Advertisement

ಅಪಮಾನವನ್ನೇ ಪ್ರಗತಿಗೆ ಏಣಿ ಮಾಡಿಕೊಳ್ಳಬೇಕು: ಸಿದ್ದರಾಮಯ್ಯ

11:09 PM Jul 16, 2022 | Team Udayavani |

ಬೆಂಗಳೂರು: ನಾನು ಹಣಕಾಸು ಸಚಿವನಾಗಿ ಪ್ರಥಮ ಬಾರಿ ರಾಜ್ಯ ಬಜೆಟ್‌ ಮಂಡಿಸುವ ವೇಳೆ, ಕುರಿ ತಲೆಗಳ ಲೆಕ್ಕ ಮಾಡಲು ಬಾರದ ಕುರುಬ ರಾಜ್ಯದ ಬಜೆಟ್‌ ಮಂಡನೆ ಮಾಡಲು ಸಾಧ್ಯವೇ ಎಂದು ಗೇಲಿ ಮಾಡಿದ್ದರು. ಆದರೆ ಅದನ್ನು ಪ್ರತಿಷ್ಠೆಯಾಗಿ ಸ್ವೀಕರಿಸಿ, ನಾಡು ಮೆಚ್ಚುವಂಥ ಬಜೆಟ್‌ ಮಂಡಿಸಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.

Advertisement

ಗಾಂಧಿ ಭವನದಲ್ಲಿ ಶನಿವಾರ ಪ್ರೊ| ಬಿ. ಕೃಷ್ಣಪ್ಪ ಟ್ರಸ್ಟ್‌ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ರುದ್ರಪ್ಪ ಹನಗವಾಡಿ ಅವರ “ಋಣದ ಗಣಿ’ ಕೃತಿ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಮನುಷ್ಯನಿಗೆ ಛಲವಿರಬೇಕು, ಅಪಮಾನಗಳನ್ನು ಏಣಿಯಾಗಿ ಮಾಡಿಕೊಳ್ಳಬೇಕು ಎಂದರು.

ಹಿಂದೆ ಜನರು ಅನಕ್ಷರಸ್ಥರಾಗಿದ್ದಾಗಲೂ ಇಷ್ಟೊಂದು ಜಾತಿ ತಾರತಮ್ಯ ಇರಲಿಲ್ಲ. ಆದರೆ ಇಂದು ಶೇ. 78ರಷ್ಟು ಸಂಖ್ಯೆಯಲ್ಲಿ ಅಕ್ಷರಸ್ಥರಿದ್ದಾರೆ. ಆದರೆ ಹಿಂದಿಗಿಂತಲೂ ಅಧಿಕ ಸಂಖ್ಯೆಯಲ್ಲಿ ಸಮಾಜದಲ್ಲಿ ಜಾತಿ ತಾರತಮ್ಯ ಇದೆ. ವ್ಯಕ್ತಿಯ ಯೋಗ್ಯತೆಯನ್ನು ಜಾತಿಯಿಂದ ಅಳೆಯುವುದು ಒಳ್ಳೆಯದಲ್ಲ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next