Advertisement

ಸಿಎಂಗೆ ಚೀಟಿ ಕೊಟ್ಟ ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ

12:19 AM May 12, 2024 | Team Udayavani |

ಮೈಸೂರು: ಸಂಸದ ಶ್ರೀನಿವಾಸ ಪ್ರಸಾದ್‌ ಶ್ರದ್ಧಾಂಜಲಿ ಕಾರ್ಯಕ್ರಮದ ವೇದಿಕೆಯಲ್ಲಿ ಅಕ್ಕಪಕ್ಕದಲ್ಲಿ ಕುಳಿತಿದ್ದ ಸಿಎಂ ಸಿದ್ದರಾಮಯ್ಯ ಹಾಗೂ ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ ಅವರು ಕೆಲವು ನಿಮಿಷಗಳ ಕಾಲ “ಕಿವಿಗಚ್ಚಿ ಕೊಂಡು’ ಮಾತನಾಡಿದರು.

Advertisement

ಈ ವೇಳೆ ಯಡಿಯೂರಪ್ಪನವರು ಸಿಎಂಗೆ ಚೀಟಿಯೊಂದನ್ನು ನೀಡಿದರು. ಆ ಚೀಟಿಯನ್ನು ಕೈಯಲ್ಲೇ ಹಿಡಿದುಕೊಂಡು ಮುಖ್ಯಮಂತ್ರಿಗಳು ಮಾತನಾಡುತ್ತಲೇ ಇದ್ದರು.

ಶ್ರದ್ಧಾಂಜಲಿ ಕಾರ್ಯಕ್ರಮಕ್ಕೆ ಬರುವ ಮೊದಲು ಯಡಿಯೂರಪ್ಪ ಮಾಧ್ಯಮದವರೊಂದಿಗೆ ಮಾತನಾಡಿ, ರಾಜ್ಯದಲ್ಲಿ ಭೀಕರ ಬರಗಾಲ ಆವರಿಸಿದೆ. ರಾಜ್ಯ ಸರಕಾರ ರೈತರ ಸಾಲ ಮನ್ನಾ ಮಾಡಿ ಅವರಿಗೆ ನೆರವಾಗಬೇಕು ಎಂದು ಆಗ್ರಹಿಸಿದರು. ಇದಕ್ಕೆ ಮಾಧ್ಯಮದೊಂದಿಗೇ ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ, ರೈತರ ಸಾಲ ಮನ್ನಾ ಮಾಡಿ ಎನ್ನಲು ಯಡಿಯೂರಪ್ಪಗೆ ಯಾವ ನೈತಿಕತೆ ಇದೆ? ಹಿಂದೆ ರೈತರ ಸಾಲ ಮನ್ನಾ ಮಾಡಿ ಎಂದು ಕೇಳಿದಾಗ ನಮ್ಮಲ್ಲಿ ಪ್ರಿಂಟಿಂಗ್‌ ಮೆಷಿನ್‌ ಇಲ್ಲ ಎಂದು ಯಡಿಯೂರಪ್ಪ ಹೇಳಿದ್ದರು ಎಂದು ಖಾರವಾಗಿ ನುಡಿದರು.

ಸಿಎಂ ಕಾಲಿಗೆ ನಮಸ್ಕರಿಸಿದ ಸಿಂಹ
ಬೆಳಗ್ಗೆ 10.30ಕ್ಕೆ ಕಾರ್ಯಕ್ರಮ ಆಯೋಜನೆಯಾಗಿತ್ತು. ದಿ| ವಿ.ಶ್ರೀನಿವಾಸ ಪ್ರಸಾದ್‌ ಅವರ ಸಮಾಧಿಗೆ ನಮಿಸಿದ ಬಳಿಕ ಸಿಎಂ ಸಿದ್ದರಾಮಯ್ಯ ಸುಮಾರು 12 ಗಂಟೆಗೆ ವೇದಿಕೆಗೆ ಬಂದರು. ಅಲ್ಲಿದ್ದ ಗಣ್ಯರು-ಅತಿಥಿಗಳ ಜತೆ ಉಭಯ ಕುಶಲೋಪರಿ ಮಾತನಾಡಿದರು. ಈ ವೇಳೆ ಸಂಸದ ಪ್ರತಾಪ್‌ ಸಿಂಹ ಸಿದ್ದರಾಮಯ್ಯರ ಕಾಲಿಗೆ ಬಿದ್ದು ನಮಸ್ಕಾರ ಮಾಡಿದ್ದು ಗಮನ ಸೆಳೆಯಿತು.

ಸಿದ್ದರಾಮಯ್ಯರನ್ನು ಹಾಡಿ ಹೊಗಳಿದ ಪ್ರತಾಪ ಸಿಂಹ
ಮೈಸೂರು: ಸಂಸದ ವಿ.ಶ್ರೀನಿವಾಸ ಪ್ರಸಾದ್‌ ಶ್ರದ್ಧಾಂಜಲಿ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಸಿಎಂ ಸಿದ್ದರಾಮಯ್ಯ ಅವರನ್ನು ಸಂಸದ ಪ್ರತಾಪಸಿಂಹ ಅವರು ಹಾಡಿಹೊಗಳಿದ್ದು ವಿಶೇಷ ವಾಗಿತ್ತು. ಹಿಂದಿನ ಪೀಳಿಗೆಯ ರಾಜ ಕಾರಣಿಗಳಾದ ಸಿದ್ದರಾಮಯ್ಯ, ಯಡಿಯೂರಪ್ಪ, ಮಲ್ಲಿಕಾರ್ಜುನ ಖರ್ಗೆ ಅಂಥವರೆಲ್ಲ ನೆಲದ ಶಕ್ತಿ ಹಾಗೂ ಸ್ವಂತ ಶಕ್ತಿಯ ಮೇಲೆ ಬೆಳೆದು ಬಂದವರು. ಇವರೆಲ್ಲ ಮೇಲ್ಪಂಕ್ತಿಯ ಮಾದರಿ ನಾಯಕರಾಗಿದ್ದಾರೆ. ಆದರೆ ಈಗಿನ ಪರಿಸ್ಥಿತಿಯಲ್ಲಿ ಬೇರೆ ಶಕ್ತಿ ಇಲ್ಲದೆ ರಾಜಕಾರಣಕ್ಕೆ ಬರಲು ಸಾಧ್ಯವೇ ಇಲ್ಲ ಎಂದು ಪ್ರತಾಪ ಸಿಂಹ ಹೇಳಿದರು. ಇಂಥ ನಾಯಕರು ನಮಗೆ ಸ್ಪೂರ್ತಿ. ಇಂಥವರು ಅಧಿಕಾರದಲ್ಲಿ ಅನೇಕ ಅಭಿವೃದ್ಧಿ ಕೆಲಸ ಮಾಡಿ¨ªಾರೆ. ಇಂತಹ ನಾಯಕರನ್ನು ಮತ್ತೆ ನೋಡಲು ಸಾಧ್ಯವಿಲ್ಲ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next