Advertisement

ಮಾತೆಯರಿಂದ ಉಳಿದಿದೆ ಸಂಸ್ಕೃತಿ

04:48 PM Sep 30, 2019 | Naveen |

ಸಿಂದಗಿ: ದೇಶದ ಸಂಸ್ಕೃತಿ ಉಳಿಯುವಲ್ಲಿ ಮಾತೆಯರ ಪಾತ್ರ ಹಿರಿಯದಾಗಿದೆ ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ ಮುತಾಲಿಕ ಹೇಳಿದರು.

Advertisement

ರವಿವಾರ ಪಟ್ಟಣದ ಸಂಗಮೇಶ್ವರ ದೇವಸ್ಥಾನ ಆವರಣದಲ್ಲಿ ಶ್ರೀರಾಮಸೇನೆ ಮಹಿಳಾ ವಿಭಾಗ ದುರ್ಗಾಸೇನೆ ಹಮ್ಮಿಕೊಂಡಿದ್ದ ದ್ವಿತೀಯ ಸಮಾವೇಶ, ಮಹಿಳೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಜಗತ್ತಿನಲ್ಲಿ ದೇಶಕ್ಕೆ ಮಾತೆಯ ಸ್ಥಾನ ನೀಡಿದ್ದು ಭಾರತೀಯರು. ನಮ್ಮ ದೇಶದ ಪ್ರಾಚೀನ ಸಂಸ್ಕೃತಿ ಹೊಂದಿದೆ. ಶಾಸ್ತ್ರೀಯವಾಗಿ, ವೈಜ್ಞಾನಿಕವಾಗಿ ಇರುವ ದೇಶವಾಗಿದೆ. ದೇಶದ ಸಂಸ್ಕೃತಿ, ಆಚಾರ, ವಿಚಾರ, ಹಬ್ಬಗಳ ಆಚರಣೆಗಳು ಉಳಿದಿದ್ದು ಹಳ್ಳಿಗರಿಂದ, ಮಠಗಳಲಿನ ಸ್ವಾಮೀಜಿಗಳಿಂದ ಹಾಗೂ ಮಾತೆಯರಿಂದ ಎಂದು ಹೇಳಿದರು.

ಪ್ರಸ್ತುತ ದಿನಗಳಲ್ಲಿ ಮಹಿಳೆಯರ ಮೇಲೆ, ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ, ಅನ್ಯಾಯದಂತ ರಾಕ್ಷಸಿಯ ಗುಣಗಳು ತಾಂಡವಾಡುತ್ತಿವೆ. ಇವುಗಳನ್ನು ಮೆಟ್ಟಿ ನಿಲ್ಲುವಂತ ಶಕ್ತಿ ಮಾತೆಯರು ಬೆಳೆಸಿಕೊಳ್ಳಬೇಕು. ಮಾತೆಯರ ರಕ್ಷಣೆ ಶ್ರೀರಾಮ ಸೇನೆ ಜವಾಬ್ದಾರಿಯಾಗಿದೆ. ನಿಮ್ಮ ಬೆನ್ನೆಲುಬಾಗಿ ನಿಮ್ಮ ರಕ್ಷಣೆಗಾಗಿ ನಾವು ಕಂಕಣಬದ್ದರಾಗಿ ನಿಲ್ಲುತ್ತೇವೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಶ್ರೀರಾಮಸೇನೆ ಬಳ್ಳಾರಿ ಜಿಲ್ಲಾಧ್ಯಕ್ಷ ಸಂಜೀವ ಮರಡಿ ಹಾಗೂ ಕಾರ್ಯಕರ್ತರು ಪ್ರಮೋದ ಮುತಾಲಿಕ ಅವರ ಪಾದಪೂಜೆ ಮಾಡಿ ಸಂಘಟನೆಗಾಗಿ ಕಾರು ಕಾಣಿಕೆಯಾಗಿ ನೀಡಿದರು. ನಂತರ ಅವರಿಗೆ ತುಲಾಭಾರ ಮಾಡಿದರು.

Advertisement

ತುಲಾಭಾರದ ಹಣವನ್ನು ಸಂಘಟನೆಗಾಗಿ ಮುತಾಲಿಕ ಅವರಿಗೆ ನೀಡಿದರು. 1,001 ಮಹಿಳೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಜರುಗಿತು. ಡಾ| ಸಂಗಮೇಶ ಪಾಟೀಲ, ದುರ್ಗಾಸೇನಾ ಮಹಿಳೆಯರಿಗೆ ಹಾಗೂ ಜಾನಕಿಬಾಯಿ ವಾಗ್ಮೋರೆ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು.

ನವ ದುರ್ಗೆಯರ ಹಾಗೂ ಶಿವಾಜಿ ವೇಷಧಾರಿ ಮಕ್ಕಳಿಗೆ ಸನ್ಮಾನಿಸಲಾಯಿತು. ಹಿಂದೂ ಜನಜಾಗೃತಿಯ ಪ್ರಮುಖರಾದ ವಿದುಲಾ ಹಳದಿಪುರ, ಶ್ರೀರಾಮಸೇನೆ ರಾಜ್ಯ ಕಾರ್ಯದರ್ಶಿ ಗಂಗಾಧರ ಕುಲಕರ್ಣಿ ಮಾತನಾಡಿ, ದೇಶದಲ್ಲಿ ಒಂದು ಕಡೆಗೆ ಭಯೋತ್ಪಾದನೆ, ಪ್ರತ್ಯೇಕವಾದಿಗಳು ಇನ್ನೊಂದು ಕಡೆಗೆ ಮತಾಂಧರು ನಮ್ಮ ಸಂಸ್ಕೃತಿಯನ್ನು ಹಾಳು ಮಾಡುತ್ತಿದ್ದಾರೆ. ಆದ್ದರಿಂದ ಮಾತೆಯರು ಜಾಗೃತರಾಗಬೇಕು. ನಾವು ಪಾಶ್ಚಾತ ಸಂಸ್ಕೃತಿಗೆ ಮಾರು ಹೋಗಬಾರದು. 14 ನಮೂನೆಗಳಲ್ಲಿರುವ ಜಿಹಾದ್‌ ಬಗ್ಗೆ ನಾವು ಎಚ್ಚರವಿರಬೇಕು. ಅದರಲ್ಲಿ ಕವ್‌ ಜಿಹಾದ್‌ದಿಂದ ನಾವು ಅತಿ ಎಚ್ಚರವಿರಬೇಕು ಎಂದು ಹೇಳಿದರು.

ಶ್ರೀರಾಮಸೇನೆ ಜಿಲ್ಲಾಧ್ಯಕ್ಷ ರಾಕೇಶ ಮಠ, ಬಳ್ಳಾರಿ ಜಿಲ್ಲಾಧ್ಯಕ್ಷ ಸಂಜೀವ ಮರಡಿ, ನೀಲಕಂಠ ಕಂದಗಲ್‌, ಶೈಲಜಾ ಸ್ಥಾವರಮಠ ವೇದಿಕೆಯಲ್ಲಿದ್ದರು. ರಾಜಶ್ರೀ ಪಾಟೀಲ, ಹೊನ್ನಮ್ಮ ಹಿರೇಮಠ, ಗುರುಪ್ರೀಯಾ ಪುರಾಣಿಕ, ಶಿಲ್ಪಾ ಹೂಗಾರ, ಶೈಲಜಾ ಮಣೂರ, ನಿವೇದಿತಾ ಸ್ಥಾವರಮಠ ಸೇರಿದಂತೆ ಸಾವಿರಾರು ಮಾತೆಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next