Advertisement

ಬಿಟ್ ಕಾಯಿನ್ ಪ್ರಕರಣದಲ್ಲಿರುವ ಪ್ರಭಾವಿ ನಾಯಕರ ಹೆಸರನ್ನು ಸಿಎಂ ಬಹಿರಂಗಪಡಿಸಲಿ:ಸಿದ್ದರಾಮಯ್ಯ

09:08 PM Nov 12, 2021 | Team Udayavani |

ಹುಬ್ಬಳ್ಳಿ: ಬಿಟ್ ಕಾಯಿನ್ ಪ್ರಕರಣದಲ್ಲಿದ್ದವರ ಹೆಸರುಗಳನ್ನು ಮುಖ್ಯಮಂತ್ರಿಯವರು ಯಾಕೆ ಮುಚ್ಚಿಡುತ್ತಿದ್ದಾರೆ. ಸತ್ಯ ಹೇಳಿದರೆ ಸರ್ಕಾರಕ್ಕೆ ಧಕ್ಕೆ ಆಗೋ ಭಯ ಇರಬಹುದು ಎಂದು ವಿಧಾನಸಭೆ ವಿಪಕ್ಷ ನಾಯಕ  ಸಿದ್ದರಾಮಯ್ಯ ಆರೋಪಿಸಿದರು.

Advertisement

ಶುಕ್ರವಾರ  ಸುದ್ದಿಗಾರರೊಂದಿಗೆ ಮಾತನಾಡಿದ ಅವರು,  ಸಿಎಂ ಪ್ರಕರಣವನ್ನು ಯಾಕೆ‌ ಮುಚ್ಚಿ ಹಾಕುವ ಯತ್ನ ಮಾಡುತ್ತಿದ್ದಾರೆ. ಈ ಪ್ರಕರಣದಲ್ಲಿ ಪ್ರಭಾವಿ ನಾಯಕರು ಇದ್ದಾರೆ ಅಂತಾ ಗೊತ್ತು. ಸಿಎಂ ಮೊದಲು ಹೆಸರುಗಳನ್ನು ಹೇಳಲಿ ಎಂದರು.

ಪ್ರಕರಣದ ತನಿಖೆಯನ್ನು ಕೇಂದ್ರ ತನಿಖಾ ಸಂಸ್ಥೆಗೆ ಕೊಟ್ಟಿದ್ದೇವೆ ಎಂದು ಸಿಎಂ  ಹೇಳಿದ್ದಾರೆ. ನ್ಯಾಯಾಂಗ ತನಿಖೆ ಅಗಲಿ. ಇಲ್ಲವೆ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ತನಿಖೆ ಆಗಲಿ. ಸಿಎಂ ಕಾಂಗ್ರೆಸ್ ನವರು ಇದ್ದಾರೆ ಅಂತಾರೆ. ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಯಾರೇ ಇರಲಿ ತನಿಖೆ ಆಗಲಿ. ಸಿಎಂ‌ ಸುಳ್ಳು ಹೇಳ್ತಾರೋ. ನಿಜ ಹೇಳ್ತಾರೋ ಗೊತ್ತಿಲ್ಲ. ಬಿಟ್ ಕಾಯಿನ್ ಪ್ರಕರಣದ ಬಗ್ಗೆ ಪ್ರಧಾನಿಗಳು ಇಷ್ಟೊಂದು ಲಘುವಾಗಿ ಮಾತನಾಡಬಾರದು. ಸತ್ಯ ಹೊರ ಬರಬೇಕು. ಬಿಟ್ ಕಾಯಿನ್ ವಿಚಾರದಲ್ಲಿ ಕೋಟ್ಯಂತರ ರೂಪಾಯಿ ವಹಿವಾಟು ನಡೆದಿದೆ ಅನ್ನೋದಾದರೆ ತನಿಖೆಯಾಗಲಿ.

ಪ್ರಿಯಾಂಕ ಖರ್ಗೆ ಬಳಿ ಏನು ಮಾಹಿತಿ ಇದೆ ನನಗೆ ಗೊತ್ತಿಲ್ಲ. ಮಾತನಾಡಿ ತಿಳಿದುಕೊಳ್ಳುವೆ.  ಮೋದಿಯವರ ಹೆಸರಿನಲ್ಲಿ ಸಿಎಂ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next