Advertisement

ಪ್ರಶಾಂತ್ ನೀಲ್ ಜೊತೆ ಕೆಲಸ ಮಾಡಿದ ಅನುಭವ ಹಂಚಿಕೊಂಡ ಸಲಾರ್ ನಟಿ ಶ್ರುತಿ ಹಾಸನ್

04:50 PM Sep 24, 2022 | Team Udayavani |

ಕೆಜಿಎಫ್ -2 ಯಶಸ್ಸಿನ ಬಳಿಕ ನಿರ್ದೇಶಕ ಪ್ರಶಾಂತ್ ನೀಲ್ ಅವರು ಇದೀಗ ಮತ್ತೊಂದು ಪ್ಯಾನ್ ಇಂಡಿಯಾ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಅವರ ನಿರ್ದೇಶದನದ, ಬಾಹುಬಲಿ ಖ್ಯಾತಿಯ ನಟ ಪ್ರಭಾಸ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ ‘ಸಲಾರ್’ ಚಿತ್ರದಲ್ಲಿ ಶ್ರುತಿ ಹಾಸನ್ ಅವರೂ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ.

Advertisement

ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ಮೊದಲ ಬಾರಿ ನಟಿಸುತ್ತಿರುವ ಶ್ರುತಿ ಹಾಸನ್ ತಮ್ಮ ನಿರ್ದೇಶಕರ ಬಗ್ಗೆ ಅಭಿಪ್ರಾಯ ಹಂಚಿಕೊಂಡಿದ್ದಾರೆ. “ಪ್ರಶಾಂತ್ ನೀಲ್ ಅವರು ತಮ್ಮ ನಟರೊಂದಿಗೆ ಉತ್ತಮವಾಗಿರುತ್ತಾರೆ. ತಮ್ಮ ಕನಸಿನ ಬಗ್ಗೆ ಸ್ಪಷ್ಟ ಚಿತ್ರಣವನ್ನು ಹೊಂದಿರುವ ನಿರ್ದೇಶಕರ ಜೊತೆ ಕೆಲಸ ಮಾಡಲು ಸಂತೋಷವಾಗುತ್ತದೆ” ಎಂದು ಶ್ರುತಿ ಹೇಳಿದ್ದಾರೆ.

“ಅವರ ಎಲ್ಲಾ ಚಿತ್ರಗಳಲ್ಲಿಯೂ ಇದು ಅವರ ಶಕ್ತಿಯಾಗಿತ್ತು. ಅವರು ಒಂದು ಜಗತ್ತನ್ನು ಸೃಷ್ಟಿ ಮಾಡುತ್ತಾರೆ. ನಾವು ನಟರು ಆ ಜಗತ್ತಿನಲ್ಲಿ ಸೇರಿಕೊಳ್ಳಬೇಕು. ಪ್ರಶಾಂತ್ ಅವರು ಆ್ಯಕ್ಷನ್ ಮತ್ತು ಡ್ರಾಮಾದ ಜೊತೆಗೆ ಉತ್ತಮ ಮಾನವೀಯ ಕಥೆಯನ್ನು ಹೇಳುತ್ತಾರೆ” ಎಂದರು.

ಇದನ್ನೂ ಓದಿ:ವಾಟ್ ಎ ‘ಲವ್‌ ಲಿ’ ಸಿನ್ಮಾ; ರೊಮ್ಯಾಂಟಿಕ್ ಆಕ್ಷನ್ ಚಿತ್ರದಲ್ಲಿ ವಸಿಷ್ಟ- ಸ್ಟೆಫಿ

ಸಲಾರ್ ಚಿತ್ರದಲ್ಲಿ ಪ್ರಭಾಸ್, ಶ್ರುತಿ ಹಾಸನ್ ಜೊತೆಗೆ ಪೃಥ್ವಿರಾಜ್ ಸುಕುಮಾರನ್ ಮತ್ತು ಜಗಪತಿ ಬಾಬು ಕೂಡಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರವು 2023ರ ಸೆಪ್ಟೆಂಬರ್ 28ರಂದು ರಿಲೀಸ್ ಆಗಲಿದೆ.

Advertisement

‘ಸಲಾರ್’ ಮಾತ್ರವಲ್ಲದೆ ತಮ್ಮ ಇತರ ಚಿತ್ರಗಳ ಶೂಟಿಂಗ್ ನಲ್ಲೂ ಶ್ರುತಿ ಬ್ಯೂಸಿಯಾಗಿದ್ದಾರೆ. ಮೆಗಾಸ್ಟಾರ್ ಚಿರಂಜೀವಿ ಮತ್ತು ನಂದಮೂರಿ ಬಾಲಕೃಷ್ಣ ಅವರ ಚಿತ್ರಗಳಲ್ಲಿ ಶ್ರುತಿ ಹಸನ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next