Advertisement

ಹೊರಬಂತು “ಶುಭಮಂಗಳ” ಟೀಸರ್‌

02:09 PM May 18, 2022 | Team Udayavani |

ಕನ್ನಡದ ಎವರ್‌ಗ್ರೀನ್‌ ಸಿನಿಮಾಗಳ ಪೈಕಿ “ಶುಭ ಮಂಗಳ’ ಸಿನಿಮಾ ಕೂಡ ಒಂದು.  ಚಿತ್ರಬ್ರಹ್ಮ ಪುಟ್ಟಣ್ಣ ಕಣಗಾಲ್‌ ನಿರ್ದೇಶನದಲ್ಲಿ ಮೂಡಿಬಂದ “ಶುಭಮಂಗಳ’ ಸಿನಿಮಾದ ಕಥೆ ಮತ್ತು ಹಾಡುಗಳ ಬಗ್ಗೆ ಇಂದಿಗೂ ಪ್ರೇಕ್ಷಕರು ಮಾತನಾಡಿಕೊಳ್ಳುತ್ತಿರುತ್ತಾರೆ. ಈಗ ಅದೇ “ಶುಭ ಮಂಗಳ’ ಹೆಸರಿನಲ್ಲಿ ಮತ್ತೂಂದು ಸಿನಿಮಾ ತೆರೆಗೆ ಬರುತ್ತಿದೆ.

Advertisement

ಅಂದಹಾಗೆ, ಈಗ ಬರುತ್ತಿರುವ ಹೊಸ “ಶುಭ ಮಂಗಳ’ ಸಿನಿಮಾಕ್ಕೂ ಪುಟ್ಟಣ್ಣ ಕಣಗಾಲರ “ಶುಭ ಮಂಗಳ’ ಸಿನಿಮಾಕ್ಕೂ ಯಾವುದೇ ಸಂಬಂಧವಿಲ್ಲ. ಸಿನಿಮಾದ ಕಥೆಗೆ ಹೊಂದಾಣಿಕೆಯಾಗುತ್ತದೆ ಎಂಬ ಕಾರಣಕ್ಕೆ ಚಿತ್ರತಂಡ ತಮ್ಮ ಹೊಸ ಸಿನಿಮಾಕ್ಕೆ “ಶುಭ ಮಂಗಳ’ ಅಂಥ ಟೈಟಲ್‌ ಇಟ್ಟುಕೊಂಡಿದೆ.

ಇತ್ತೀಚೆಗಷ್ಟೇ ಈ ಹೊಸ “ಶುಭ ಮಂಗಳ’ ಸಿನಿಮಾದ ಟೀಸರ್‌ ಬಿಡುಗಡೆಯಾಗಿದ್ದು, ಸೋಶಿಯಲ್‌ ಮೀಡಿಯಾದಲ್ಲಿ ನೋಡುಗರ ಗಮನ ಸೆಳೆಯುತ್ತಿದೆ.

ಇದನ್ನೂ ಓದಿ: ಡಾರ್ಲಿಂಗ್‌ ಕೃಷ್ಣ “ಶುಗರ್‌ ಫ್ಯಾಕ್ಟರಿ” ಚಿತ್ರೀಕರಣ ಪೂರ್ಣ

ಈ ಹಿಂದೆ “ಸಿಲ್ಕ್ ಬೋರ್ಡ್‌’, “ಮಹಾ ಸಂಪರ್ಕ’ ಸೇರಿದಂತೆ 20ಕ್ಕೂ ಹೆಚ್ಚು ಕಿರುಚಿತ್ರಗಳನ್ನು ನಿರ್ಮಿಸಿರುವ ಸಂತೋಷ್‌ಗೋಪಾಲ್‌ ನಿರ್ದೇಶನದಲ್ಲಿ ತಯಾರಾಗಿರುವ “ಶುಭ ಮಂಗಳ’ ಸಿನಿಮಾದಲ್ಲಿ ಒಂದು ಮದುವೆ ಮನೆಯಲ್ಲಿ ನಡೆಯುವ ಕಾಮಿಡಿ, ಲವ್‌, ಸೆಂಟಿಮೆಂಟ್‌ ಎಳೆಯನ್ನು ಇಟ್ಟುಕೊಂಡು ತೆರೆಮೇಲೆ ತರಲಾಗಿದೆ.

Advertisement

ಇನ್ನು ಸಿದ್ಧಾರ್ಥ್ ಮಾಧ್ಯಮಿಕ, ಮೇಘನಾ ಗಾಂವ್ಕರ್‌, ಹಿತಾ ಚಂದ್ರಶೇಖರ್‌, ರಾಕೇಶ್‌ ಮಯ್ಯ, ಅದಿತಿ ರಾಮ್, ದೀಪ್ತಿ ನಾಗೇಂದ್ರ, ಗೋಪಾಲಕೃಷ್ಣ, ಅರುಣ್‌ ಬಾಲಾಜಿ ಮೊದಲಾದವರು “ಶುಭ ಮಂಗಳ’ದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

ಈಗಾಗಲೇ ಶೂಟಿಂಗ್‌ ಮುಗಿ ಸಿ ರಿಲೀಸ್‌ ಹೊಸ್ತಿಲಿನಲ್ಲಿರುವ “ಶುಭ ಮಂಗಳ’ ಸಿನಿಮಾದಲ್ಲಿ ಐದು ಹಾಡುಗಳಿದ್ದು, ಜೂಡಾ ಸ್ಯಾಂಡಿ ಸಂಗೀತ ಸಂಯೋಜಿಸಿದ್ದಾರೆ. ಚಿತ್ರಕ್ಕೆ ರಾಕೇಶ್‌ ಬಿ. ರಾಜ್‌ ಛಾಯಾಗ್ರಹಣ, ಸಂತೋಷ್‌ ಸಂಕಲನ ಮತ್ತು ನಿರ್ದೇಶನವಿದೆ.

Advertisement

Udayavani is now on Telegram. Click here to join our channel and stay updated with the latest news.

Next