ಘೋಷಣೆ ಕೂಗಿದ್ದಾರೆ. ಹೀಗಾಗಿ ಕೆಲ ದಿನಗಳಿಂದ ಇಲ್ಲವಾಗಿದ್ದ ‘ಮುಂದಿನ ಸಿಎಂ’ ಹೇಳಿಕೆ ಭರಾಟೆ ಮತ್ತೆ ಆರಂಭವಾಗಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಲಸೆ ಹೋದವರಿಗೂ ಡಿಕೆಶಿ ಕಾಂಗ್ರೆಸ್ ಗೆ ಆಹ್ವಾನ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ, ಬೇರೆಯವರು ಅರ್ಜಿ ಹಾಕಬಹುದಾ ಎಂದು ಕೇಳಿದ್ದಾರೆ, ಹಾಕಬಹುದು ಎಂದಿದ್ದಾರೆ. ಕಾಂಗ್ರೆಸ್ ಐಡಿಯಾಲಜಿ, ನಾಯಕತ್ವದ ಮೇಲೆ ನಂಬಿಕೆ ಇದ್ದವರು ಹಾಕಬಹುದು. ಅರ್ಜಿ ಹಾಕಿದ ಕೂಡಲೇ ಕಾಂಗ್ರೆಸ್ ಸೇರಿದರು ಎಂದಲ್ಲ. ಅಲ್ಲಂ ವೀರಭದ್ರಪ್ಪ ಅವರ ಅಧ್ಯಕ್ಷತೆಯಲ್ಲಿ ಸಮಿತಿಯಿದೆ, ಅಲ್ಲಿ ಅಂತಿಮವಾಗಬೇಕು ಎಂದರು.

ಇದನ್ನೂ ಓದಿ:ಡಿಕೆಶಿ ಹೇಳಿಕೆ ನೋಡಿದರೆ ಕಾಂಗ್ರೆಸ್ ನಲ್ಲಿ ಅಭ್ಯರ್ಥಿಗಳೇ ಇಲ್ಲ ಅನಿಸುತ್ತೆ: ಅಶೋಕ್ ವ್ಯಂಗ್ಯ

ಮೂಡಿಗೆರೆಯಲ್ಲಿ ಮೋಟಮ್ಮ ಮಗಳಿಗೆ ಟಿಕೆಟ್ ಬೇಡ ಎಂದು ಸಭೆಯ ಬಗ್ಗೆ ಮಾತನಾಡಿದ ಅವರು, ಎಲ್ಲಿ ಆಂತರಿಕ ಡೆಮಾಕ್ರಸಿ ಇದ್ದಲ್ಲಿ ಇವು ಸಾಮಾನ್ಯ. ಬಿಜೆಪಿಯಲ್ಲಿ ಇಂಟರ್ನಲ್ ಡೆಮಾಕ್ರಸಿ ಇಲ್ಲ, ಇವೆಲ್ಲಾ ಇಲ್ಲ ಎಂದರು.

Advertisement

ಕಾಲುವೆ ದುರಸ್ಥಿಗೆ ಆಗ್ರಹಿಸಿ ಶ್ರೀರಾಮುಲು ವಾಸ್ತವ್ಯ ವಿಚಾರಕ್ಕೆ ವ್ಯಂಗ್ಯವಾಡಿದ ಸಿದ್ದರಾಮಯ್ಯ, ಶ್ರೀರಾಮುಲು ಈ ಸಲ ಮೊಣಕಾಲ್ಮೂರಲ್ಲಿ ಸ್ಪರ್ಧಿಸಿ ಗೆಲ್ಲಲಿ ನೋಡೋಣ. ಪಾರ್ಟಿ ಬಿಟ್ಟು ಹೋಗಿದ್ದವರು. ಇವರಿಗೆ ಪಕ್ಷ, ಸಿದ್ಧಾಂತ, ಆರ್ ಎಸ್ಎಸ್ ಬಗ್ಗೆ ಯಾವ ನಿಯತ್ತಿದೆ. ಇವನು ಆರ್ ಎಸ್ಎಸ್ ಗಿರಾಕಿಯೇ? ಕಾಂಗ್ರೆಸ್ ನಿಂದ ಮೊದಲು ಮುನ್ಸಿಪಲ್ ಸದಸ್ಯನಾಗಿದ್ದವ, ಮಧ್ಯ ಬಂದು ಬಿಜೆಪಿ ಸೇರಿದ್ದು.  ಅಧಿಕಾರಕ್ಕೆ ಬಂದ 24 ಗಂಟೆಯಲ್ಲಿ ನಾಗಮೋಹನ್ ದಾಸ್ ವರದಿ ಜಾರಿಗೆ ತರುತ್ತೇವೆಂದು ರಕ್ತದಲ್ಲಿ ಬರೆದುಕೊಡುತ್ತೇನೆ ಎಂದಿದ್ದ. ಆಯ್ತೇನಪ್ಪಾ ಎಂದು ಕಿಡಿಕಾರಿದರು.

ವಿಧಾನಸಭೆ ಚುನಾವಣೆಗೆ ಸ್ಪರ್ಧೆ ವಿಚಾರವಾಗಿ ಕೇಳಿದ ಪ್ರಶ್ನೆಗೆ ಉತ್ತರಿಸಿ, ಬಹಳ ಕಡೆ ಆಹ್ವಾನವಿದೆ, ನಾನಿನ್ನೂ ತೀರ್ಮಾನ ಮಾಡಿಲ್ಲ. ಬಾದಾಮಿಯವರು ಅಲ್ಲೇ ನಿಲ್ಲಬೇಕು ಎಂದು ಒತ್ತಾಯ ಮಾಡುತ್ತಿದ್ದಾರೆ. ಕೋಲಾರ, ಚಿಕ್ಕಮಗಳೂರು, ವರುಣಾದವರು ಹೇಳುತ್ತಿದ್ದಾರೆ. ಬಹಳ ಕಡೆ ಕರೆಯುತ್ತಿದ್ದಾರೆ, ನೋಡೋಣ. ಅಂತಿಮವಾಗಿ ಜನ-ಪಕ್ಷ ಏನು ಹೇಳುತ್ತಾರೆ ನೋಡೋಣ. ಸಿ.ಟಿ.ರವಿಯದ್ದು ಬರೀ ಸುಳ್ಳಿನ ಆರೋಪ, ಸಿ.ಟಿ.ರವಿ ಅಂದರೆ ಸುಳ್ಳಿನ ರವಿ ಎಂದರ್ಥ ಎಂದು ಕಿಡಿಕಾರಿದರು.

Advertisement

Udayavani is now on Telegram. Click here to join our channel and stay updated with the latest news.

Next