Advertisement

ಸಂಸದಗೆ ಸಿದ್ದರಾಮಯ್ಯ ಸಲಹೆ 

08:20 AM Dec 09, 2017 | Team Udayavani |

ಮೈಸೂರು: “ನೀನು ಇನ್ನೂ ಚಿಕ್ಕವನು. ಹಾಗೆಲ್ಲ ಮಾತನಾಡಬೇಡ’ -ಹೀಗೆಂದು ಸಂಸದ ಪ್ರತಾಪ್‌ಸಿಂಹ ಅವರಿಗೆ ಸಲಹೆ ನೀಡಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ. ನಗರದ ಗೋಕುಲಂ 3ನೇ ಹಂತದ ವಿದ್ಯಾವರ್ಧಕ ಎಂಜಿನಿಯರಿಂಗ್‌ ಕಾಲೇಜಿನ ಕಾರ್ಯಕ್ರಮಕ್ಕೆ
ಆಗಮಿಸಿದ ವೇಳೆ ಸಂಸದ ಪ್ರತಾಪ್‌ಸಿಂಹ ಅವರನ್ನು ಕಂಡ ಸಿದ್ದರಾಮಯ್ಯ, ಪ್ರತಾಪ್‌ ಸಿಂಹ ಅವರ ಗಡ್ಡವನ್ನು ಗಮನಿಸಿ “ಏನಪ್ಪಾ, ವಿರಾಟ್‌ ಕೊಯ್ಲಿ ಹಾಗೆ ಗಡ್ಡ ಬಿಟ್ಟಿದ್ದೀಯಾ’ ಎಂದರು. ಈ ವೇಳೆ, ಪ್ರತಾಪ್‌ ಸಿಂಹ ಅವರು, ರಾಜ್ಯ ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ ಮಂಜುಳಾ ಮಾನಸ ತಮ್ಮ ವಿರುದ್ಧ ದೂರು ನೀಡಿರುವ ವಿಷಯವನ್ನು ಮುಖ್ಯಮಂತ್ರಿಯೊಂದಿಗೆ ಪ್ರಸ್ತಾಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, “ನೀನು ಇನ್ನೂ ಚಿಕ್ಕವನು, ಹಾಗೆಲ್ಲ ಮಾತನಾಡಬೇಡ’ ಎಂದು ಸಲಹೆ ನೀಡಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next