Advertisement
ಧರ್ಮಸ್ಥಳ ಕ್ಷೇತ್ರದ ಪರಮ ಭಕ್ತರಾಗಿರುವ ಸಿದ್ಧಾಪುರದ ಬಿ. ನಾಗು ಕುಲಾಲ ಅವರು 2000ರಲ್ಲಿ ದೇವರನ್ನು ಸ್ಮರಿಸಿ, ಕಷ್ಟಪಟ್ಟು ಸಂಪಾದಿಸಿದ ಹಣದಲ್ಲಿ ಒಂದು ಲಾರಿಯನ್ನು ಖರೀದಿಸಿದ್ದರು. ಅದಕ್ಕೆ ಶ್ರೀ ಮಂಜುನಾಥ ಎಂದು ಹೆಸರು ಇಟ್ಟಿದ್ದರು.
Related Articles
Advertisement
ವಿದ್ಯೆ ಇಲ್ಲದಿದ್ದರು, ದೇವರ ಅನುಗ್ರಹದಿಂದ ಒಂದು ಹಂತಕ್ಕೆ ಬೆಳೆಯಲು ಕಾರಣವಾಗಿದೆ. ಕಡು ಬಡತನದಿಂದ ಬೆಳೆದು ಬಂದ ತಾನೂ ಇಂದು ಸಮಾಜದಲ್ಲಿ ಒಂದು ಸ್ಥಾನ ಸಿಕ್ಕಿದೆ. ಮೊದಲ ಲಾರಿ ಖರೀದಿ ಮಾಡುವಾಗಲೇ ಮಾಡಿದ ಸಂಕಲ್ಪದಂತೆ ಲಾರಿಯನ್ನು ಕ್ಷೇತ್ರಕ್ಕೆ ಸಮರ್ಪಿಸಿದ್ದೇನೆ ಎನ್ನುತ್ತಾರೆ ಬಿ. ನಾಗು ಕುಲಾಲ.
ನಾಲ್ಕೂ ವಾಹನಗಳಿಗೆ ಧರ್ಮಸ್ಥಳದಲ್ಲೇ ಪೂಜೆಓದು ಬರಹ ಬಾರದ ಬಿ. ನಾಗು ಕುಲಾಲ ಸಿದ್ದಾಪುರ ಹಲವಾರು ವರ್ಷಗಳಿಂದ ದೀಪಾವಳಿಯ ಅಮವಾಸ್ಯೆಯಂದು ಶ್ರೀ ಕ್ಷೇತ್ರದಲ್ಲಿ ತಮ್ಮ 4 ವಾಹನಗಳನ್ನು ವಾಹನ ಪೂಜೆ ಮಾಡಿಸುತ್ತಾರೆ. ಕ್ಷೇತ್ರಕ್ಕೆ ಹೋಗುವಾಗ ವಾಹನಗಳ ತುಂಬ ಕೆಂಪುಕಲ್ಲುಗಳನ್ನು ತುಂಬಿಸಿಕೊಂಡು ಹೋಗುತ್ತಾರೆ. ನಿರಂತರ 25 ವರ್ಷಗಳಿಂದ ಧರ್ಮಸ್ಥಳ ಮೇಳದ ಆಟ ಆಡಿಸುತ್ತಿದ್ದಾರೆ. 25ನೇ ವರ್ಷ ಡಾ. ಡಿ. ವೀರೇಂದ್ರ ಹೆಗ್ಗಡೆಯವರೇ ಆಟಕ್ಕೆ ಬಂದು ಹರಸಿದ್ದರು.