Advertisement
ಏನಿದು ಹೊಸ ಪ್ರಕರಣಗಳು?ಚೀನಾದ ಬೀಜಿಂಗ್ ಮತ್ತು ಲಿಯಾನಾನಿಂಗ್ ಪ್ರಾಂತ್ಯಗಳಲ್ಲಿ ಹೊಸತಾಗಿ ನೂರಾರು ಮಕ್ಕಳಲ್ಲಿ ಹೊಸ ರೀತಿಯ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿದೆ. ಅಲ್ಲಿನ ಶಾಲೆಯ ಶಿಕ್ಷಕರಲ್ಲಿಯೂ ಈ ಸಮಸ್ಯೆ ಕಂಡದ್ದೂ ಅಚ್ಚರಿಕೆ ಕಾರಣವಾಗಿದೆ. ಶ್ವಾಸಕೋಶದಲ್ಲಿ ಉರಿ, ತುಂಬ ಪ್ರಮಾಣದ ಜ್ವರ ಇದೆ. ಆದರೆ ಕೆಮ್ಮು ಇಲ್ಲದಿರುವುದು ಹೊಸ ರೋಗದ ಲಕ್ಷಣಗಳು.
ಸಣ್ಣ ಮಕ್ಕಳಿಗೆ ಸಾಮಾನ್ಯವಾಗಿ ಬಾಧಕವಾಗುವ ಮೈಕ್ರೋಪ್ಲಾಸ್ಮಾ ನ್ಯುಮೋನಿಯಾ (ಞycಟಟlಚsಞಚ ಟnಛಿuಞಟnಜಿಚಛಿ)ಅಥವಾ “ವಾಕಿಂಗ್ ನ್ಯುಮೋನಿಯಾ’ ಎಂಬ ಸಾಮಾನ್ಯ ಬ್ಯಾಕ್ಟೀರಿಯಾ ಆಧಾರಿತ ಸಮಸ್ಯೆಯೇ ಈ ಸಮಸ್ಯೆಗೆ ಕಾರಣ ಎನ್ನುವ ಅಂದಾಜು ವೈದ್ಯಕೀಯ ಕ್ಷೇತ್ರದ ತಜ್ಞರದ್ದಾಗಿದೆ. ಸಾಮಾನ್ಯವಾಗಿ ಇದು ಸಣ್ಣ ಪ್ರಮಾಣದಲ್ಲಿ ಬಾಧಿಸುತ್ತದೆ ಹೌದಾದರೂ, ಪರಿಸ್ಥಿತಿ ಕೈಮೀರಿದರೆ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಳ್ಳಬೇಕು. ಚೀನಾದಲ್ಲಿ ಈಗಿನ ಪರಿಸ್ಥಿತಿ
ಹೊಸ ಸಮಸ್ಯೆ ಕಾಣಿಸಿಕೊಂಡ ಬಳಿಕ ಬೀಜಿಂಗ್ ಮತ್ತು ಲಿಯನಾನಿಂಗ್ ಪ್ರಾಂತ್ಯಗಳ ಆಸ್ಪತ್ರೆಗಳಲ್ಲಿ ಮಕ್ಕಳು ಚಿಕಿತ್ಸೆಗೆ ಆಗಮಿಸುವ ಸಂಖ್ಯೆ ಹೆಚ್ಚಾಗಿದೆ. ಆದರೆ, ಹೊಸ ಸಮಸ್ಯೆಗೆ ಕಾರಣ ಏನು ಎಂಬ ಬಗ್ಗೆ ಅಲ್ಲಿನ ಸರ್ಕಾರ ಮಾತನಾಡಿಲ್ಲ.
Related Articles
ವಿಶ್ವ ಆರೋಗ್ಯ ಸಂಸ್ಥೆ ನೀಡಿದ ಸದ್ಯದ ಮಾಹಿತಿ ಪ್ರಕಾರ ಎಚ್9ಎನ್2 ಮಾನವನಿಂದ ಮಾನವನಿಗೆ ಹರಡುವ ಸಾಧ್ಯತೆಗಳ ಪ್ರಮಾಣ ಕಡಿಮೆ. ಹೀಗಾಗಿ, ಆ ಸಮಸ್ಯೆಯಿಂದ ಜೀವ ಹಾನಿ ಆಗುವ ಸಾಧ್ಯತೆಗಳು ಇಲ್ಲ.
Advertisement
ಜಗತ್ತಿನ ಇತರ ಭಾಗಗಳಲ್ಲಿಚೀನಾದಲ್ಲಿ ಮಾತ್ರ ಸದ್ಯಕ್ಕೆ ಈ ಸಮಸ್ಯೆ ದೃಢಪಟ್ಟಿದೆ. ಭಾರತವೂ ಸೇರಿದಂತೆ ಇತರ ರಾಷ್ಟ್ರಗಳಲ್ಲಿ ಎಚ್9ಎನ್2 ಪ್ರಕರಣಗಳು ದೃಢಪಟ್ಟಿಲ್ಲ. ಕೇಂದ್ರ ಸರ್ಕಾರದ ಪ್ರಕಾರ ಇದು ಕೊರೊನಾದಂಥ ಸಮಸ್ಯೆಯಲ್ಲ. ಹಲವು ಬ್ಯಾಕ್ಟೀರಿಯಾಗಳ ಸಮ್ಮಿಳನದಿಂದ ಹೊಸ ಪರಿಸ್ಥಿತಿ ಉಂಟಾಗಿದೆ ಎನ್ನುತ್ತಾರೆ ಭಾರತದ ತಜ್ಞರು.