Advertisement

ಸಿದ್ದರಾಮಯ್ಯ ಪರಮಾಪ್ತ,ಉದ್ಯಮಿ,ಈಡಿಗ ಸಂಘದ ಅಧ್ಯಕ್ಷ ಜೆಪಿಎನ್‌ ವಿಧಿವಶ

03:08 PM Feb 09, 2017 | Team Udayavani |

ಬೆಂಗಳೂರು : ಕಳೆದ ಕೆಲ ದಿನಗಳಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರಮಾಪ್ತ ,ಉದ್ಯಮಿ, ರಾಜ್ಯ ಈಡಿಗ ಸಂಘದ ಅಧ್ಯಕ್ಷ  ಜೆ.ಪಿ.ನಾರಾಯಣ ಸ್ವಾಮಿ (59)ಅವರು ಗುರುವಾರ ವಿಧಿವಶರಾಗಿದ್ದಾರೆ. ಲಿವರ್‌ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಅವರಿಗೆ ಸದಾಶಿವನಗರ ನಿವಾಸದಲ್ಲೇ ಚಿಕಿತ್ಸೆ ನೀಡಲಾಗುತ್ತಿತ್ತು. 

Advertisement

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜೆಡಿಎಸ್‌ ತೊರೆದು ಅಹಿಂದಾ ಸಂಘಟನೆ ಕಟ್ಟಿದಾಗ ಅವರ ಬೆಂಬಲಕ್ಕೆ ನಿಂತಿದ್ದರು. ಮೂಲತಃ ಹಾಸನದ ಅರಸೀಕೆರೆಯವರಾದ ನಾರಾಯಣಸ್ವಾಮಿ ಅವರು ರಾಜ್ಯದಲ್ಲಿ ಜೆ.ಪಿ.ಡಿಸ್ಟಲರೀಸ್‌ ಕಂಪೆನಿ ತೆರೆದಿದ್ದರು. ಹೊಟೇಲ್‌ ಮತ್ತು ರಿಯಲ್‌ ಎಸ್ಟೇಟ್‌ ಉದ್ಯಮದಲ್ಲೂ ನಾರಾಯಣ ಸ್ವಾಮಿ ತೊಡಗಿಸಿಕೊಂಡಿದ್ದರು. 

ನಾರಾಯಣ ಸ್ವಾಮಿ ಅವರು ಸಿದ್ದರಾಮಯ್ಯ, ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ, ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ  ಮೊದಲಾದ ರಾಜಕಾರಣಿಗಳೊಂದಿಗೆ ಅತ್ಮೀಯ ಒಡನಾಟ ಹೊಂದಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next