Advertisement

ಕುತ್ಯಾರು:ಶ್ಯಾಮ್‌ಪ್ರಸಾದ್‌ ಮುಖರ್ಜಿ ಜನ್ಮ ದಿನಾಚರಣೆ;ಸಸಿ ವಿತರಣೆ

03:32 PM Jul 06, 2021 | Team Udayavani |

ಶಿರ್ವ: ರಾಜ್ಯ ಮಹಿಳಾ ಮೋರ್ಚಾದ ಸೂಚನೆಯಂತೆ ಜನಸಂಘದ ಸ್ಥಾಪಕಾಧ್ಯಕ್ಷ ಶ್ಯಾಮ್‌ಪ್ರಸಾದ್‌ ಮುಖರ್ಜಿ ಜನ್ಮ ದಿನಾಚರಣೆ ಮತ್ತು ಗ್ರಾಮೀಣ ಮಹಿಳೆಯರಿಗೆ ಸಸಿ ವಿತರಣೆ ಸಮಾರಂಭವು ಎಲ್ಲೂರು ಜಿ.ಪಂ. ಮಾಜಿ ಸದಸ್ಯೆ,ರಾಜ್ಯ ಮಹಿಳಾ ಮೋರ್ಚಾ ಕಾರ್ಯದರ್ಶಿ ಶಿಲ್ಪಾ ಜಿ.ಸುವರ್ಣ ಅವರ ನೇತೃತ್ವದಲ್ಲಿ ಕುತ್ಯಾರು ವಿದ್ಯಾದಾಯಿನಿ ಹಿ.ಪ್ರಾ. ಶಾಲೆಯಲ್ಲಿ ಜು. 6 ರಂದು ನಡೆಯಿತು.

Advertisement

ಕಾಪು ಶಾಸಕ ಲಾಲಾಜಿ ಆರ್‌. ಮೆಂಡನ್‌ ಶ್ಯಾಮ್‌ಪ್ರಸಾದ್‌ ಮುಖರ್ಜಿಅವರ ಭಾವಚಿತ್ರಕ್ಕೆ ದೀಪ ಬೆಳಗಿಸಿ,ಪುಷ್ಪಾರ್ಚನೆ ಮಾಡಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಸ್ವಾತಂತ್ರÂಪೂರ್ವದಲ್ಲಿ ಬ್ರಿಟಿಷರ ವಿರುದ್ಧ ಹೋರಾಡಿ ದೇಶೀಯ ಆಚಾರ ವಿಚಾರಗಳನ್ನು ಬೆಳೆಸಿಕೊಂಡು ಬಂದ ಶ್ಯಾಮ್‌ಪ್ರಸಾದ್‌ ಮುಖರ್ಜಿಅವರ ಸಂಸ್ಮರಣೆಯ ದಿನದಂದು ಪರಿ

ಸರಸ್ನೇಹಿಯಾಗಿ ಸಸಿ ನೆಡುವ ಮೂಲಕ ಕ್ರಾಂತಿಕಾರಿ ಆಂದೋಲನ ಪ್ರತೀ ಬೂತ್‌ಮಟ್ಟದಲ್ಲಿ ನಡೆಯುತ್ತಿದೆ ಎಂದು ಹೇಳಿದರು.

ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸದಸ್ಯ ಸುರೇಶ್‌ ಶೆಟ್ಟಿ ಗುರ್ಮೆ ಮಾತನಾಡಿ ಸಿದ್ಧಾಂತಕ್ಕೋಸ್ಕರ ಬದುಕಿದ ಮಹಾನುಭಾವರ ಹೆಸರಿನಲ್ಲಿ ಗಿಡ ನೆಟ್ಟು ,ಗಿಡಗಳನ್ನು ಕಾಪಿಡುವ ಕೆಲಸವನ್ನು ನಮ್ಮ ಮನೆಯಿಂದಲೇ ನಡೆಸುವ ಸಂಕಲ್ಪ ನಡೆಸಬೇಕು ಎಂದು ಹೇಳಿದರು.

ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ವೀಣಾ ಎಸ್‌.ಶೆಟ್ಟಿ ಮತ್ತು ಜಿಲ್ಲಾ ಬಿಜೆಪಿ ಪ್ರ.ಕಾರ್ಯದರ್ಶಿ ಕುತ್ಯಾರು ನವೀನ್‌ ಶೆಟ್ಟಿ ಮಾತನಾಡಿದರು. ಕಾಪು ಕ್ಷೇತ್ರ ಬಿಜೆಪಿ ಅಧ್ಯಕ್ಷ ಶ್ರೀಕಾಂತ್‌ ನಾಯಕ್‌ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

Advertisement

ಜಿಲ್ಲಾ ಬಿಜೆಪಿ ರೈತ ಮೋರ್ಚಾದ ಅಧ್ಯಕ್ಷ ಪ್ರವೀಣ್‌ ಕುಮಾರ್‌ ಗುರ್ಮೆ,ಮಹಾಶಕ್ತಿ ಕೇಂದ್ರದ ಪ್ರಮುಖ ಗಣೇಶ್‌ ಶೆಟ್ಟಿ ಪೈಯ್ನಾರು,ಹಿರಿಯರಾದ ಶಂಭುದಾಸ ಗುರೂಜಿ,ಪ್ರಮುಖರಾದ ರಶ್ಮಿತಾ ಬಾಲಕೃಷ್ಣ ಶೆಟ್ಟಿ,ಕೇಸರಿ ಯುವರಾಜ್‌,ಯೋಗಿನಿ ಶೆಟ್ಟಿ,ಸುಮಾ ಶೆಟ್ಟಿ ಕುರ್ಕಾಲು, ಅನಿಲ್‌ ಶೆಟ್ಟಿ,ಗೋಪಾಲಕೃಷ್ಣ ರಾವ್‌, ಚಂದ್ರಶೇಖರ ಕೋಟ್ಯಾನ್‌,ಎಲ್ಲೂರು ಶಕ್ತಿಕೇಂದ್ರದ ಶಕುಂತಳಾ ವೇದಿಕೆಯಲ್ಲಿದ್ದರು.

ಕುತ್ಯಾರು ಗ್ರಾ.ಪಂ. ಮಾಜಿ ಅಧ್ಯಕ್ಷ ಧೀರಜ್‌ ಶೆಟ್ಟಿ, ಕಾಪು ತಾ.ಪಂ. ಮಾಜಿ ಅಧ್ಯಕ್ಷೆ ಶಶಿಪ್ರಭಾ ಶೆಟ್ಟಿ,ಶಿರ್ವ ಸಿಎ ಬ್ಯಾಂಕಿನ ಅಧ್ಯಕ್ಷ ಕುತ್ಯಾರು ಪ್ರಸಾದ್‌ ಶೆಟ್ಟಿ, ಗ್ರಾ.ಪಂ. ಸದಸ್ಯರು, ಪಕ್ಷದ ಮಹಿಳಾ ಮೋರ್ಚಾ ಪದಾಧಿಕಾರಿಗಳು,ಕಾರ್ಯಕರ್ತರು ಉಪಸ್ಥಿತರಿದ್ದರು.

ರಾಜ್ಯ ಬಿಜೆಪಿ ಮಹಿಳಾ ಮೋರ್ಚಾ ಕಾರ್ಯದರ್ಶಿ ಶಿಲ್ಪಾ ಜಿ.ಸುವರ್ಣ ಸ್ವಾಗತಿಸಿದರು. ಕುತ್ಯಾರು ಗ್ರಾ.ಪಂ. ಅಧ್ಯಕ್ಷೆ ಲತಾ ಎಸ್‌. ಆಚಾರ್ಯ ನಿರೂಪಿಸಿ,ವಂದಿಸಿದರು. ಬಳಿಕ ರಾಜ್ಯ ಮಹಿಳಾ ಮೋರ್ಚಾದ ಅಧ್ಯಕ್ಷೆ ಗೀತಾ ವಿವೇಕಾನಂದ ಅವರ ಸೂಚನೆಯ ಮೇರೆಗೆ ರಾಜ್ಯದ ಪದಾಧಿಕಾರಿಗಳು ಮಂಡಲ ವ್ಯಾಪ್ತಿಯಲ್ಲಿ ಗ್ರಾಮವೊಂದನ್ನು ಆಯ್ಕೆ ಮಾಡಿ ಶ್ಯಾಮ್‌ಪ್ರಸಾದ್‌ ಮುಖರ್ಜಿ ಜನ್ಮದಿನದ ಪ್ರಯುಕ್ತ  ಗ್ರಾಮದ ಮಹಿಳೆಯರಿಗೆ ಸಸಿ ವಿತರಣೆ ಮಾಡುವ ಕಾರ್ಯಕ್ರಮ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next