ಬೆಂಗಳೂರು: ಪುನೀತ್ ರಾಜ್ ಕುಮಾರ್ ಅವರಿಗೆ ‘ಕರ್ನಾಟಕ ರತ್ನ’ ಪ್ರಶಸ್ತಿ ಪ್ರದಾನ ಕಾರ್ಯಕ್ರಮಕ್ಕೆ ವಿಪಕ್ಷ ನಾಯಕ ಸಿದ್ದರಾಮಯ್ಯ ಗೈರಾಗಲಿದ್ದಾರೆ.
ಅಧಿಕೃತವಾಗಿ ಆಹ್ವಾನ ನೀಡದ ಕಾರಣಕ್ಕೆ ಸಿದ್ದರಾಮಯ್ಯ ಗೈರಾಗಲಿದ್ದಾರೆ. ಖುದ್ದು ಸಿದ್ದರಾಮಯ್ಯ ಅವರೇ ಈ ಹೇಳಿಕೆ ನೀಡಿದ್ದಾರೆ.
ಪುನೀತ್ ರಾಜ್‍ಕುಮಾರ್ ಗೆ ಪ್ರಶಸ್ತಿ ನೀಡುತ್ತಿರುವುದಕ್ಕೆ ಸಂತೋಷವಾಗಿದೆ. ಇದನ್ನು ನಾನು ಅಭಿನಂದಿಸುತ್ತೇನೆ. ಆಹ್ವಾನ ಪತ್ರಿಕೆಯಲ್ಲಿ ನನ್ನ ಹೆಸರನ್ನು ಹಾಕಿದ್ದಾರೆ. ನಾನು ವಿರೋಧ ಪಕ್ಷದ ನಾಯಕ. ವಿರೋಧ ಪಕ್ಷದ ನಾಯಕರಿಗೂ ಶಿಷ್ಟಾಚಾರ ಇರುತ್ತೆ ಅಲ್ಲವಾ? ಅವರು ಬಂದು ಕರೆದಿದ್ದರೆ ಹೋಗೋಣ ಅಂತಿದ್ದೆ. ಆದರೆ, ಆಹ್ವಾನ ನೀಡದ ಕಾರಣ ಹೋಗುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ:ರಷ್ಯಾದ ಇಂಧನ ಖರೀದಿ: ಪ್ರಧಾನಿ ಮೋದಿ ಸರ್ಕಾರದ ಮೇಲೆ ಯಾವುದೇ ಒತ್ತಡ ಇಲ್ಲ: ಸಚಿವ ಪುರಿ
ಬಂಗಾರಪ್ಪ ಬಿಜೆಪಿಗೆ ಸೇರಿದ್ದರಿಂದ ಶಕ್ತಿ ಬಂತು. ಬಂಗಾರಪ್ಪ ಜೊತೆಗೆ ಬಿಜೆಪಿಗೆ ಹೋದ ಮತದಾರರು ವಾಪಸ್ ಬರಲಿಲ್ಲ. ನಮ್ಮ ಪಕ್ಷದಿಂದ ಹೋದ ಕೆಲವರು ಅಲ್ಲಿಯೇ ಇದ್ದಾರೆ. ಹಿಂದುಳಿದ ವರ್ಗ ಅವರ ಕೈ ಹಿಡಿಯಲ್ಲ ಅಂತ ನಾನು ಹೇಳುವುದಿಲ್ಲ. ಶೇ.5ರಷ್ಟಾದರೂ ಹಿಂದುಳಿದ ವರ್ಗಗಳ ಮತಗಳು ಬಿಜೆಪಿ ಹೋಗಲಿವೆ. ಆದರೆ ಅವರು ಹಿಂದುಳಿದ ವರ್ಗಕ್ಕೆ ಮೋಸ ಮಾಡಿದ್ದಾರೆ ಎಂದು ಸಿದ್ದರಾಮಯ್ಯ ಆರೋಪಿಸಿದರು.
ಹ್ಯೂಬ್ಲಾಟ್ ವಾಚ್ ಗಿಫ್ಟ್ ಪಡೆದಿದ್ದ ಸಿದ್ದರಾಮಯ್ಯಗೆ ನೈತಿಕತೆ ಇದೆಯಾ ಎಂಬ ಬಿಜೆಪಿಯವರ ಹೇಳಿಕೆಗೆ ತಿರುಗೇಟು ನೀಡಿದ ಸಿದ್ದರಾಮಯ್ಯ, ಮೋದಿ 40 ಲಕ್ಷ ರೂಪಾಯಿ ಸೂಟ್ ಹಾಕಿರಲಿಲ್ಲವಾ? ಆ ಸೂಟನ್ನು ಹರಾಜು ಹಾಕಿರಲಿಲ್ಲವಾ? ಐದು ಲಕ್ಷದ ಕನ್ನಡಕ ಹಾಕಲ್ವಾ? ಅವರಿಗೆ ಯಾವ ನೈತಿಕತೆ ಇದೆ? ನಾನು ಹ್ಯೂಬ್ಲಾಯ್ಡ್ ವಾಚ್ ಗಿಫ್ಟ್ ಪಡೆದುಕೊಂಡಿಲ್ಲ. ಯಾವನೋ ಬಂದು ಕೈಗೆ ಕಟ್ಟಿಬಿಟ್ಟ. ಅದನ್ನು ಆಗಲೇ ನಾನು ವಾಪಸ್ ಮಾಡಿದ್ದೇನೆ ಎಂದರು.