Advertisement
ಶ್ರೀಗಳ ಅಪೇಕ್ಷೆಯಂತೆ ಮಠಕ್ಕೆ ಕರೆದು ಕೊಂಡು ಬರಲಾಗಿದ್ದು, ಹಳೇ ಮಠದಲ್ಲಿ ಚಿಕಿತ್ಸೆ ಮುಂದುವರಿಯಲಿದೆ. ಸದ್ಯ ಆರೋಗ್ಯದಲ್ಲಿ ಯಾವುದೇ ಬದಲಾವಣೆ ಕಂಡು ಬಂದಿಲ್ಲದೇ ಇರುವುದರಿಂದ ಭಕ್ತರಿಗೆ ಶ್ರೀಗಳ ದರ್ಶನಕ್ಕೆ ಅವಕಾಶ ನೀಡುತ್ತಿಲ್ಲ.ಜತೆಗೆ ಮಠದ ಸುತ್ತಲೂ ಭಾರೀ ಪೊಲೀಸ್ ಬಂದೋಬಸ್ತ್ ಏರ್ಪಡಿಸ ಲಾಗಿದೆ. ಶ್ರೀಗಳ ಆಪ್ತ ವೈದ್ಯ ಪರಮೇಶ್ ಮಾತ ನಾಡಿ, ದೂರ ಊರು ಗಳಿಂದ ಶ್ರೀಗಳ ದರ್ಶನಕ್ಕಾಗಿ ಮಠಕ್ಕೆ ಬರ ಬೇಡಿ. ಚಿಕಿತ್ಸೆ ನೀಡಲು ತೊಂದರೆಯಾಗುತ್ತದೆ ಎಂದು ಮನವಿ ಮಾಡಿದ್ದಾರೆ.
Related Articles
ಸ್ವಾಮೀಜಿಯವರ ಆರೋಗ್ಯದಲ್ಲಿ ಯಾವುದೇ ಬದಲಾವಣೆ ಇಲ್ಲ. ಆರೋಗ್ಯ ಸ್ಥಿರವಾಗಿದೆ ಎಂದರು. ಶ್ರೀಗಳಲ್ಲಿ ಕಂಡುಬಂದಿದ್ದ ಸೋಂಕು ಕಡಿಮೆಯಾಗಿದೆ. ಇನ್ನೆರಡು ದಿನಗಳಲ್ಲಿ ಅವರನ್ನು ಆಸ್ಪತ್ರೆಯಿಂದ ಮಠಕ್ಕೆ ಕರೆತರಲು ಉದ್ದೇಶಿಸಲಾಗಿತ್ತು. ಆದರೆ, ಸ್ವಾಮೀಜಿ ಮಂಗಳವಾರ ರಾತ್ರಿಯೇ ಮಠಕ್ಕೆ ಹಿಂದಿರುಗುವ ಇಂಗಿತ ವ್ಯಕ್ತಪಡಿಸಿದ್ದರಿಂದ ಬುಧವಾರ ಬೆಳಗಿನ ಜಾವ 4ಗಂಟೆಗೆ ಶ್ರೀಗಳನ್ನು ಮಠಕ್ಕೆ ಸ್ಥಳಾಂತರಿಸಲಾಗಿದೆ ಎಂದು ಹೇಳಿದರು. ಶ್ರೀಗಳ ಆರೋಗ್ಯ ತಪಾಸಣೆ ಮಾಡಲಾಗಿದೆ. ಶ್ರೀಗಳ ನಾಡಿ ಮಿ ಡಿತ ಸಹ ಜ ಆಗಿಯೇ ಇದೆ. ಆದರೆ, ಶ್ವಾಸಕೋಶದಲ್ಲಿ ನೀರು ಬರುವುದು ನಿಂತಿಲ್ಲ ಎಂದರು.
Advertisement
ಮಠಕ್ಕೆ ಗಣ್ಯರ ಭೇಟಿ: ಸಿದ್ಧಗಂಗಾ ಮಠಕ್ಕೆ ಮಾಜಿ ಸಚಿವ ವಿ. ಸೋಮಣ್ಣ ಭೇಟಿ ನೀಡಿ ಶ್ರೀಗಳ ಆರೋಗ್ಯ ವಿಚಾರಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿ,ಶ್ರೀಗಳು ಆಸ್ಪತ್ರೆಯಿಂದ ಮಠಕ್ಕೆ ಹೋಗ ಬೇಕೆಂದು ಒತ್ತಡ ಹಾಕಿದ್ದರಿಂದ ಮಠಕ್ಕೆ ಶಿಫ್ಟ್ ಮಾಡಲಾಗಿದೆ ಎಂದರು. ಮಾಜಿ ಪ್ರಧಾನಿ ದೇವೇಗೌಡ, ಮಾಜಿ ಸಿಎಂ ಸಿದ್ದ ರಾಮಯ್ಯ ಯದುವೀರ ಒಡೆಯರ್, ಮಾಜಿ ಸಚಿವ ಎಚ್.ಕೆ.ಪಾಟೀಲ್ ಹಾಗೂ ಹಲವಾರು ಗಣ್ಯರು ಮಠಕ್ಕೆ ಭೇಟಿ ನೀಡಿ ಶ್ರೀಗಳ ಆರೋಗ್ಯ ವಿಚಾರಿಸಿದರು.
ಶ್ರೀಗಳು ಚೇತರಿಕೆಕಾಣುತ್ತಿದ್ದಾರೆ. ದೂರ ದೂರದ ಊರುಗಳಿಂದ ಭಕ್ತರು ಯಾರೂ ಬರಬಾರದು. ಇಲ್ಲಿಗೆ ಬಂದು ಶ್ರೀಗಳ ದರ್ಶನ ವಾಗಲಿಲ್ಲ ಎಂದು ಬೇಸರ ಮಾಡಿಕೊಳ್ಳ ಬಾರದು. ಶ್ರೀಗಳು ಅದನ್ನೇ ಹೇಳುತ್ತಾರೆ. ಶ್ರೀಗಳ ಚೇತರಿಕೆ ಯಾದ ಮೇಲೆ ಎಲ್ಲರಿಗೂ ದರ್ಶನಕ್ಕೆ ಅವಕಾಶ ನೀಡುತ್ತೇವೆ. ಇಲ್ಲಿ ಹೆಚ್ಚು ಭಕ್ತರು ಬಂದರೆ ತೊಂದರೆ ಯಾಗುತ್ತದೆ.
● ಡಾ. ಪರಮೇಶ್, ಶ್ರೀಗಳ ಆಪ್ತವೈದ್ಯ