ಸಿದ್ದಾಪುರ: ಉಳ್ಳೂರು-74 ಗ್ರಾಮದ ತೆಂಕೊದ್ದು ಕುಮಾರ ಶೆಟ್ಟಿ ಅಕ್ರಮಕೂಟ ಕಟ್ಟಿಕೊಂಡು ಮನೆಯ ಒಳಗೆ ಅಕ್ರಮ ಪ್ರವೇಶ ಮಾಡಿ, ಕೊಲೆ ಮಾಡುವ ಉದ್ದೇಶದಿಂದ ಮಾರಕ ಅಸ್ತ್ರದಿಂದ ತಲೆಗೆ ಹೊಡೆದಿದ್ದಾರೆ. ತಪ್ಪಿಸಲು ಬಂದ ಪತ್ನಿ ರುಕ್ಮಿಣಿ ಶೆಟ್ಟಿ ಅವರಿಗೂ ಹಲ್ಲೆ ನಡೆಸಿದ್ದಾರೆ ಎಂದು ತೆಂಕೊದ್ದು ಜಯರಾಮ ಶೆಟ್ಟಿ (46) ಅವರು ಪೊಲೀಸರಿಗೆ ದೂರು ನೀಡಿದ್ದಾರೆ.
ಆರೋಪಿ ತೆಂಕೊದ್ದು ಕುಮಾರ ಶೆಟ್ಟಿಗೂ ಜಯರಾಮ ಶೆಟ್ಟಿ ಅವರ ಮಧ್ಯೆ ಮನಸ್ತಾಪ ಇತ್ತು. ಈ ಹಿನ್ನಲೆಯಲ್ಲಿ ಕುಮಾರ ಶೆಟ್ಟಿಯ ಅಳಿಯ ಪ್ರಸಾದ ಶೆಟ್ಟಿ, ಕುಮಾರ ಶೆಟ್ಟಿ, ಸಂತೋಷ ಕೊಠಾರಿ ಮತ್ತು ಇತರ 4 ಮಂದಿ ಸೇರಿ ಡಿ. 4ರ ರಾತ್ರಿ 8.30ರ ಸಮಯದಲ್ಲಿ ಅಕ್ರಮವಾಗಿ ಜಯರಾಮ ಶೆಟ್ಟಿ ಅವರ ಮನೆಯ ಒಳಗೆ ಪ್ರವೇಶಿಸಿದ್ದರು. ಪ್ರಸಾದ ಶೆಟ್ಟಿ ಮತ್ತು ಸಂತೋಷ್ ಕೊಠಾರಿ ಅವರು ಯಾವುದೂ ಆಯುಧದಿಂದ ಮನೆಯ ಒಳಗಿದ್ದ ಜಯರಾಮ ಶೆಟ್ಟಿ ಅವರ ತಲೆಗೆ ಹೊಡೆದಿದ್ದಾರೆ. ತಪ್ಪಿಸಲು ಬಂದ ಜಯರಾಮ ಶೆಟ್ಟಿಯ ಪತ್ನಿ ರುಕ್ಮಿಣಿ ಶೆಟ್ಟಿ ಅವರಿಗೂ ಹಲ್ಲೆ ನಡೆಸಿದ್ದರು. ಬೊಬ್ಬೆ ಕೇಳಿ ಮನೆಯ ಒಳಗಿದ್ದವರು ಹೊರ ಬಂದಾಗ ಆರೋಪಿಗಳು ಜೀವ ಬೆದರಿಕೆ ಹಾಕಿ ಓಡಿ ಹೋಗಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಗಂಭೀರವಾಗಿ ಗಾಯಗೊಂಡ ಜಯರಾಮ ಶೆಟ್ಟಿ ಮತ್ತು ರುಕ್ಮಿಣಿ ಶೆಟ್ಟಿ ಕುಂದಾಪುರ ಸರಕಾರಿ ಆಸ್ಪತ್ರೆಯಲ್ಲಿ ಒಳ ರೋಗಿಯಾಗಿ ದಾಖಲಾಗಿದ್ದಾರೆ. ಶಂಕರನಾರಾಯಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.