Advertisement

ಅಧಿಪತ್ಯ ಸಾಧಿಸಲು ಸಿದ್ದು ಮತ್ತೆ ಅಖಾಡಕ್ಕೆ

04:50 PM Nov 28, 2021 | Team Udayavani |

ಮೈಸೂರು: ಮೈಸೂರು-ಚಾಮರಾಜನಗರ ಜಿಲ್ಲೆಗಳ ರಾಜಕಾರಣದಲ್ಲಿ ತಪ್ಪಿರುವ ತಮ್ಮ ಹಿಡಿತವನ್ನು ಮತ್ತೆ ಸಾಧಿಸಲು ವಿಧಾನಸಭೆ ಪ್ರತಿ ಪಕ್ಷ ನಾಯಕ ಸಿದ್ದರಾಮಯ್ಯ ಈಗ ಅಖಾಡಕ್ಕೆ ಇಳಿದಿದ್ದಾರೆ.

Advertisement

ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಪರಾಭವ: ಜನತಾ ಪರಿವಾರದಲ್ಲಿದ್ದಾಗ ಹಾಗೂ ನಂತರ ಕಾಂಗ್ರೆಸ್‌ ಸೇರಿದಾಗ ಈ ಎರಡೂ ಜಿಲ್ಲೆಗಳ ರಾಜ ಕಾರಣದಲ್ಲಿ ಸಿದ್ದರಾಮಯ್ಯ ಅಧಿಪತ್ಯ ಸ್ಥಾಪಿಸಿ ದ್ದರು. ಅಸೆಂಬ್ಲಿಗೆ 2013ರಲ್ಲಿ ನಡೆದ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್‌ ಬಹುಮತ ಸಾಧಿಸಿ ಸಿದ್ದರಾಮಯ್ಯ ಮುಖ್ಯಮಂತ್ರಿ ಗಾದಿಗೂ ಏರಿದರು. ಆದರೆ, 2018ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ನೆಲಕಚ್ಚಿತು. ಸ್ವತಃ ಸಿದ್ದರಾಮಯ್ಯ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸುಮಾರು 35 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಪರಾಭವಗೊಂಡರು. ನಂತರ ನಡೆದ ಮೈಸೂರು, ಚಾಮರಾಜನಗರ ಎರಡೂ ಲೋಕಸಭಾ ಕ್ಷೇತ್ರಗಳಲ್ಲೂ ಕಾಂಗ್ರೆಸ್‌ ಸೋತಿತು. ಇದರಿಂದ ಸಿದ್ದರಾಮಯ್ಯ ಕೆಲವು ದಿನ ಮೈಸೂರಿಗೆ ಭೇಟಿ ಕೊಟ್ಟಿರಲಿಲ್ಲ. ಈಗ, ಚುನಾವಣೆಯನ್ನು ಸಿದ್ದರಾಮಯ್ಯ ಸವಾಲಾಗಿ ಸ್ವೀಕರಿಸಿದ್ದು ಜಿಲ್ಲೆಯಲ್ಲಿ ತಮ್ಮ ನಾಯಕತ್ವ ಗಟ್ಟಿಗೊಳಿಸಿಕೊಳ್ಳಲು ಮುಂದಾಗಿದ್ದಾರೆ.

ಟಿಕೆಟ್‌ ಕೊಡಿಸುವಲ್ಲಿ ಯಶಸ್ವಿ: ಸಿದ್ದರಾಮಯ್ಯ ಅವರು ಶುಕ್ರವಾರ ಮೈಸೂರಿನಲ್ಲಿ ತಮ್ಮ ಪಕ್ಷದ ಶಾಸಕರು, ಮಾಜಿ ಶಾಸಕರು, ಮುಖಂಡರ ಸಭೆ ಕರೆದಿ ದ್ದರು. ವಿಧಾನಪರಿಷತ್‌ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಗೆಲುವಿಗೆ ಶ್ರಮಿಸಲು ಸೂಚಿಸಿದರು.

ಈ ಸಭೆ ನಂತರ ಶನಿವಾರದಿಂದಲೇ ಗ್ರಾಮೀಣ ಭಾಗದಲ್ಲಿ ಕಾಂಗ್ರೆಸ್‌ ಪ್ರಚಾರ ಸಭೆ ಆರಂಭವಾಗಿದೆ. ಈ ಕ್ಷೇತ್ರದಲ್ಲಿ ಹಾಲಿ ವಿಧಾನಪರಿಷತ್‌ ಸದಸ್ಯ ಆರ್‌.ಧರ್ಮಸೇನಾ ಅವರಿಗೆ ಕಾಂಗ್ರೆಸ್‌ ಟಿಕೆಟ್‌ ನಿರಾಕರಿಸಿ ನಿವೃತ್ತ ಅಧಿಕಾರಿ ಡಾ.ಡಿ.ತಿಮ್ಮಯ್ಯ ಅವರಿಗೆ ಟಿಕೆಟ್‌ ಕೊಡಿಸುವಲ್ಲಿಯೂ ಸಿದ್ದರಾಮಯ್ಯ ಅವರ ಪಾತ್ರವೇ ಮುಖ್ಯವಾಗಿದೆ.

ವಾಟಾಳ್‌ ವಿರೋಧ: ಮತದಾರರಿಗೆ 2 ಮತ ನೀಡಲು ಅವಕಾಶವಿದ್ದರೂ ಸಿಂಗಲ್‌ ವೋಟು ನೀಡುವಂತೆ ರಾಜಕೀಯ ಪಕ್ಷಗಳು ಹೇಳಿಕೆ ನೀಡಿದ್ದು ಈ ನಿಲುವನ್ನು ಈ ಕ್ಷೇತ್ರದಲ್ಲಿ ಸ್ಪರ್ಧಿಸಿರುವ ಕನ್ನಡ ಚಳವಳಿ ನಾಯಕ, ಮಾಜಿ ಶಾಸಕ ವಾಟಾಳ್‌ ನಾಗರಾಜ್‌ ವಿರೋ ಧಿಸಿದ್ದಾರೆ. ಇದು ಪ್ರಾಶಸ್ತ್ಯ ಮತಗಳ ಚುನಾವಣೆ. ಮತದಾರರ ಹಕ್ಕನ್ನು ಕಸಿಯಲು ಯಾರಿಗೂ ಅಧಿಕಾರವಿಲ್ಲ. ಕಣದಲ್ಲಿ 7 ಮಂದಿ ಇದ್ದೇವೆ. ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್‌ ನಾಯಕರು ಅವರ ಬೆಂಬಲಿತ ಮತದಾರರು ಎರಡು, ಮೂರು ಹೀಗೆ ಪ್ರಾಶಸ್ತ್ಯ ಮತ ನೀಡಲು ಪ್ರೋತ್ಸಾಹಿಸಬೇಕು. ರಾಜಕೀಯ ನಾಯಕರು ತಮ್ಮ ಪ್ರಬುದ್ಧತೆ ಮೆರೆಯಬೇಕು ಎಂದು ವಾಟಾಳ್‌ ನಾಗರಾಜ್‌ ತಿಳಿಸಿದ್ದಾರೆ.

Advertisement

ಸಿಂಗಲ್‌ ವೋಟು ನೀಡಲು ಸೂಚನೆ : ಕಾಂಗ್ರೆಸ್‌ ದ್ವಿಸದಸ್ಯ ಕ್ಷೇತ್ರದ ಈ ಚುನಾವಣೆಯಲ್ಲಿ ತಮಗಿರುವ ಬೆಂಬಲದ ಆಧಾರದ ಮೇಲೆ ಒಬ್ಬರೇ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ. ಪ್ರತಿ ಮತದಾರರಿಗೆ 2 ಮತ ನೀಡಲು ಅವಕಾಶವಿದ್ದರೂ ಸಿಂಗಲ್‌ ವೋಟು ನೀಡುವಂತೆ ತಮ್ಮ ಬೆಂಬಲಿತ ಮತದಾರರಿಗೆ ಕಾಂಗ್ರೆಸ್‌ ಸೂಚನೆ ನೀಡಿದೆ. ಪ್ರಾಶಸ್ತ್ಯದ ಮತಗಳ ಚುನಾವಣೆ ಇದಾಗಿದ್ದರೂ ರಿಸ್ಕ್ ತೆಗೆದುಕೊಳ್ಳಲು ಕಾಂಗ್ರೆಸ್‌ ತಯಾರಿಲ್ಲ. ಇನ್ನು ಬಿಜೆಪಿ ಹಾಗೂ ಜೆಡಿಎಸ್‌ ಕೂಡ ತಮ್ಮ ಅಭ್ಯರ್ಥಿಗಳಿಗೆ ಸಿಂಗಲ್‌ ವೋಟು ನೀಡುವಂತೆ ಪ್ರಚಾರ ನಡೆಸಿದೆ. ಈ ಎರಡೂ ಪಕ್ಷಗಳ ನಾಯಕರೂ ತಮ್ಮ ಬೆಂಬಲಿತ ಮತದಾರರ 2ನೇ ಪ್ರಾಶಸ್ತ್ಯದ ಮತಗಳ ಚಲಾವಣೆ ವಿಚಾರದಲ್ಲಿ ರಿಸ್ಕ್ ತೆಗೆದುಕೊಳ್ಳಲು ಸಿದ್ಧವಿಲ್ಲ.

ಇದು ಪ್ರಾಶಸ್ತ್ಯದ ಮತಗಳ ಚುನಾವಣೆ. ಜೆಡಿಎಸ್‌ನಿಂದ ದೂರ ಸರಿದಿರುವ ನಾನು ಈ ಚುನಾವಣೆಯಲ್ಲಿ ಕಾಂಗ್ರೆಸ್‌, ಬಿಜೆಪಿ ಎರಡನ್ನೂ ಬೆಂಬಲಿಸುತ್ತೇನೆ. ಒಂದು ಮತ ಬಿಜೆಪಿಗೆ ಮತ್ತೂಂದು ಮತ ಕಾಂಗ್ರೆಸ್‌ಗೆ ನೀಡುವಂತೆ ಬೆಂಬಲಿಗರಲ್ಲಿ ಮನವಿ ಮಾಡುವೆ. ● ಸಂದೇಶ್‌ ನಾಗರಾಜ್‌, ವಿಧಾನಪರಿಷತ್‌ ಸದಸ್ಯ ಕಾಂಗ್ರೆಸ್‌,

ಬಿಜೆಪಿ, ಜೆಡಿಎಸ್‌ ನಾಯಕರು ಅವರ ಅಭ್ಯರ್ಥಿಗಳಿಗೆ ಮೊದಲ ಪ್ರಾಶಸ್ತ್ಯದ ಮತ ನೀಡುವಂತೆ ಕೇಳಲಿ. ಆದರೆ, 2ನೇ ಪ್ರಾಶಸ್ತ್ಯದ ಮತಗಳನ್ನು ಯಾರಿಗೂ ನೀಡಬಾರದೆಂದು ಹೇಳುವುದು ಸರಿಯಲ್ಲ. ಇದು ಮತದಾರರ ಹಕ್ಕಿಗೆ ಚ್ಯುತಿ ತಂದಂತೆ. – ವಾಟಾಳ್‌ ನಾಗರಾಜ್‌, ಅಭ್ಯರ್ಥಿ

-ಕೂಡ್ಲಿ ಗುರುರಾಜ

Advertisement

Udayavani is now on Telegram. Click here to join our channel and stay updated with the latest news.

Next